Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND-W vs WI-W: ವಿಂಡೀಸ್ ತಂಡದ ಬೆಂಡೆತ್ತಿದ ಟೀಮ್ ಇಂಡಿಯಾದ ಯುವ ಬ್ಯಾಟರ್

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಪಂದ್ಯ ವಡೋಧರಾದಲ್ಲಿ ನಡೆಯುತ್ತಿದೆ. ಈ ಮೊದಲು ಬ್ಯಾಟ್‌ ಮಾಡಿದ ಭಾರತ ಬೃಹತ್‌ ಮೊತ್ತವನ್ನು ಕಲೆ ಹಾಕಿದೆ. ಈ ವೇಳೆ ತಂಡದ ಯುವ ಆಟಗಾರ್ತಿಯ ಸ್ಫೋಟಕ ಬ್ಯಾಟಿಂಗ್‌ ವಿಂಡೀಸ್ ಬೌಲರ್‌ಗಳನ್ನು ದಂಡಿಸಿದರು. ಸಿಕ್ಕ ಅವಕಾಶದಲ್ಲಿ ಎರಡೂ ಕೈಗಳಿಂದ ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶತಕ ಬಾರಿಸಿ ಅಬ್ಬರಿಸಿದರು. ಚೊಚ್ಚಲ ಶತಕ ಬಾರಿಸಿದ ಆಟಗಾರ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಟೀಮ್ ಇಂಡಿಯಾದ 26 ವರ್ಷದ ಯುವ ಆಟಗಾರ್ತಿ ಹರ್ಲೀನ್ ಡಿಯೋಲ್ ಅಬ್ಬರ ನಡೆಸಿತು. ಇವರ ಅಮೋಘ ಬ್ಯಾಟಿಂಗ್‌ ನೋಡಿದ ಅಭಿಮಾನಿಗಳು ಫುಲ್ ಖುಷ್ ಆದರು. ಇವರು ತಮ್ಮ ವೃತ್ತಿ ಜೀವನದ 15ನೇ ಏಕದಿನ ಪಂದ್ಯದಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು.

IND-W vs WI-W Harleen Deol Shines with a Century in India s Commanding Performance

ಹರ್ಲೀನ್ ಡಿಯೋಲ್ ಅವರ ಅಬ್ಬರದ ಶತಕದ ನೆರವಿನಿಂದ ಟೀಮ್ ಇಂಡಿಯಾ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಹರ್ಲೀನ್ ಡಿಯೋಲ್ ಕೇವಲ 98 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ ಶತಕ ಪೂರೈಸಿದರು. ಇವರು ಈ ಇನಿಂಗ್ಸ್‌ನಲ್ಲಿ 111ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು.

ಅಬ್ಬರದ ಆರಂಭ

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್‌ ಸೇರಿಸಿತು. ಟೀಮ್ ಇಂಡಿಯಾದ ಆರಂಭಿಕರಾದ ಸ್ಮೃತಿ ಮಂಧನಾ ಹಾಗೂ ಪ್ರತೀಕಾ ರಾವಲ್‌ ಜೋಡಿ ಮೊದಲ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 16.3 ಓವರ್‌ಗಳಲ್ಲಿ 110 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ಸ್ಮೃತಿ ಮಂಧನಾ ತಮ್ಮ ನೈಜ ಆಟವನ್ನು ಆಡಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 53 ರನ್‌ ಸಿಡಿಸಿದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 86 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 76 ರನ್‌ ಸಿಡಿಸಿದರು.

ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ

ಟೀಮ್ ಇಂಡಿಯಾದ ಪರ ನಾಯಕಿ ಹರ್ಮನ್‌ ಪ್ರೀತ್ ಕೌರ್ ಜವಾಬ್ದಾರಿ ಮರೆತರು. ಇವರು 22 ರನ್‌ಗಳಿಗೆ ಔಟ್ ಆದರು. ನಾಲ್ಕನೇ ವಿಕೆಟ್‌ಗೆ ಜೆಮಿಮಾ ರಾಡ್ರಿಗಸ್ ಹಾಗೂ ಹರ್ಲೀನ್ ಡಿಯೋಲ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಟಿ20 ರೀತಿ ಬ್ಯಾಟಿಂಗ್ ನಡೆಸಿತು. ಜಸ್ಟ್‌ 71 ಎಸೆತಗಳಲ್ಲಿ ಈ ಜೋಡಿ 116 ರನ್‌ ಸಿಡಿಸಿತು. ಜೆಮಿಮಾ ರಾಡ್ರಿಗಸ್ 36 ಎಸೆತಗಳಲ್ಲಿ 52 ರನ್‌ ಸಿಡಿಸಿದರು. ಇದರಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿವೆ. ಉಳಿದಂತೆ ರಿಚಾ ಘೋಷ್ (ಅಜೇಯ 13) ಹಾಗೂ ದೀಪ್ತಿ ಶರ್ಮಾ (ಅಜೇಯ 4) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.

Story first published: Tuesday, December 24, 2024, 17:32 [IST]
Other articles published on Dec 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+