Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜ ಹಾರಿಸಿದ ಟೀಂ ಇಂಡಿಯಾ

ಬೆಂಗಳೂರು, ಆಗಸ್ಟ್ 15: ಸದ್ಯಕ್ಕೆ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ, ಅಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದೆ. ಸೋಮವಾರವಷ್ಟೇ ಮುಗಿದ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯದಲ್ಲಿ ಜಯ ಕಂಡ ಕೊಹ್ಲಿ ಪಡೆ, ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಇದಾದ ನಂತರ, ಲಂಕಾ ವಿರುದ್ಧವೇ ನಡೆಯಲಿರುವ ಏಕದಿನ ಸರಣಿಗಾಗಿ ಕ್ಯಾಂಡಿಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾ, ಆಗಸ್ಟ್ 15ರಂದು ಕ್ಯಾಂಡಿಯಲ್ಲೇ ವಾಸ್ತವ್ಯ ಹೂಡಿತ್ತು.

Independence day 2017: Indian Cricket team Hoist Tricolour in Kandy of Sri Lanka

ಭಾರತದ 71ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ, ಕ್ಯಾಂಡಿಯಲ್ಲಿ ತಾವು ತಂಗಿರುವ ಹೋಟೆಲ್ ನ ಆಜುಬಾಜಿನಲ್ಲೇ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಆಟಗಾರರು ಧ್ವಜಕ್ಕೆ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಎಲ್ಲಾ ಭಾರತೀಯರಿಗೆ ಶುಭ ಹೇಳಿರುವ ವಿರಾಟ್ ಕೊಹ್ಲಿ, ಆಗಸ್ಟ್ 15 ತಮ್ಮ ತಂದೆಯ ಹುಟ್ಟುಹಬ್ಬವೂ ಇರುವುದರಿಂದ ತಮಗೆ ಪ್ರತಿ ಸ್ವಾತಂತ್ರ್ಯೋತ್ಸವವು ಡಬಲ್ ಖುಷಿ ಕೊಡುವ ದಿನವಾಗಿದೆ ಎಂದು ಹೇಳಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+