ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸಕ್ಕೂ ಮುನ್ನ ಭಾರತ "ಎ" ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತ "ಎ" ತಂಡದ ತ್ರಿಮೂರ್ತಿಗಳು ನೀಡಿದ ಪ್ರದರ್ಶನ ನಿಜಕ್ಕೂ ಇಂಗ್ಲೆಂಡ್ ತಂಡದ ಚಿಂತೆಯನ್ನು ಡಬಲ್ ಮಾಡಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಭಾರತ "ಎ" ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ ಅಬ್ಬರಿಸಿತು. ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟಾರ್ ಆಟಗಾರರು ಅಬ್ಬರಿಸಿದ್ದಾರೆ.
ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಅಭಿಮನ್ಯು ಈಶ್ವರನ್ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. ಆರಂಭಿಕರು ತಂಡದ ಮೊತ್ತ 51 ಆಗಿದ್ದಾಗ ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್‌ಗೆ ಕರುಣ್ ನಾಯರ್ ಹಾಗೂ ಸರ್ಫರಾಜ್ ಖಾನ್ ಜೋಡಿ ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಇಂಗ್ಲೆಂಡ್ ತಂಡದ ಬೌಲರ್‌ಗಳನ್ನು ಮನ ಬದ್ಧಂತೆ ದಂಡಿಸಿದರು. ಈ ಜೋಡಿ ಯ ಆಟಕ್ಕೆ ಕರುಣ್ ನಾಯರ್ ಹಾಗೂ ಸರ್ಫರಾಜ್ ಜೋಡಿ ರನ್ ಮಹಲ್ ಕಟ್ಟುತ್ತಾ ಸಾಗಿತು.

ಮೂರನೇ ವಿಕೆಟ್‌ಗೆ 39 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಅಲ್ಲದೆ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ 235 ಎಸೆತಗಳಲ್ಲಿ 181 ರನ್ ಸೇರಿಸಿತು. 27 ವರ್ಷದ ಆಟಗಾರ ಸರ್ಫರಾಜ್ ಖಾನ್ 119 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 92 ರನ್ ಸಿಡಿಸಿದರು.
ದೇಶೀಯ ಟುರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರುಣ್ ನಾಯರ್ ಮತ್ತೆ ಟೀಮ್ ಇಂಡಿಯಾಕ್ಕೆ ಎಂಟ್ರಿ ಪಡೆದಿದ್ದಾರೆ. ಇವರು ಭಾರತ "ಎ" ಪರ ಪಂದ್ಯದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು ದಿನದಾಟದಂತ್ಯಕ್ಕೆ 246 ಎಸೆತಗಳಲ್ಲಿ 24 ಬೌಂಡರಿ, 1 ಸಿಕ್ಸರ್ ಸಹಾಯದಿಂದ 186 ರನ್ ಸಿಡಿಸಿದರು. ಸೂಮಾರು ಏಳು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿರುವ ಕರುಣ್, ಇಂಗ್ಲೆಂಡ್ ಪ್ರವಾಸದಲ್ಲಿ ಅಬ್ಬರಿಸಲು ಸ್ಟೇಜ್ ಸೆಟ್ ಮಾಡಿಕೊಂಡಿದ್ದಾರೆ.

ಇನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಎರಡನೇ ವಿಕೆಟ್ ಕೀಪರ್ ಧ್ರುವ್ ಜುರೇಲ್ ಅವರು ತಮ್ಮ ಬ್ಯಾಟಿಂಗ್ ಕಲಾತ್ಮಕತೆಯನ್ನು ಪ್ರದರ್ಶಿಸಿದರು. ಇವರು 104 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 82 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ತ್ರಿಮುರ್ತಿಗಳ ಭರ್ಜರಿ ಆಟದ ನೆರವಿನಿಂದ ಭಾರತ "ಎ" ತಂಡ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್‌ಗೆ 409 ರನ್ ಸೇರಿಸಿತು. ಈ ಮೂಲಕ ಇಂಗ್ಲೆಂಡ್ ಪ್ರವಾಸ ಆರಂಭ ಆಗುವ ಮುನ್ನವೇ ಆತಿಥೇಯರ ಮುಖದಲ್ಲಿ ಚಿಂತೆಯಗ ಗೆರೆಗಳು ಮೂಡುವಂತೆ ಮಾಡಿದೆ.