For Quick Alerts
ALLOW NOTIFICATIONS  
For Daily Alerts
 

Duleep Trophy: ಮಯಾಂಕ್‌ ಅಗರ್‌ವಾಲ್‌ ಮುಂದಾಳತ್ವದ ಭಾರತ ಎ ತಂಡ ಚಾಂಪಿಯನ್‌

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ, ಬಾಂಗ್ಲಾದೇಶ ತಂಡವನ್ನು ಮಣಿಸಿ ಅಬ್ಬರಿಸಿತು. ಇತ್ತ ಅನಂತಪುರದಲ್ಲಿ ನಡೆದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಎ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮಯಾಂಕ್‌ ಅಗರ್‌ವಾಲ್‌ ಮುಂದಾಳತ್ವದ ಭಾರತ ಎ ಪ್ರಶಸ್ತಿಗೆ ಮುತ್ತಿಟ್ಟಿತ್ತು.

ಭಾರತ ಎ ತಂಡವು 132 ರನ್‌ಗಳಿಂದ ಇಂಡಿಯಾ ಸಿ ತಂಡವನ್ನು ಸೋಲಿಸುವ ಮೂಲಕ ದುಲೀಪ್ ಟ್ರೋಫಿ 2024 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತ-ಎ ಪರ ಶಾಶ್ವತ್ ರಾವತ್ ಅದ್ಭುತ ಪ್ರದರ್ಶನ ನೀಡಿದರು. ಇವರ ಬೊಂಬಾಟ ಪ್ರದರ್ಶನದ ಬಲದಿಂದ ಭಾರತ ಎ ಗೆಲುವು ದಾಖಲಿಸಿತು. ಮೂರು ಪಂದ್ಯಗಳ ಟೂರ್ನಿಯಲ್ಲಿ ಭಾರತ ಎ ತಂಡ ಅಮೋಘ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದು, ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

India-A Clinches Duleep Trophy 2024 with 132-Run Victory Over India-C Shashwat Rawat Shines with Century

ಭಾನುವಾರ ಭಾರತ ಎ ತಂಡ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 270 ರನ್‌ಗಳಿಂದ ಆಟ ಮುಂದುವರೆಸಿ, 8 ವಿಕೆಟ್ ಕಳೆದುಕೊಂಡು 286 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಭಾರತ ಸಿ ತಂಡದ ಗೌರವ್ ಯಾದವ್ 4 ವಿಕೆಟ್‌ ಪಡೆದು ಮಿಂಚಿದರು.

ಜವಾಬ್ದಾರಿ ಮರೆತ ಭಾರತ ಸಿ ಬ್ಯಾಟರ್ಸ್‌

ಭಾನುವಾರ ಭಾರತ ಸಿ ತಂಡದ ಪರ ಇನಿಂಗ್ಸ್‌ ಆರಂಭಿಸಿದ ವಿಜಯ್‌ಕುಮಾರ್‌ ವೈಶಾಖ್‌ ಜವಾಬ್ದಾರಿ ಮರೆತರು. ಎರಡನೇ ವಿಕೆಟ್‌ಗೆ ರುತುರಾಜ್ ಗಾಯಕ್ವಾಡ್‌ ಹಾಗೂ ಭರವಸೆಯ ಆಟಗಾರ ಸಾಯ್‌ ಸುದರ್ಶನ್‌ ಜೊತೆಗೂಡಿ ಭರ್ಜರಿ ಪ್ರದರ್ಶನ ನೀಡಿದರು. ಈ ಜೋಡಿ 77 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ರುತುರಾಜ್ ಗಾಯಕ್ವಾಡ್ 5 ಬೌಂಡರಿ ನೆರವಿನಿಂದ 44 ರನ್‌ ಸಿಡಿಸಿ ಔಟ್ ಆದರು.

ಭಾರತ ಸಿ ತಂಡದ ಪರ ಉಳಿದ ಬ್ಯಾಟರ್‌ಗಳು ಜವಾಬ್ದಾರಿಯುತ ಆಟವನ್ನು ಆಡುವಲ್ಲಿ ವಿಫಲರಾದರು. ಇಶಾನ್‌ ಕಿಶನ್‌ 17 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸಾಯ್‌ ಸುದರ್ಶನ್‌ 206 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 111 ರನ್‌ ಬಾರಿಸಿ ಸೋಲಿನಲ್ಲಿ ಮಿಂಚಿದರು.

ಭಾರತ ಎ ತಂಡದ ಪರ ಪ್ರಸಿದ್ಧ ಕೃಷ್ಣ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 50 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು. ತನುಷ್ ಕೋಟ್ಯಾನ್ ಸಹ ಮೂರು ವಿಕೆಟ್‌ ಉರುಳಿಸಿದರು.

Story first published: Sunday, September 22, 2024, 23:31 [IST]
Other articles published on Sep 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+