ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮತ್ತು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ಭಾನುವಾರ, ಜೂನ್ 24ರಂದು ಇತಿಹಾಸ ನಿರ್ಮಿಸಿದರು. ಮೂರು ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಈ ಸಾಧನೆ ಮಾಡಿದ್ದಾರೆ. ಪಂದ್ಯದ ವೇಳೆ ಸ್ಮೃತಿ ಮಂಧಾನ 83 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 90 ರನ್ ಗಳಿಸಿದರು. ಈ ರನ್‌ಗಳು 108.43ರ ಸ್ಟ್ರೈಕ್ ರೇಟ್‌ನಲ್ಲಿ ಬಂದಿವೆ.

ಹಿಂದಿನ ಎರಡು ಏಕದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ 127 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 117 ರನ್ ಗಳಿಸಿದರು ಮತ್ತು ಎರಡನೇ ಪಂದ್ಯದಲ್ಲಿ 120 ಎಸೆತಗಳಲ್ಲಿ 18 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 136 ರನ್ ಬಾರಿಸಿದರು.
ಹೀಗಾಗಿ ಮೂರು ಪಂದ್ಯಗಳಲ್ಲಿ ಸ್ಮೃತಿ ಮಂಧಾನ 114.33ರ ಸರಾಸರಿಯಲ್ಲಿ ಮತ್ತು 103ರ ಸ್ಟ್ರೈಕ್ ರೇಟ್‌ನಲ್ಲಿ 343 ರನ್‌ಗಳೊಂದಿಗೆ ಸರಣಿ ಮುಗಿಸಿದರು. ಇದರಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಬಾರಿಸಿದರು.
ಭಾರತ ಮಹಿಳಾ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿದ್ದರಿಂದ ಸ್ಮೃತಿ ಮಂಧಾನ "ಸರಣಿಶ್ರೇಷ್ಠ ಆಟಗಾರ್ತಿ' ಪ್ರಶಸ್ತಿ ಪಡೆದರು.
ಎಡಗೈ ಆಟಗಾರ್ತಿ ಸ್ಮೃತಿ ಮಂಧಾನ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸತತ ಶತಕಗಳನ್ನು ಗಳಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.
ಭಾನುವಾರ, ಏಕದಿನ ಸ್ವರೂಪದಲ್ಲಿ ಮೂರು ಸತತ ಶತಕಗಳನ್ನು ದಾಖಲಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಳ್ಳಲು ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು.
ಎರಡನೇ ಏಕದಿನ ಪಂದ್ಯದಲ್ಲಿನ ಶತಕದ ಮೂಲಕ ಸ್ಮೃತಿ ಮಂಧಾನ (7) ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿರುವ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಸರಿಗಟ್ಟಿದರು.

ಈ ಸರಣಿಯಲ್ಲಿ ಸ್ಮೃತಿ ಮಂಧಾನ 343 ರನ್‌ಗಳು ಮಹಿಳಾ ಕ್ರಿಕೆಟ್‌ನಲ್ಲಿ ಮೂರು ಪಂದ್ಯಗಳ ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದರು.
ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ 335 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಅವರ ದಾಖಲೆಯನ್ನು ಸ್ಮೃತಿ ಮಂಧಾನ ಹಿಂದಿಕ್ಕಿದರು.
ಒಟ್ಟಾರೆ ಮಹಿಳಾ ಆಟಗಾರ್ತಿಯಿಂದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಕರೆನ್ ರೋಲ್ಟನ್. ಅವರು 2004ರಲ್ಲಿ ನ್ಯೂಜಿಲೆಂಡ್ ವಿರುದ್ಧ 6 ಏಕದಿನ ಪಂದ್ಯಗಳಲ್ಲಿ 197.00ರ ಸರಾಸರಿಯಲ್ಲಿ 394 ರನ್ ಗಳಿಸಿದರ.
* ಸ್ಮೃತಿ ಮಂಧಾನ - vs ದಕ್ಷಿಣ ಆಫ್ರಿಕಾ - 3 ಇನ್ನಿಂಗ್ಸ್‌ಗಳಲ್ಲಿ 343 ರನ್ (2024)
* ಜಯ ಶರ್ಮಾ - vs ನ್ಯೂಜಿಲೆಂಡ್ - 5 ಇನ್ನಿಂಗ್ಸ್‌ಗಳಲ್ಲಿ 309 ರನ್ (2003-04)
* ಮಿಥಾಲಿ ರಾಜ್ - vs ಆಸ್ಟ್ರೇಲಿಯಾ - 7 ಇನ್ನಿಂಗ್ಸ್‌ಗಳಲ್ಲಿ 289 ರನ್ (2004-05)
* ಮಿಥಾಲಿ ರಾಜ್ - vs ಇಂಗ್ಲೆಂಡ್ - 4 ಇನ್ನಿಂಗ್ಸ್‌ಗಳಲ್ಲಿ 287 ರನ್ (2009-10)
* ಪುನಮ್ ರಾವುತ್ - vs ದಕ್ಷಿಣ ಆಫ್ರಿಕಾ - 5 ಇನ್ನಿಂಗ್ಸ್‌ಗಳಲ್ಲಿ 263 ರನ್ (2020-21)