ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!

ಟೀಮ್ ಇಂಡಿಯಾ 2020ರ ಮೊದಲ ಸರಣಿಯನ್ನಾಡಲು ಸಜ್ಜಾಗಿದೆ. ದ್ವೀಪ ರಾಷ್ಟ್ರ ಶ್ರೀಲಂಕಾ ತಂಡ ಭಾರತವನ್ನು ಎದುರಿಸಲು ಸಿದ್ಧವಾಗಿ ಭಾರತಕ್ಕೆ ಆಗಮಿಸಿದೆ. ಟೀಮ್ ಇಂಡಿಯಾ ಸರಣಿಯ ಮೇಲೆ ಸರಣಿ ಗೆಲ್ಲುತ್ತಾ ಮುನ್ನುಗ್ಗುತ್ತಿದ್ದರೆ, ಶ್ರೀಲಂಕಾ ಇತ್ತೀಚಿನ ದಿನಗಳಲ್ಲಂತೂ ಸಾಮಾನ್ಯ ತಂಡಗಳೆದುರು ಪಂದ್ಯಗೆಲ್ಲಲು ಹರಸಾಹಸ ಪಡುವಂತಾಗಿದೆ.
ಈ ಮಧ್ಯೆ ಮೂರು ಪಂದ್ಯಗಳ ಟಿ20 ಕಿರು ಸರಣಿಯನ್ನಾಡಲು ಶ್ರೀಲಂಕಾ ಭಾರತಕ್ಕೆ ಬಂದಿದೆ. ಭಾನುವಾರ ಮೊದಲ ಪಂದ್ಯ ಗುವಾಹಟಿಯಲ್ಲಿ ಆರಂಭವಾಗಲಿದೆ. ಆದರೆ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ ಶ್ರೀಲಂಕಾ ತಂಡದ ಕರಾಳ ಸತ್ಯವೊಂದು ಬಹಿರಂಗವಾಗುತ್ತದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಶ್ರೀಲಂಕಾ ತಂಡ ಒಂದು ಸರಣಿಯನ್ನೂ ಗೆದ್ದಿಲ್ಲ. ಹೌದು ಶ್ರೀಲಂಕಾ ತಂಡ ಕಳೆದ 12 ವರ್ಷಗಳಲ್ಲಿ ಒಂದೂ ಸರಣಿಯನ್ನು ಗೆದ್ದುಕೊಂಡಿಲ್ಲ. ಟೆಸ್ಟ್, ಏಕದಿನ ಟಿ20 ಸೇರಿದಂತೆ ಯಾವೊಂದು ಸರಣಿಯಲ್ಲೂ ಶ್ರೀಲಂಕಾ ತಂಡ ಮೇಲುಗೈಯನ್ನು ಸಾಧಿಸಿಲ್ಲ ಎಂಬುದನ್ನು ನಂಬಲೇಬೇಕು.

12ವರ್ಷಗಳಿಂದ ಸರಣಿ ಗೆದ್ದಿಲ್ಲ
2008ರ ಆಗಸ್ಟ್ ಬಳಿಕ ಶ್ರೀಲಂಕಾ ತಂಡ ಟೀಮ್ ಇಂಡಿಯಾ ವಿರುದ್ಧ ಆಡಿದ ಎಲ್ಲಾ ಸರಣಿಗಳನ್ನೂ ಕೈಚೆಲ್ಲಿದೆ. ಈ ಅವಧಿಯಲ್ಲಿ 59 ಪಂದ್ಯಗಳು ಎರಡು ತಂಡಗಳ ಮಧ್ಯೆ ನಡೆದಿದ್ದು ಇದರಲ್ಲಿ ಟೀಮ್ ಇಂಡಿಯಾ 44 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಕೇವಲ 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದರಲ್ಲಿ ವಿಶ್ವಕಪ್‌ನಂತಾ ಮಹತ್ವದ ಟೂರ್ನಿಯ ಪಂದ್ಯಗಳೂ ಸೇರಿದೆ. ಕಳೆದ ಹನ್ನೆರಡು ವರ್ಷಗಳ ಸರಣಿ ಬಲಾಬಲ ಗಮನಿಸಿದರೆ ಕಾಣೋದು 16-0 ಅಂತರ.

ಒಂದು ಸರಣಿ ಸಮಬಲಗೊಳಿಸಿದ್ದೇ ಸಾಧನೆ
ಶ್ರೀಲಂಕಾ ತಂಡ ಟೀಮ್ ಇಂಡಿಯಾವನ್ನು ಕೊನೆಯ ಬಾರಿಗೆ ಸರಣಿ ಸೋಲಿಸಿದ್ದು 2008 ಆಗಸ್ಟ್‌ನಲ್ಲಿ. ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡ ಅನಿಲ್ ಕುಂಬ್ಲೆ ನೇತೃತ್ವದ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ ಕೇವಲ ಒಂದು ಸರಣಿಯನ್ನು ಸಮಬಲ ಮಾಡಿಕೊಳ್ಳುವಲ್ಲಷ್ಟೇ ಯಶಸ್ವಿಯಾಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ದಶಕದ ತಂಡ ಹೇಗಿದೆ ಗೊತ್ತಾ!?

ಮೂರು ಮಾದರಿಯ ಅಂಕಿಅಂಶ
ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟ ಬಳಿಕ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಡಿದ 7 ಸರಣಿಯಲ್ಲಿ ಭಾರತ ಎಲ್ಲಾ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ ಶ್ರೀಲಂಕಾ ವಿರುದ್ಧ 6 ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಂಡಿದ್ದು, ಒಂದರಲ್ಲಿ ಡ್ರಾ ಮಾಡಿಕೊಂಡು ಉಳಿದ 5 ಪಂದ್ಯಗಳನ್ನು ಗೆದ್ದುಕೊಂಡಿದೆ.

ಕೊಹ್ಲಿ ಕಂಡರೆ ಲಂಕಾಗೆ ಭಯ
ವೈಯಕ್ತಿಕವಾಗಿಯೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ತಂಡದ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಶ್ರೀಲಂಕಾ ಒಂದೇ ತಂಡದ ವಿರುದ್ಧ ಕೊಹ್ಲಿ 3507 ರನ್ ಬಾರಿಸಿದ್ದಾರೆ. ಇದರಲ್ಲಿ 13 ಶತಕ ಮತ್ತು 17 ಅರ್ಧ ಶತಕ ಸೇರಿಕೊಂಡಿದೆ. 66.16 ಸರಾಸರಿಯನ್ನು ಕೊಹ್ಲಿ ಕಾಯ್ದುಕೊಂಡಿದ್ದಾರೆ. ಟಿ20 ನಾಲ್ಕು ಪಂದ್ಯಗಳನ್ನು ಆಡಿರುವ ಕೊಹ್ಲಿ 283 ರನ್ ಬಾರಿಸಿದ್ದು 94.33 ಸರಾಸರಿ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications