For Quick Alerts
ALLOW NOTIFICATIONS  
For Daily Alerts
 

ಉದಯೋನ್ಮುಖ ಏಷ್ಯಾ ಕಪ್‌ 2024: ಭಾರತ ತಂಡ ಪ್ರಕಟಿಸಿದ ಬಿಸಿಸಿಐ; ತಿಲಕ್ ವರ್ಮಾಗೆ ನಾಯಕನ ಜವಾಬ್ದಾರಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2024ರ ಮುಂಬರುವ ಆರನೇ ಆವೃತ್ತಿಗೆ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಈ ಟೂರ್ನಿ ಒಮಾನ್‌ನಲ್ಲಿ ನಡೆಯಲಿದ್ದು, ಅಕ್ಟೋಬರ್ 18 ರಿಂದ ಆರಂಭವಾಗಲಿದೆ.

ಬಹುನಿರೀಕ್ಷಿತ ಉದಯೋನ್ಮುಖ ಏಷ್ಯಾ ಕಪ್ 2024ರ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಹಾಂಕಾಂಗ್, ಯುಎಇ ಮತ್ತು ಆತಿಥೇಯ ಓಮನ್‌ ಸೇರಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಎಂಟು ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಅಕ್ಟೋಬರ್ 25 ರಂದು ನಡೆಯಲಿರುವ ಸೆಮಿಫೈನಲ್‌ಗೆ ಆರ್ಹತೆ ಪಡೆಯಲಿವೆ. ಸೆಮಿಫೈನಲ್‌ನಲ್ಲಿ ಗೆದ್ದವರು ಅಕ್ಟೋಬರ್ 27 ರಂದು ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಈ ಟೂರ್ನಿಯ ಹೈವೋಲ್ಟೇಜ್ ಪಂದ್ಯವೂ ಅಕ್ಟೋಬರ್ 19 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ.

India A squad announced for Emerging Asia Cup 2024

ಭಾರತ ತಂಡದೊಂದಿಗೆ ಪಾಕಿಸ್ತಾನ, ಯುಎಇ ಮತ್ತು ಓಮನ್ ಎ ಗುಂಪಿನಲ್ಲಿವೆ. ಭಾರತದ ಸ್ಟಾರ್ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು 14 ಸದಸ್ಯರ ಭಾರತ ಎ ತಂಡದ ನಾಯಕರನ್ನಾಗಿ ಮಾಡಲಾಗಿದೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅದ್ಭುತ ಪ್ರದರ್ಶನದ ನಂತರ ಉದಯೋನ್ಮುಖ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ವಿಕೆಟ್ ಕೀಪರ್- ಬ್ಯಾಟರ್ ಅನುಜ್ ರಾವತ್ ಮತ್ತು ಸ್ಪೋಟಕ ಬ್ಯಾಟರ್ ಪ್ರಭಾಸಿಮ್ರಾನ್ ಸಿಂಗ್ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಲು ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಯುಷ್ ಬಡೋನಿ, ನೆಹಾಲ್ ವಧೇರಾ ಮತ್ತು ರಮಣದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಮಿಂಚಿದ 23 ವರ್ಷದ ಯುವ ಬೌಲರ್ ಅನ್ಶುಲ್ ಕಾಂಬೋಜ್, ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದ ಆಕಿಬ್ ಖಾನ್ ಮೊದಲ ಬಾರಿಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಉದಯೋನ್ಮುಖ ಏಷ್ಯಾ ಕಪ್‌ ಭಾರತ ಎ ತಂಡ

ತಿಲಕ್ ವರ್ಮಾ (ನಾಯಕ), ಅಭಿಷೇಕ್ ಶರ್ಮಾ, ಆಯುಷ್ ಬದೋನಿ, ನಿಶಾಂತ್ ಸಿಂಧು, ಅನುಜ್ ರಾವತ್ (ವಿಕೆಟ್‌ ಕೀಪರ್), ಪ್ರಭಾಸಿಮ್ರಾನ್ ಸಿಂಗ್, ನೆಹಾಲ್ ವಧೇರಾ, ಅನ್ಶುಲ್ ಕಾಂಬೋಜ್, ಹೃತಿಕ್ ಶೌಕೀನ್, ಆಕಿಬ್ ಖಾನ್, ವೈಭವ್ ಅರೋರಾ, ರಾಸಿಖ್ ಸಲಾಂ, ಸಾಯಿ ಕಿಶೋರ್, ರಾಹುಲ್ ಚಾಹರ್.

Story first published: Monday, October 14, 2024, 8:24 [IST]
Other articles published on Oct 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+