IND W vs SA W: 90 ವರ್ಷಗಳಲ್ಲಿ ಇದೇ ಮೊದಲು; ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಭಾರತ
ಶನಿವಾರ, ಜೂನ್ 29ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು 603 ರನ್ ಕಲೆಹಾಕುವ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಇತಿಹಾಸವನ್ನು ನಿರ್ಮಿಸಿದೆ.
ಟೆಸ್ಟ್ ಪಂದ್ಯದ 2ನೇ ದಿನದದಂದು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನ ಮೊದಲ ದಿನದ ಮುಕ್ತಾಯಕ್ಕೆ ಬಿಟ್ಟಿದ್ದ ಆಟವನ್ನು ಮುಂದುವರೆಸುವುದಿರಿಂದ ವಿಶ್ವದಾಖಲೆ ನಿರ್ಮಿಸುವವರೆಗೆ ಸಾಕ್ಷಿಯಾಯಿತು.

ಇದೀಗ ಭಾರತ ಮಹಿಳಾ ತಂಡವು ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಅತ್ಯಧಿಕ ಮೊತ್ತದ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಿದೆ. ಫೆಬ್ರವರಿ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 575/9 ಡಿಕ್ಲೇರ್ ಮಾಡಿದ್ದಾಗ ಆಸ್ಟ್ರೇಲಿಯಾ ತಂಡ ಈ ದಾಖಲೆಯನ್ನು ಹೊಂದಿತ್ತು.
ಭಾರತ ತಂಡವು ವಿಶ್ವದಾಖಲೆಯನ್ನು ನಿರ್ಮಿಸಲು ಆಸ್ಟ್ರೇಲಿಯಾ ಮೊತ್ತವನ್ನು ಮೀರಿಸಿತು ಮತ್ತು ಗಮನಾರ್ಹವಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಎದುರಾಳಿಯಾಗಿದ್ದು ವಿಶೇಷವೆನಿಸಿತು. 90 ವರ್ಷಗಳ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ದಾಖಲೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನುದ್ದಕ್ಕೂ ಮೇಲುಗೈ ಸಾಧಿಸಿದ ಭಾರತ ಮಹಿಳಾ ತಂಡ ದಾಖಲೆಗಳ ಮಹಾಪೂರವನ್ನೇ ಸೃಷ್ಟಿಸಿತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ, ಶಫಾಲಿ ವರ್ಮಾ ಅವರ ಭರ್ಜರಿ ದ್ವಿಶತಕ ಮತ್ತು ಸ್ಮೃತಿ ಮಂಧಾನ ಅವರ ಅಮೋಘ ಶತಕದ ನೆರವಿನಿಂದ ಭಾರತ ತಂಡಕ್ಕೆ ಬೃಹತ್ ಆರಂಭ ಒದಗಿಸಿದರು.
ಭಾರತೀಯ ಆರಂಭಿಕ ಬ್ಯಾಟರ್‌ಗಳ ಬೃಹತ್ ಶತಕಗಳು ಹರಿಣ ಪಡೆಯನ್ನು ಹಿಮ್ಮೆಟ್ಟಿಸಿದವು. ಈ ಮೂಲಕ ಭಾರತ ತಂಡಕ್ಕೆ ರನ್‌ಗಳು ಸರಾಗವಾಗಿ ಹರಿಯುತ್ತಿದ್ದವು. ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 292 ರನ್‌ಗಳ ದಾಖಲೆಯ ಜೊತೆಯಾಟ ನಿರ್ಮಿಸಿದರು.

ಇದು ಮಹಿಳಾ ಟೆಸ್ಟ್ ಇತಿಹಾಸದಲ್ಲಿ ಆರಂಭಿಕ ಜೋಡಿಯ ಗರಿಷ್ಠ ಮೊತ್ತವಾಗಿದೆ. ಸ್ಮೃತಿ ಮಂಧಾನ 161 ಎಸೆತಗಳಿಂದ 27 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 149 ರನ್ ಗಳಿಸಿ ನಿರ್ಗಮಿಸಿದರೆ, ಶಫಾಲಿ ವರ್ಮಾ 197 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಮೇತ 205 ರನ್‌ಗಳ ಅದ್ಭುತ ದ್ವಿಶತಕ ಬಾರಿಸಿದರು.
ಭಾರತ ತಂಡದಿಂದ ದಾಖಲೆ ಮುರಿಯುವ ಪ್ರದರ್ಶನ
ಶಫಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ 200 ರನ್‌ಗಳ ಗಡಿಯನ್ನು ತಲುಪಿದರು. ಇದು ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಬಂದ ದ್ವಿಶತಕವೆನಿಸಿದೆ.
ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಮೀರಿಸುವ ಮೂಲಕ ಮಹಿಳಾ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತ್ಯಧಿಕ ಸ್ಕೋರ್ ಗಳಿಸುವ ಅವಕಾಶವನ್ನು ಶಫಾಲಿ ವರ್ಮಾ ಕಳೆದುಕೊಂಡರು, ಏಕೆಂದರೆ ರನೌಟ್ ಮೂಲಕ ಪೆವಿಲಿಯನ್ ಸೇರಿದರು.
ಶಫಾಲಿ ವರ್ಮಾ ಔಟಾದ ಹೊರತಾಗಿಯೂ, ಭಾರತ ತಂಡವು ಸ್ಕೋರ್ ಬೋರ್ಡ್‌ನಲ್ಲಿ 525 ರನ್‌ಗಳನ್ನು ಕಲೆಹಾಕಿತು. ಇದು ಮೊದಲ ದಿನದ ಆಟದಲ್ಲಿ ಯಾವುದೇ ತಂಡಕ್ಕೆ ಗರಿಷ್ಠ ಮೊತ್ತವಾಗಿದೆ.
ಶುಭಾ ಸತೀಶ್ 15 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ ಕೂಡ 94 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 55 ರನ್‌ಗಳ ಅರ್ಧಶತಕ ಗಳಿಸಿದರು. ನಂತರ ರಿಚಾ ಘೋಷ್ ಮತ್ತು ಹರ್ಮನ್‌ಪ್ರೀತ್ ಕೌರ್ ಸ್ಕೋರ್‌ಬೋರ್ಡ್ ಹೆಚ್ಚಿಸಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ 115 ಎಸೆತಗಳಲ್ಲಿ 4 ಬೌಂಡರಿಗಳ ಮುಲಕ 69 ರನ್ ಗಳಿಸಿದರೆ, ರಿಚಾ ಘೋಷ್ 90 ಎಸೆತಗಳನ್ನು ಎದುರಿಸಿ 16 ಬೌಂಡರಿಗಳ ಸಮೇತ 86 ರನ್ ಬಾರಿಸಿದರು. ಅಂತಿಮವಾಗಿ ಭಾರತ ತಂಡ 603 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications