ಭಾರತ ಎ- ದಕ್ಷಿಣ ಆಫ್ರಿಕಾ ಎ ಟೆಸ್ಟ್ ಕ್ರಿಕೆಟ್ ಡ್ರಾದಲ್ಲಿ ಅಂತ್ಯ

ಬೆಂಗಳೂರು, ಆಗಸ್ಟ್ 13: ಬೆಂಗೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ ಎರಡನೆಯ ಅನಧಿಕೃತ ಟೆಸ್ಟ್ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.
ಮೊದಲ ಟೆಸ್ಟ್‌ನಲ್ಲಿ ಜಯಿಸಿದ್ದ ಭಾರತ ತಂಡಕ್ಕೆ ಮಳೆ ಒಂದೆಡೆ ಅಡ್ಡಿಯಾದರೆ, ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಆಟಗಾರರ ಮರು ಹೋರಾಟ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಕಾಣಲು ಕಾರಣವಾಯಿತು.
ಮೂರನೇ ದಿನದ ಅಂತ್ಯಕ್ಕೆ 294 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಸೋಮವಾರ 15 ರನ್ ಗಳಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್ ಕಳೆದುಕೊಂಡಿತು.
26 ರನ್‌ಗಳ ಮುನ್ನಡೆಯೊಂದಿಗೆ ಎರಡನೆಯ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲಿಯೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಪೃಥ್ವಿ ಶಾ ಪುನಃ ವಿಫಲರಾದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಬಾರಿಸಿದ್ದ ಹನುಮ ವಿಹಾರಿ ಸೊನ್ನೆಗೆ ಔಟಾದರು.
ಮಯಂಕ್ ಅಗರ್ವಾಲ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ನಾಯಕ ಶ್ರೇಯಸ್ ಅಯ್ಯರ್ ಮತ್ತು ಅಂಕಿತ್ ಭಾವ್ನೆ ಉತ್ತಮ ಜತೆಯಾಟ ನೀಡಿದರು. 4 ವಿಕೆಟ್ ನಷ್ಟಕ್ಕೆ 181 ರನ್ ದಾಖಲಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲು ತೀರ್ಮಾನಿಸಲಾಯಿತು. ಈ ವೇಳೆ ಭಾರತ ಒಟ್ಟು 207 ರನ್ ಮುನ್ನಡೆ ಪಡೆದಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ ಎ: 345 & 181/4 (51) ಶ್ರೇಯಸ್ ಅಯ್ಯರ್ 65, ಅಂಕಿತ್ ಭಾವ್ನೆ 64*, ಮಯಂಕ್ ಅಗರ್ವಾಲ್ 28. ಡುಯನ್ನೆ ಒಲಿವರ್ 24/2, ಸೆನುರನ್ ಮುತ್ತುಸ್ವಾಮಿ 45/2
ದಕ್ಷಿಣ ಆಫ್ರಿಕಾ ಎ: 319/10 (98.2) ಜುಬಯರ್ ಹಮ್ಜಾ 93, ಸರೆಲ್ ಎರ್ವೀ 58, ರೂಡಿ ಸೆಕಂಡ್ 47, ಮೊಹಮ್ಮದ್ ಸಿರಾಜ್ 72/4, ಅಂಕಿತ್ ರಜಪೂತ್ 52/3.
ಫಲಿತಾಂಶ: ನಾಲ್ಕು ದಿನಗಳ ಪಂದ್ಯ ಡ್ರಾ. ಭಾರತಕ್ಕೆ 1-0ಯಿಂದ ಸರಣಿ ಜಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications