ದಕ್ಷಿಣ ಆಫ್ರಿಕಾ ವಿರುದ್ಧ ಕರುಣ್ ನೇತೃತ್ವದ ಭಾರತ ’ಎ’ತಂಡಕ್ಕೆ ಸೋಲು
ಪ್ರಿಟೋರಿಯ, ಆಗಸ್ಟ್ 16: ಭಾರತ 'ಎ' ತಂಡ ದಕ್ಷಿಣ ಆಫ್ರಿಕಾ 'ಎ' ವಿರುದ್ಧದ ನಾಲ್ಕು ದಿನಗಳ ಮೊದಲ ಟೆಸ್ಟ್ ಪಂದ್ಯದಲ್ಲಿ 235 ರನ್‌ಗಳಿಂದ ಮುಗ್ಗರಿಸಿದೆ.
ಎಲ್.ಸಿ. ಡಿವಿಲಿಯರ್ಸ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 447 ರನ್‌ಗಳ ಗುರಿ ಬೆನ್ನಟ್ಟಿದ್ದ ಕರ್ನಾಟಕದ ಕರುಣ್ ನಾಯರ್ ನಾಯಕತ್ವದ ಭಾರತ ಎ ತಂಡವು ದ್ವಿತೀಯ ಇನಿಂಗ್ಸ್‌ನಲ್ಲಿ 52.1 ಓವರ್‌ಗಳಲ್ಲಿ 211 ರನ್ ಗಳಿಗೆ ಸರ್ವಪತ ಕಂಡು ಸೋಲೊಪ್ಪಿಕೊಂಡಿತು.

ಸೋಮವಾರ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗಳಿಗೆ 192ರನ್ ಗಳಿಸಿದ್ದ ತಂಡವು ಮಂಗಳವಾರ ಆಟ ಮುಂದುವರಿಸಿತು. ಆದರೆ, ದಿನದ ಮೂರನೇ ಓವರ್‌ನಲ್ಲಿ ಭಾರತ ತಂಡವು ಮೊದಲ ಆಘಾತ ಎದುರಾಯಿತು.
10.1 ಓವರ್ ಬೌಲ್ ಮಾಡಿದ ದಕ್ಷಿಣ ಆಫ್ರಿಕಾದ ಡಲಾ, 36ರನ್ ನೀಡಿ ಪ್ರಮುಖ 5 ವಿಕೆಟ್‌ಗಳನ್ನು ಉರುಳಿಸಿ ಭಾರತ ತಂಡಕ್ಕೆ ಕಂಟಕವಾದರು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ 'ಎ': ಮೊದಲ ಇನಿಂಗ್ಸ್: 117.3 ಓವರ್‌ಗಳಲ್ಲಿ 346 ಮತ್ತು 56.3 ಓವರ್‌ಗಳಲ್ಲಿ 5 ವಿಕೆಟ್‌ಗೆ 220 ಡಿಕ್ಲೇರ್ಡ್.
ಭಾರತ: ಪ್ರಥಮ ಇನಿಂಗ್ಸ್: 39 ಓವರ್‌ಗಳಲ್ಲಿ 120 ಮತ್ತು 52.1 ಓವರ್‌ಗಳಲ್ಲಿ 211 (ಶಹಬಾಜ್ ನದೀಮ್ 28, ಮಹಮ್ಮದ್ ಸಿರಾಜ್ 6; ಕಾರ್ಲ್ ಜೂನಿಯರ್ ಡಲಾ 36ಕ್ಕೆ5), ಆಯಂಡಿಲ್ ಪೆಹ್ಲುಕವಾಯೊ 21ಕ್ಕೆ2, ಶಾನ್ ವಾನ್ ಬರ್ಗ್ 49ಕ್ಕೆ1).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications