For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಎ ವಿರುದ್ಧದ ಕಣಕ್ಕಿಳಿಯಲಿರುವ ಭಾರತ ಎ ತಂಡ ಪ್ರಕಟ: ಸಂಜು ಸ್ಯಾಮ್ಸನ್‌ಗೆ ನಾಯಕನ ಪಟ್ಟ

India A squad announced for One Day series against New Zealand A, Sanju Samson to lead

ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯಲು ವಿಫಲವಾಗಿರುವ ಬಳಿಕ ಅಭಿಮಾನಿಗಳು ಸಾಕಷ್ಟು ನಿರಾಸೆಗೆ ಒಳಗಾಗಿದ್ದರು, ಸಾಕಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದೆ. ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಅಭಿಮಾನಿಗಳು ಸಣ್ಣ ಸಮಾಧಾನ ಪಡುವಂತೆ ಸುದ್ದಿಯೊಂದು ಹೊರಬಿದ್ದಿದೆ. ನ್ಯೂಜಿಲೆಂಡ್ ಎ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ನಾಯಕತ್ವವನ್ನು ಸಂಜು ಸ್ಯಾಮ್ಸನ್‌ಗೆ ನೀಡಲಾಗಿದೆ.

ಈ ವರ್ಷ ಭಾರತ ತಂಡದಲ್ಲಿ ಟಿ20 ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ಸಂಜು ಸ್ಯಾಮ್ಸನ್ ಅದ್ಭುತವಾಗಿ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿದ್ದರೂ, ಐಪಿಎಲ್‌ನಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದ್ದರೂ ವಿಶ್ವಕಪ್‌ನ ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿತ್ತು. ಇಂಥಾ ಸಂದರ್ಭದಲ್ಲಿ ಭಾರತ ಎ ತಂಡದ ನಾಯಕತ್ವ ನೀಡಿರುವ ಕಾರಣ ಬಿಸಿಸಿಐ ಸಂಜು ಸ್ಯಾಮ್ಸನ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿಲ್ಲ ಎಂಬ ಸೂಚನೆ ಬಂದಂತಾಗಿದೆ.

ಮೂರು ಪಂದ್ಯಗಳ ಏಕದನ ಸರಣಿ ಇದಾಗಿದ್ದು ಇದರ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯಕ್ಕಾಗಿ ಭಾರತ ಎ ತಂಡದ ಸ್ಕ್ವಾಡ್ ಘೋಷಣೆ ಮಾಡಲಾಗಿದೆ. ಈ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಭಾರತ ಎ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 22ರಂದು ನಡೆದರೆ ಎರಡನೇ ಪಂದ್ಯ ಸೆಪ್ಟೆಂಬರ್ 25ರಂದು ಆಯೋಜನೆಯಾಗಲಿದೆ. ಈ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಸೆಪ್ಟೆಂಬರ್ 27ರಂದು ಆಯೋಜನೆಯಾಗಲಿದೆ.

ಸಂಜು ಸ್ಯಾಮ್ಸನ್ ಈ ಬಾರಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ರಾಜಸ್ಥಾನ ರಾಯಲ್ಸ್ ತಂಡದ ನಾಯಕಯತ್ವ ವಹಿಸಿಕೊಂಡಿರುವ ಸಂಜು ಸ್ಯಾಮ್ಸನ್ ಈ ಬಾರಿ ತಂಡವನ್ನು ಫೈನಲ್ ಹಂತದವರೆಗೆ ಮುನ್ನಡೆಸಿದ್ದರು. ಆಡಿರುವ 17 ಪಂದ್ಯಗಳಲ್ಲಿ ಸಂಜು 28.63ರ ಸರಾಸರಿಯಲ್ಲಿ 458 ರನ್‌ಗಳಿಸಿದ್ದಾರೆ. 146.79ರಷ್ಟು ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ ಸಂಜು ಬ್ಯಾಟಿಂಗ್ ಮಾಡಿದ್ದಾರೆ.

ರಾಷ್ಟ್ರೀಯ ತಂಡದ ಪರವಾಗಿಯೂ ಅದ್ಭುತ ಪ್ರದರ್ಶನ: ಇನ್ನು ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ರಾಷ್ಟ್ರೀಯ ತಂಡದಲ್ಲಿಯೂ ಮುಂದುವರಿದಿದ್ದರು ಎಂಬುದು ಗಮನಾರ್ಹ ಅಂಶ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಾರಿ ಸಂಜು ಆರು ಟಿ20 ಪಂದ್ಯಗಳನ್ನು ಭಾರತದ ಪರವಾಗಿ ಆಡಿದ್ದು ಐದು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇದರಲ್ಲಿ ಎರಡು ಬಾರಿ ಅರ್ಧ ಶತಕದ ಗಡಿ ದಾಟಿದ್ದಾರೆ. 44.75ರ ಸರಾಸರಿಯಲ್ಲಿ ಸಂಜು 179 ರನ್‌ಗಳನ್ನು ಭಾರತದ ಪರವಾಗಿ ಟಿ20 ಮಾದರಿಯಲ್ಲಿ ಗಳಿಸಿದ್ದಾರೆ.

ಇನ್ನು ಈ ವರ್ಷದಲ್ಲಿ ಸಂಜು ಸ್ಯಾಮ್ಸನ್ ಆರು ಏಕದಿನ ಪಂದ್ಯಗಳನ್ನು ಆಡಿದ್ದು ಇದರಲ್ಲಿ ಐದು ಪಂದ್ಯಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಐರ್ಲೆಂಡ್ ವಿರುದ್ಧ ಒಂದು ಅರ್ಧ ಶತಕವನ್ನು ಕೂಡ ಸಂಜು ಬಾರಿಸಿದ್ದು 77 ರನ್‌ಗಳ ಕೊಡುಗೆ ನೀಡಿದ್ದರು. ಭಾರತದ ಪರ ಏಕಚಿನ ಮಾದರಿಯಲ್ಲಿ ಸಂಜು ಈ ವರ್ಷ 43.33ರ ಸರಾಸರಿಯಲ್ಲಿ 130 ರನ್‌ಗಳನ್ನು ಗಳಿಸಿದ್ದಾರೆ.

ಭಾರತ ಎ ತಂಡ ಸಂಪೂರ್ಣ ಸ್ಕ್ವಾಡ್: ಸಂಜು ಸ್ಯಾಮ್ಸನ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಸಂಜು ಸ್ಯಾಮ್ಸನ್, ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಾಭಾಜ್ ಅಹ್ಮದ್, ರಾಹುಲ್ ಚಹಾರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ ಮತ್ತು ರಾಜ್ ಅಂಗದ್ ಬಾವಾ.

Story first published: Saturday, September 17, 2022, 10:55 [IST]
Other articles published on Sep 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+