ಭಾರತ 'ಎ' vs ಆಸ್ಟ್ರೇಲಿಯಾ 'ಎ' ಅಭ್ಯಾಸ ಪಂದ್ಯ: ಮೊದಲ ದಿನದಾಟದಲ್ಲಿ ರಹಾನೆ ಶತಕ

ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ ಇಂದಿನಿಂದ ಅಭ್ಯಾಸ ಪಂದ್ಯ ಆರಂಭವಾಗಿದೆ. ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಈ ಅಭ್ಯಾಸ ಪಂದ್ಯವನ್ನು ಹಮ್ಮಿಕೊಳ್ಳಲಾಗಿದ್ದು ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ನೀಡಿದ್ದಾರೆ.
ಭಾರತ ಮೊದಲು ಬ್ಯಾಟಿಂಗ್ ನಡೆಸಿದ್ದು ಯುವ ಆರಂಭಿಕ ಜೋಡಿ ಪೃಥ್ವಿ ಶಾ ಹಾಗೂ ಶುಭ್‌ಮನ್ ಗಿಲ್ ತಂಡಕ್ಕೆ ನಿರಾಸೆ ಉಂಟಿ ಮಾಡಿದರು. ಇಬ್ಬರು ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಚೇತೇಶ್ವರ್ ಪೂಜಾರ ಅರ್ಧ ಶತಕವನ್ನು ಸಿಡಿಸಿದರು. 140 ಎಸೆತಗಳನ್ನು ಎದುರಿಸಿದ ಪೂಜಾರ 54 ರನ್ ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ನಾಯಕ ರಹಾನೆ ಶತಕದ ಪ್ರದರ್ಶನವನ್ನು ನೀಡಿದ್ದಾರೆ. 228 ಎಸೆತ ಎದುರಿಸಿದ ರಹಾನೆ 108 ರನ್ ಗಳಿಸಿ ಔಟಾಗದೆ ಆಟ ಕಾಯ್ದುಕೊಂಡಿದ್ದಾರೆ. ಉಳಿದಂತೆ ಹನುಮ ವಿಹಾರಿ 15 ರನ್ ಗಳಿಸಿದರೆ ವೃದ್ಧಿಮಾನ್ ಸಾಹಾ ಶೂನ್ಯ ಸುತ್ತಿದ್ದಾರೆ. ಆರ್ ಅಶ್ವಿನ್ 5, ಕುಲ್‌ದೀಪ್ ಯಾದವ್ 15, ಹಾಗೂ ಉಮೇಶ್ ಯಾದವ್ 24 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.
ಆಸ್ಟ್ರೇಲಿಯಾ ಎ ತಂಡದ ಪರವಾಗಿ ಪ್ಯಾಟಿನ್ಸನ್ 3 ವಿಕೆಟ್ ಪಡೆದ ಮೈಕಲ್ ನೀಸರ್ ಹಾಗೂ ಟ್ರೇವಿಸ್ ಹೆಡ್ ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ. ಜಾಕ್ಸನ್ ಬರ್ಡ್ ಒಂದು ವಿಕೆಟ್ ಪಡೆದುಕೊಂಡರು. ಮೊದಲ ದಿನದಾಟ ಅಂತ್ಯವಾಗಿದ್ದು ಭಾರತ 237 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications