ದ.ಆಫ್ರಿಕಾದಲ್ಲಿ ಪಾಂಡೆ ನೇತೃತ್ವದ 'ಎ' ತಂಡಕ್ಕೆ ಸೋಲು
ಪ್ರಿಟೋರಿಯಾ, ಜುಲೈ 27: ಕರ್ನಾಟಕದ ಮನೀಶ್ ಪಾಂಡೆ ನೇತೃತ್ವದ ಟೀಂ ಇಂಡಿಯಾ 'ಎ' ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ' ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 'ಎ' ತಂಡಕ್ಕೆ ಮನೀಶ್ ಪಾಂಡ್ ಆಸರೆಯಾದರು. ಮನೀಶ್ ಅವರು 55 ರನ್(95 ಎಸೆತಗಳು, 4 ಬೌಂಡರಿ) ಗಳಿಸಿದ್ದು ಬಿಟ್ಟರೆ ಮಿಕ್ಕವರು ಕಳಪೆ ಪ್ರದರ್ಶನ ನೀಡಿದರು.

ಕರುಣ್ ನಾಯರ್ 25ರನ್ ಮಾತ್ರ ಗಳಿಸಿದರು. ಭಾರತ 'ಎ' ತಂಡ 41.2 ಓವರ್ ಗಳಲ್ಲಿ 152 ರನ್ ಗಳಿಗೆ ಆಲೌಟ್ ಆಯಿತು. ಫಂಗಿಸೊ 30/4, ಪ್ರಿಟೋರಿಯಸ್ 24/3 ಗಳಿಸಿ ರನ್ ನಿಯಂತ್ರಿಸಿದರು.

ಈ ಅಲ್ಪಮೊತ್ತದ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 37.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153ರನ್ ಗಳಿಸಿತು. ದಕ್ಷಿಣ ಆಫ್ರಿಕಾ 'ಎ' ಪದ ಫರ್ಹಾನ್ ಬೆಹರ್ದಿನ್ ಅಜೇಯ 37ರನ್ ಗಳಿಸಿ ಗೆಲುವಿನ ದದ ಮುಟ್ಟಿಸಿದರು.
ಭಾರತದ ಪರ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 41/3, ಅಕ್ಷರ್ ಪಟೇಲ್ 35/2 ಉತ್ತಮ ಬೌಲಿಂಗ್ ಪ್ರದರ್ಶಿಸಿದರು.(ಐಎಎನ್ಎಸ್)
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Phangiso and Pretorius shine in opener
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications