For Quick Alerts
ALLOW NOTIFICATIONS  
For Daily Alerts
 

IND W vs SA W: ಶಫಾಲಿ, ಸ್ಮೃತಿ, ಸ್ನೇಹಾ ಸಾಹಸ; ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಗೆದ್ದ ಭಾರತ ಮಹಿಳೆಯರು

ಸೋಮವಾರ, ಜುಲೈ 1ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು 10 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 603 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 266 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಎರಡು ದಿನಗಳ ನಂತರ ದಕ್ಷಿಣ ಆಫ್ರಿಕಾ ತಂಡ ಫಾಲೋ-ಆನ್ ತಪ್ಪಿಸಲು ಸಾಕಷ್ಟು ಹೋರಾಟವನ್ನು ತೋರಿಸಿತು.

IND W vs SA W Team India Beat South Africa By 10 Wickets In Only Test Match

ಆದರೂ, ಮೊದಲ ಇನ್ನಿಂಗ್ಸ್‌ನಲ್ಲಿ 266 ರನ್‌ಗಳಿಗೆ ಆಲೌಟ್ ಆಗಿ ಫಾಲೋ-ಆನ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 373 ರನ್ ಗಳಿಸಿದರ ಪ್ರಯತ್ನಗಳೂ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಲಿಲ್ಲ. ಆ ಬಳಿಕ ಭಾರತ ತಂಡ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ 37 ರನ್ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿದರು.

ಇದೇ ವೇಳೆ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಭಾರಿ ಅಂತರದಿಂದ ಸೋಲಿಸಿದ ನಂತರ, ಭಾರತವು ತವರಿನಲ್ಲಿ ಟೆಸ್ಟ್ ಸ್ವರೂಪದಲ್ಲಿ ಪ್ರಾಬಲ್ಯ ಸಾಧಿಸಿದೆ.

ಲಾರಾ ವೊಲ್ವಾರ್ಡ್ಟ್, ಸುನೆ ಲೂಸ್ ವ್ಯರ್ಥ ಪ್ರಯತ್ನ

ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್‌ಗಳ ಬೃಹತ್ ಮುನ್ನಡೆಯನ್ನು ಬಿಟ್ಟುಕೊಟ್ಟ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಪುನರಾರಂಭಿಸಿತು. ಅನುಭವಿ ಜೋಡಿಯಾದ ಲಾರಾ ವೊಲ್ವಾರ್ಡ್ ಮತ್ತು ಸುನೆ ಲೂಸ್ ಎರಡನೇ ವಿಕೆಟ್‌ಗೆ 190 ರನ್‌ಗಳ ಜೊತೆಯಾಟ ನೀಡಿದರು.

ಲಾರಾ ವೊಲ್ವಾರ್ಡ್ 259 ಎಸೆತಗಳಲ್ಲಿ ಶತಕ ಗಳಿಸಿದರು ಮತ್ತು ಇಂಗ್ಲೆಂಡ್‌ನ ಹೀದರ್ ನೈಟ್ ಮತ್ತು ಟಮ್ಮಿ ಬ್ಯೂಮಾಂಟ್ ಅವರೊಂದಿಗೆ ಎಲ್ಲಾ 3 ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಮಹಿಳಾ ಕ್ರಿಕೆಟ್‌ನಲ್ಲಿ ಮೂರನೇ ಬ್ಯಾಟರ್ ಎನಿಸಿದರು.

IND W vs SA W Team India Beat South Africa By 10 Wickets In Only Test Match

ಅಂತಿಮವಾಗಿ ಲಾರಾ ವೊಲ್ವಾರ್ಡ್ 314 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ 122 ರನ್ ಗಳಿಸಿ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ವಿಕೆಟ್ ಒಪ್ಪಿಸಿದರು.

ಇನ್ನು 203 ಎಸೆತಗಳಲ್ಲಿ 18 ಬೌಂಡರಿಗಳ ಸಮೇತ 109 ರನ್‌ ಗಳಿಸಿದ್ದ ಸುನೆ ಲೂಸ್ ಅವರ ನಿರ್ಣಾಯಕ ವಿಕೆಟ್ ಅನ್ನು ಹರ್ಮನ್‌ಪ್ರೀತ್ ಕೌರ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಹೋರಾಟ ತೋರಿದ್ದ ಮರಿಜಾನ್ ಕಾಪ್ 31 ರನ್ ಗಳಿಸಿದರು.

ನಾಡಿನ್ ಡಿ ಕ್ಲರ್ಕ್ ಅವರು 185 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 61 ರನ್ ಗಳಿಸಿ ಕಠಿಣ ಹೋರಾಟ ನಡೆಸಿದರು. ಆ ಬಳಿಕ ದಕ್ಷಿಣ ಆಫ್ರಿಕಾ ತಂಡದ ಕೆಳ ಕ್ರಮಾಂಕವನ್ನು ಭಾರತದ ಬೌಲರ್‌ಗಳು ಪೆವಿಲಿಯನ್‌ಗೆ ಕಳಿಸಿದರು. ಡಿ ಕ್ಲರ್ಕ್ ಅವರ ಕೊನೆಯ ಹಂತದ ಪ್ರತಿರೋಧವು ಭಾರತ ತಂಡದ ವಿರುದ್ಧ 37 ರನ್‌ಗಳ ಗುರಿಯನ್ನು ನಿಗದಿಪಡಿಸಲು ಸಹಾಯ ಮಾಡಿತು.

ಇನ್ನು ಜೂಲನ್ ಗೋಸ್ವಾಮಿ ನಂತರ ಮಹಿಳಾ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಪೂರೈಸಿದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಸ್ನೇಹ್ ರಾಣಾ ಪಾತ್ರರಾದರು. ಸ್ನೇಹ್ ರಾಣಾ, ದೀಪ್ತಿ ಶರ್ಮಾ ಮತ್ತು ಗಾಯಕ್ವಾಡ್ ತಲಾ 2 ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್, ಶಫಾಲಿ ವರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ತಲಾ ಒಂದೊಂದು ವಿಕೆಟ್ ಪಡೆದರು.

IND W vs SA W Team India Beat South Africa By 10 Wickets In Only Test Match

ಭಾರತಕ್ಕೆ ಗೆಲುವಿನ ರನ್ ಬಾರಿಸಿದ ಶಫಾಲಿ ವರ್ಮಾ

37 ರನ್‌ಗಳ ರನ್ ಚೇಸ್‌ನಲ್ಲಿ ಮೊದಲ ದಿನ 149 ರನ್ ಗಳಿಸಿದ್ದ ಉಪನಾಯಕಿ ಸ್ಮೃತಿ ಮಂಧಾನ ಬ್ಯಾಟಿಂಗ್‌ಗೆ ಬರಲಿಲ್ಲ. ಬದಲಾಗಿ, ಎಡಗೈ ಆಟಗಾರ್ತಿ ಶುಭಾ ಸತೀಶ್ ಅವರು ಶಫಾಲಿ ವರ್ಮಾ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದರು. ಈ ಆರಂಭಿಕ ಜೋಡಿ ಟೀಮ್ ಇಂಡಿಯಾವನ್ನು ಅಂತಿಮ ಗೆರೆಯನ್ನು ದಾಟಿಸಲು ಕೇವಲ 9.2 ಓವರ್‌ಗಳನ್ನು ತೆಗೆದುಕೊಂಡರು.

ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್ ಗಳಿಸಿದ್ದ ಶಫಾಲಿ ವರ್ಮಾ ಅವರು ಅಲ್ಲಿಗೆ ನಿಲ್ಲಿಸಿದ್ದ ಆಟದಿಂದ ಮುಂದುವರಿಸಿದರು. ಈ ಮೂಲಕ ಮಹಿಳಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ಮಿಥಾಲಿ ರಾಜ್ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ (214) ದಾಖಲೆಯನ್ನು ಹಿಂದಿಕ್ಕಲು ವಿಫಲರಾದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಶಫಾಲಿ ವರ್ಮಾ 30 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರೆ, ಶುಭಾ ಸತೀಶ್ 26 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿ ಸಾಥ್ ನೀಡಿದರು.

ಏಕದಿನ ಸರಣಿ ಮತ್ತು ಏಕೈಕ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ, ಭಾರತ ಮಹಿಳಾ ತಂಡವು ಜುಲೈ 5ರಿಂದ ಚೆಪಾಕ್‌ನಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ತಮ್ಮ ಫಾರ್ಮ್ ಮುಂದುವರೆಸಲು ಎದುರು ನೋಡುತ್ತಿದೆ.

Story first published: Monday, July 1, 2024, 19:11 [IST]
Other articles published on Jul 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+