Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND W vs SA W: ಹ್ಯಾಟ್ರಿಕ್‌ ಗೆಲುವಿನ ಕನಸಿನಲ್ಲಿ ಭಾರತ

ಮ್ಯಾಂಚೆಸ್ಟರ್‌: ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ನ ಗ್ರುಪ್‌ 1ರಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಕನಸು ಹರ್ಮನ್‌ಪ್ರೀತ್ ಕೌರ್ ಪಡೆಯದ್ದಾಗಿದೆ. ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಎರಡನೇ ಗೆಲುವಿನ ಇರಾದೆಯನ್ನು ಹೊಂದಿದ್ದಾರೆ.

ಭಾರತದ ಮಹಿಳಾ ತಂಡ ಲೀಗ್‌ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ 64 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ 95 ರನ್‌ಗಳಿಂದ ನೆದರ್‌ಲ್ಯಾಂಡ್ಸ್‌ ತಂಡವನ್ನು ಸೋಲಿಸಿ ಅಬ್ಬರಿಸಿತು. ಈಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇನ್ನು ದಕ್ಷಿಣ ಆಫ್ರಿಕಾ 65 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಆಫ್ರಿಕಾ 2 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿ ಅಬ್ಬರಿಸಿತ್ತು. ಗೆಲುವಿನ ಟ್ರ್ಯಾಕ್‌ ಮುಂದುವರೆಸುವ ಇರಾದೆ ದಕ್ಷಿಣ ಆಫ್ರಿಕಾ ತಂಡದ್ದಾಗಿದೆ.

IND W vs SA W

ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ನೆದರ್‌ಲ್ಯಾಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತ್ತು. ಇದೇ ಪ್ರದರ್ಶನವನ್ನು ಮೂರನೇ ಪಂದ್ಯದಲ್ಲಿ ಮುಂದುವರೆಸುವ ಇರಾದೆ ಹೊಂದಿದ್ದಾರೆ. ಇನ್ನು ಜೆಮಿಮಾ ರೋಡ್ರಿಗಸ್‌ ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಹರ್ಮನ್ ಪ್ರೀತ್ ಕೌರ್, ಯಾಸ್ತಿಕಾ ಭಾಟೀಯಾ, ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರಾಗಬಲ್ಲರು. ಡೆತ್ ಓವರ್‌ಗಳಲ್ಲಿ ರಿಚಾ ಘೋಷ್‌ ರನ್‌ ಗತಿಗೆ ಚುರುಕು ಮುಟ್ಟಿಸಬಲ್ಲರು. ಇನ್ನು ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ದೀಪ್ತಿ ಶರ್ಮಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆ ಹೊಂದಿದ್ದಾರೆ.

IND W vs SA W

ಬೌಲಿಂಗ್‌ ವಿಭಾಗದಲ್ಲಿ ಕ್ರಾಂತಿ ಗೌಡ, ನಂದಿನಿ ಶರ್ಮಾ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು. ಸ್ಪಿನ್ ಬೌಲರ್‌ ಶಫಾಲಿ ವರ್ಮಾ, ಶ್ರೀ ಚರಣಿ ಸ್ಪಿನ್ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಬಲ್ಲರು. ಇನ್ನು ಶ್ರೇಯಾಂಕಾ ಪಾಟೀಲ್ ಅವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಗೆಲುವಿನ ಕನಸು

ದಕ್ಷಿಣ ಆಫ್ರಿಕಾದ ಪರ ಆನ್ನೆರಿ ಡೆರ್ಕ್ಸೆನ್ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ಇವರು ಪಾಕ್‌ ವಿರುದ್ಧದ ಪಂದ್ಯದಲ್ಲಿ 52 ರನ್‌ ಚಚ್ಚಿದ್ದಾರೆ. ಇನ್ನು ನಡೀನ್ ಡಿ ಕ್ಲರ್ಕ್ ಸಹ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲರು. ಇವರೊಂದಿಗೆ ಅಪಾಯಕಾರಿ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ಟ್ ಅವರನ್ನೂ ಭಾರತ ಬೇಗನೆ ಕಟ್ಟಿಹಾಕಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಮರಿಜಾನ್ನೆ ಕಾಪ್ ಮತ್ತು ಶಬ್ನಿಮ್ ಇಸ್ಮಾಯಿಲ್ ಅತ್ಯಂತ ಕರಾರುವಾಕ್ ಆಗಿದ್ದು, ಭಾರತದ ಟಾಪ್ ಆರ್ಡರ್ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ.

ಪಿಚ್ ವರದಿ

ಓಲ್ಡ್ ಟ್ರಾಫರ್ಡ್ ಬ್ಯಾಟ್ ಮತ್ತು ಬೌಲರ್‌ಗಳಿಗೆ ನೆರವು ನೀಡಲಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‌ ನೋಡಬಹುದಾಗಿದೆ. ಇದು ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಬಹುದು. ಮತ್ತೊಂದೆಡೆ, ಭಾರತದ ಬ್ಯಾಟರ್‌ಗಳಿಗೂ ಈ ಪಿಚ್‌ ಸಹಾಯಕವಾಗುವ ಸಾಧ್ಯತೆ ಇದೆ.

ಪಂದ್ಯವನ್ನು ನೋಡುವುದು ಎಲ್ಲಿ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮಹಿಳಾ ಟಿ20 ವಿಶ್ವಕಪ್‌ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯ ನಡೆಯುವುದು ಯಾವಾಗ?

ಮಹಿಳಾ ಟಿ20 ವಿಶ್ವಕಪ್‌ನ 18ನೇ ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ. ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

Story first published: Saturday, June 20, 2026, 19:40 [IST]
Other articles published on Jun 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+