ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ, ಮನೀಶ್, ಕರುಣ್ ಕ್ಯಾಪ್ಟನ್ಸ್
ನವದೆಹಲಿ, ಜೂನ್ 29: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ(ಜೂನ್ 29) ಪ್ರಕಟಿಸಿದೆ.
ಭಾರತ 'ಎ' ತಂಡವು ಜುಲೈ ಹಾಗೂ ಆಗಸ್ಟ್ ನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಪಂದ್ಯ ಹಾಗೂ ನಾಲ್ಕು ದಿನಗಳ ಪಂದ್ಯವನ್ನಾಡಲಿದೆ. ಆಸ್ಟ್ರೇಲಿಯಾ 'ಎ' ಹಾಗೂ ದಕ್ಷಿಣ ಆಫ್ರಿಕಾ 'ಎ' ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯನ್ನು ಭಾರತ 'ಎ' ತಂಡವು ಆಡಲಿದೆ.

ಏಕದಿನ ತಂಡಕ್ಕೆ ಮನೀಶ್ ಪಾಂಡೆ ನಾಯಕರಾಗಿದ್ದರೆ, ನಾಲ್ಕು ದಿನಗಳ ಪಂದ್ಯಕ್ಕೆ ಕರುಣ್ ನಾಯರ್ ನಾಯಕರಾಗಿದ್ದಾರೆ. ಇವರಿಬ್ಬರಿಗೆ ನಾಯಕತ್ವವನ್ನು ನೀಡುವ ಮೂಲಕ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯಿಂದ ದೂರವಿರಿಸಲಾಗುತ್ತಿದೆ.
ಏಕದಿನ ತಂಡ : ಮನ್ದೀಪ್ ಸಿಂಗ್, ಶ್ರೇಯಸ್ ಐಯರ್, ಸಂಜು ಸಾಮ್ಸನ್, ಮನೀಶ್ ಪಾಂಡೆ (ನಾಯಕ), ದೀಪಕ್ ಹೂಡಾ, ಕರುಣ್ ನಾಯರ್, ಕೃನಾಲ್ ಪಾಂಡ್ಯ, ರಿಷಬ್ ಪಂತ್ (ವಿಕೆಟ್ ಕೀಪರ್),ವಿಜಯ್ ಶಂಕರ್, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಜಯಂತ್ ಯಾದವ್, ಬಸಿಲ್ ಥಂಪಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಸಿದ್ದಾರ್ಥ್ ಕೌಲ್.

ಟೆಸ್ಟ್ ತಂಡ: ಪಿಕೆ ಪಾಂಚಾಲ್, ಅಭಿನವ್ ಮುಕುಂದ್, ಶ್ರೇಯಸ್ ಐಯರ್, ಅಂಕಿತ್ ಬಾವ್ನೆ, ಕರುಣ್ ನಾಯರ್ (ನಾಯಕ), ಸುದೀಪ್ ಚಟರ್ಜಿ, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಹನುಮ ವಿಹಾರಿ, ಜಯಂತ್ ಯಾದವ್, ಶಾಬಾಜ್ ನದೀಮ್, ನವದೀಪ್ ಸೈನಿ, ಮೂಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಅಂಕಿತ್ ಚೌಧರಿ, ಅಂಕಿತ್ ರಜಪೂತ್
| S.No | Date | Match | Venue |
| 1st ಏಕದಿನ ಪಂದ್ಯ | ಜುಲೈ 26 | ಭಾರತ 'A' vs ಆಸ್ಟ್ರೇಲಿಯಾ 'A' | Groenkloof |
| 2nd ಏಕದಿನ ಪಂದ್ಯ | ಜುಲೈ 28 | ದಕ್ಷಿಣ ಆಫ್ರಿಕಾ 'A' vs India 'A' | Tukkies |
| 3rd ಏಕದಿನ ಪಂದ್ಯ | ಜುಲೈ 30 | ದಕ್ಷಿಣ ಆಫ್ರಿಕಾ 'A' vs ಆಸ್ಟ್ರೇಲಿಯಾ 'A' | Groenkloof |
| 4th ಏಕದಿನ ಪಂದ್ಯ | ಆಗಸ್ಟ್ 1 | ಭಾರತ 'A' vs ಆಸ್ಟ್ರೇಲಿಯಾ 'A' | Tukkies |
| 5th ಏಕದಿನ ಪಂದ್ಯ | ಆಗಸ್ಟ್ 3 | ದಕ್ಷಿಣ ಆಫ್ರಿಕಾ 'A' vs ಭಾರತ 'A' | Groenkloof |
| 6th ಏಕದಿನ ಪಂದ್ಯ | ಆಗಸ್ಟ್ 5 | ದಕ್ಷಿಣ ಆಫ್ರಿಕಾ 'A' vs ಆಸ್ಟ್ರೇಲಿಯಾ 'A' | Groenkloof |
| ಫೈನಲ್ | ಆಗಸ್ಟ್ 8 | TBC vs TBC | Tukkies |
* ಮೊದಲ ನಾಲ್ಕು ದಿನಗಳ ಪಂದ್ಯ ಆಗಸ್ಟ್ 12-15 ದಕ್ಷಿಣ ಆಫ್ರಿಕಾ 'ಎ' ವಿರುಧ ಭಾರತ 'ಎ' ಬೆನೊನಿ.
* ಎರಡನೇ ನಾಲ್ಕು ದಿನಗಳ ಪಂದ್ಯ ಆಗಸ್ಟ್ 19-22 ದಕ್ಷಿಣ ಆಫ್ರಿಕಾ 'ಎ' ವಿರುಧ ಭಾರತ 'ಎ' ಸೆನ್ವೆಸ್ ಪಾರ್ಕ್(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications