ಭಾರತ ಎ ಪರ ಐವರ ಅರ್ಧಶತಕ: ನ್ಯೂಜಿಲೆಂಡ್ ವಿರುದ್ಧ ಉತ್ತಮ ಮೊತ್ತ

ವೆಲ್ಲಿಂಗ್ಟನ್, ನವೆಂಬರ್ 17: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ನಾಲ್ಕು ದಿನಗಳ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಎರಡನೆ ದಿನ ನ್ಯೂಜಿಲೆಂಡ್ ಮರುಹೋರಾಟ ನಡೆಸಿದೆ.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 467 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆತಿಥೇಯರು ಆರಂಭಿಕ ಆಟಗಾರ ಹಮೀಶ್ ರುದರ್‌ಫೋರ್ಡ್ ಅವರ ಅಜೇಯ ಶತಕದ ನೆರವಿನಿಂದ ಎರಡನೆಯ ದಿನದಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 170 ರನ್ ಪೇರಿಸಿದೆ.
ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿದ್ದ ಭಾರತ, ಪಾರ್ಥಿವ್ ಪಟೇಲ್, ವಿಜಯ್ ಶಂಕರ್ ಅವರ ಅರ್ಧ ಶತಕ ಮತ್ತು ಕೆ. ಗೌತಮ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 467 ರನ್ ಕಲೆ ಹಾಕಿತು. ಬಳಿಕ ನಾಯಕ ಅಜಿಂಕ್ಯ ರಹಾನೆ ಇನ್ನಿಂಗ್ ಡಿಕ್ಲೇರ್ ಮಾಡಿಕೊಂಡರು.
ಮೊದಲ ದಿನ ಭಾರತದ ಪರ ಪೃಥ್ವಿ ಶಾ, ಮಯಾಂಕ್ ಅಗರವಾಲ್ ಮತ್ತು ಹನುಮ ವಿಹಾರಿ ಅರ್ಧಶತಕ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಭಾರತ, ಮೊದಲ ಇನ್ನಿಂಗ್ಸ್: 467/8 (122.1). ಪೃಥ್ವಿ ಶಾ 62, ಮಯಾಂಕ್ ಅಗರವಾಲ್ 65, ಹನುಮ ವಿಹಾರಿ 86, ಪಾರ್ಥಿವ್ ಪಟೇಲ್ 94, ವಿಜಯ್ ಶಂಕರ್ 62, ಕೆ. ಗೌತಮ್ 47. ಮುರಳಿ ವಿಜಯ್ 28, ಅಜಿಂಕ್ಯ ರಹಾನೆ 12, ಬ್ಲೇರ್ ಟಿಕ್ನರ್ 80/4, ರವಿನ್ ರವೀಂದ್ರ 56/1
ನ್ಯೂಜಿಲೆಂಡ್, ಮೊದಲ ಇನ್ನಿಂಗ್ಸ್: 170/1 (51) ಹಮೀಶ್ ರುದರ್‌ಫೋರ್ಡ್ 100, ವಿಲ್ ಯಂಗ್ 49, ಕೆ. ಗೌತಮ್ 33/1.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications