For Quick Alerts
ALLOW NOTIFICATIONS  
For Daily Alerts
 

IND A vs AUS A: ಭಾರತ ಎ ಪರ ಅಬ್ಬರಿಸಿದ ಕನ್ನಡಿಗರು, ಮುಕೇಶ್ ಗೆ 6 ವಿಕೆಟ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಧಿಕೃತ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡದ ಬೌಲರ್ ಗಳು ಅಬ್ಬರ ನಡೆಸಿದ್ದಾರೆ. ಉಭಯ ತಂಡಗಳ ನಡುವಿನ ಎರಡು ಅನಧಿಕೃತ ಟೆಸ್ಟ್ ನಡೆಯಲಿವೆ. ಈ ಸರಣಿಯ ಮೊದಲ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಎರಡನೇ ದಿನ ಅಬ್ಬರಿಸಿದ್ದಾರೆ.‌ ಮೊದಲ ದಿನವನ್ನು ಆಸೀಸ್ ತನ್ನ ಹೆಸರಿಗೆ ಮಾಡಿಕೊಂಡರೆ ಎರಡನೇ ದಿನದಾಟವನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಮಾಡಿಕೊಂಡಿದೆ.

ಶುಕ್ರವಾರ 4 ವಿಕೆಟ್ ಗೆ 99 ರನ್ ಗಳಿಂದ ಆಟ ಮುಂದುವರಿಸಿದ ಆತಿಥೇಯ ಆಸೀಸ್ ತಂಡ 195 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಆತಿಥೇಯ ತಂಡ 88 ರನ್ ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿದ್ದು, 120 ರನ್ ಮುನ್ನಡೆ ಸಾಧಿಸಿದೆ.

India A Takes Command in First Test Against Australia A with Stellar Bowling Performance

ಆಸ್ಟ್ರೇಲಿಯಾದ ಪರ ಯಾವೊಬ್ಬ ಬ್ಯಾಟರ್ ಮೊದಲ ಇನಿಂಗ್ಸ್ ನಲ್ಲಿ ಸಮಯೋಚಿತ ಆಟವನ್ನು ಆಡಲಿಲ್ಲ. ಯಾವೊಬ್ಬ ಬ್ಯಾಟರ್ ಅರ್ಧಶತಕದ ಗಡಿ ಸಹ ಮುಟ್ಟಲಿಲ್ಲ. ಭಾರತದ ಪರ ಸ್ಟಾರ್ ಬೌಲರ್ ಅಬ್ಬರ ನಡೆಸಿದರು.

ಮುಕೇಶ್ ಗೆ 6 ವಿಕೆಟ್

ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವೇಗಿ ಮುಖೇಶ್ ಕುಮಾರ್ ಅವರು 18.4 ಓವರ್ ಬೌಲ್ ಮಾಡಿ 46 ರನ್ ನೀಡಿ 6 ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯ ವಿರುದ್ಧ ನವೆಂಬರ್ 22 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ತಂಡದಲ್ಲಿದ್ದ ಸ್ಥಾನ ಪಡೆದಿರುವ ಪ್ರಸಿದ್ಧ್ ಕೃಷ್ಣ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಇವರು ಮೂರು ವಿಕೆಟ್ ಕಬಳಿಸಿದರು. ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಆಲ್ ರೌಂಡರ್ ರೂಪದಲ್ಲಿ ಸ್ಥಾನ ಪಡೆದಿರುವ ನತೀಶ್ ರೆಡ್ಡಿ ಒಂದು ವಿಕೆಟ್ ಪಡೆದರು.

ರನ್ ಗಾಗಿ ಪರದಾಟ

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಪೆವಿಲಿಯನ್‌ಗೆ ಮರಳಿದ್ದ ನಾಯಕ ರುತುರಾಜ್ ಗಾಯಕ್ವಾಡ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೇವಲ 5 ರನ್ ಗಳಿಸಿ ಔಟಾದರು. . ಇದಲ್ಲದೇ ಅಭಿಮನ್ಯು ಈಶ್ವರನ್ 12 ರನ್ ಸೇರಿಸಿ ಇಲ್ಲದ‌ ರನ್ ಕದಿಯಲು ಹೋಗಿ ಔಟ್ ಆದರು.

ಮೂರನೇ ವಿಕೆಟ್ ಗೆ ಅಮೋಘ ಜೊತೆಯಾಟ

30 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೇವದತ್ ಪಡಿಕ್ಕಲ್ ಹಾಗೂ ಸಾಯ್ ಸುದರ್ಶನ್ ಅವರು ‌ಸೊಬಗಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇಬ್ಬರೂ ಶತಕದತ್ತ ಮುಖ ಮಾಡಿದ್ದು ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ. ಸುದರ್ಶನ್ ಅಜೇಯ 96 ಹಾಗೂ ದೇವದತ್ ಪಡಿಕಲ್ ಅಜೇಯ 80 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Friday, November 1, 2024, 16:19 [IST]
Other articles published on Nov 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+