15 ವರ್ಷದ ವೈಭವ್ ಸೂರ್ಯವಂಶಿ ಕೆಣಕಿದ ಶ್ರೀಲಂಕಾ ಆಟಗಾರನಿಗೆ ಶಿಕ್ಷೆಯ ಬರೆ
ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯವು ಭಾರೀ ಹೈ-ವೋಲ್ಟೇಜ್‌ನಿಂದ ಕೂಡಿತ್ತು. ಸೂಪರ್ ಓವರ್ ಮುಕ್ತಾಯ ಬಳಿಕ ಉಭಯ ಆಟಗಾರರ ನಡುವೆ ತೀವ್ರ ತಳ್ಳಾಟ ಮತ್ತು ಜಗಳದ ಘಟನೆಯು ಕ್ರೀಡಾಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಗಲಾಟೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಂಡಳಿಯು ತಪ್ಪಿತಸ್ಥ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಸೋಮಾವರ ದುಂಬಾಲದಲ್ಲಿ ನಡೆದ ಪಂದ್ಯದಲ್ಲಿ ಭಾರತ 'ಎ' ಹಾಗೂ ಶ್ರೀಲಂಕಾ 'ಎ' ತಂಡಗಳು ಕಾದಾಟ ನಡೆಸಿದವು. ಈ ವೇಳೆ ಉಭಯ ತಂಡಗಳು ನಿಗದಿತ ಓವರ್‌ಗಳಲ್ಲಿ 265 ರನ್ ಗಳಿಸಿದ್ದರಿಂದ ಪಂದ್ಯದ ಫಲಿತಾಂಶವನ್ನು ಅರಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಶ್ರೀಲಂಕಾ 'ಎ' 6 ರನ್‌ಗಳಿಂದ ಜಯ ಸಾಧಿಸಿತು. ಆ ಬಳಿಕ ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕ್ರೀಡಾ ಮನೋಭಾವಕ್ಕೆ ಧಕ್ಕೆ
ವಿಶನ್ ಹಲಾಂಬೆಗೆ ಅವರ ಅಸಹಜ ನಡವಳಿಕೆ ಹಾಗೂ ಕ್ರೀಡಾ ಮನೋಭಾವಕ್ಕೆ ಧಕ್ಕೆ ತರುವಂತಹ ವರ್ತನೆಯೇ ಮೈದಾನದಲ್ಲಿ ಜಗಳ ತಾರಕಕ್ಕೇರಲು ಪ್ರಮುಖ ಕಾರಣ ಎಂದು ಪಂದ್ಯದ ರೆಫರಿ ತೀರ್ಮಾನಿಸಿದ್ದಾರೆ. ಅವರೊಂದಿಗೆ ಘಟನೆಯಲ್ಲಿ ಭಾಗಿಯಾಗಿದ್ದ ಇತರ ಕೆಲವು ಆಟಗಾರರ ಮೇಲೆಯೂ ಆಟದ ನಿಯಮಾವಳಿಗಳನ್ನು ಉಲ್ಲಂಘಿಸಿದ ಗಂಭೀರ ಆರೋಪಗಳನ್ನು ಹೊರಿಸಲಾಗಿದ್ದು, ದಂಡ ವಿಧಿಸಲಾಗಿದೆ ಎಂದು ವರದಿಗಳು ಬಂದಿವೆ.
ಪಂದ್ಯದ ಅಧಿಕೃತ ರೆಫರಿ ಪ್ರದೀಪ್ ಜಯಪ್ರಕಾಶ್ ಅವರು ಆನ್-ಫೀಲ್ಡ್ ಅಂಪೈರ್‌ಗಳು ನೀಡಿದ ವರದಿಯ ಆಧಾರದ ಮೇಲೆ ತನಿಖೆ ನಡೆಸಿ, ತಪ್ಪಿತಸ್ಥ ಆಟಗಾರರಿಗೆ ಕಠಿಣ ದಂಡದ ಜತೆಗೆ ಪಂದ್ಯದ ನಿಷೇಧದ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಈ ಇಡೀ ವಿವಾದದ ಕೇಂದ್ರ ಬಿಂದು ಎಂದು ಶ್ರೀಲಂಕಾ 'ಎ' ತಂಡದ ಯುವ ಪ್ರತಿಭೆ ವಿಶನ್ ಹಲಾಂಬೆಗೆ ಅವರನ್ನು ಗುರುತಿಸಲಾಗಿದ್ದು, ಅವರ ಮೇಲೆಯೇ ಈಗ ಕಠಿಣ ಶಿಸ್ತು ಕ್ರಮದ ತೂಗುಗತ್ತಿ ಬಿದ್ದಿದೆ.
ನಿರೋಶನ್‌ಗೆ ದಂಡ ಏಕೆ?
ಅಂದಹಾಗೆ ಈ ಪ್ರಕರಣದಲ್ಲಿ ವಿಶನ್ ಹಲಾಂಬೆ ತಪ್ಪು ಮಾಡಿದ್ದ ಸ್ಪಷ್ಟವಾಗಿ ಕಾಣುತ್ತದೆ. ವಿಶಲ್ ಹಲಾಂಬೆ ಹಾಗೂ ವೈಭವ್ ಸೂರ್ಯವಂಶಿ ನಡುವೆ ಕಿತ್ತಾಟ ನಡೆದಾಗ ಹಿರಿಯ ಆಟಗಾರನಾಗಿ ಡಿಕ್ವೆಲ್ಲಾ ಅಲ್ಲಿಗೆ ಓಡಿಬಂದು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸುತ್ತಿದ್ದರು. ಆದರೂ ರೆಫರಿ ಡಿಕ್ವೆಲ್ಲಾ ಅವರಿಗೂ ದಂಡ ವಿಧಿಸಿರುವುದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ.
ಆದರೆ ಈ ಗೊಂದಲಕ್ಕೆ ಸಂಬಂಧಿಸಿದಂತೆ ಪಂದ್ಯದ ಅಧಿಕಾರಿಗಳು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಡಿಕ್ವೆಲ್ಲಾ ಅವರಿಗೆ ವಿಧಿಸಲಾಗಿರುವ ಶಿಕ್ಷೆಯು ವೈಭವ್ ಸೂರ್ಯವಂಶಿ ಮತ್ತು ಹಲಾಂಬೆಗೆ ನಡುವೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲ. ಇವರು ಮೈದಾನದಲ್ಲಿ ನಿಯಮ ಬಾಹಿರವಾಗಿ ವರ್ತಿಸಿದ್ದಾರೆ. ಅತಿಯಾದ ಅಪೀಲಿಂಗ್ ಮಾಡಿದ್ದು ಹಾಗೂ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ಪ್ರದರ್ಶಿಸಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಶ್ರೀಲಂಕಾದ ಆಟಗಾರನ ನಡವಳಿಕೆಗೆ ನೇರವಾಗಿ ಆಕ್ಷೇಪ ವ್ಯಕ್ತಪಡಿಸಿ ಘರ್ಷಣೆಯಲ್ಲಿ ಭಾಗಿಯಾಗಿದ್ದ ಭಾರತದ ಅತ್ಯಂತ ಕಿರಿಯ ಹಾಗೂ ಪ್ರತಿಭಾನ್ವಿತ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲಾಗಿರುವ ಕ್ರಮಗಳ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಭಾರತದ ಈ 15 ವರ್ಷದ ಅದ್ಭುತ ಆಟಗಾರನಿಗೆ ಮ್ಯಾಚ್ ರೆಫರಿ ಯಾವ ರೀತಿಯ ಶಿಕ್ಷೆ ನೀಡಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ.
ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಅವರು ಈ ಪ್ರಕರಣದಲ್ಲಿ ಪಂದ್ಯದ ಅಂಪೈರ್‌ಗಳು ನೀಡಿದ ಅಧಿಕೃತ ವರದಿಯ ಆಧಾರದ ಮೇಲೆ ನೇರ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ಅಹವಾಲು ಆಲಿಸಲು ನಡೆಸಲಾಗುವ ಯಾವುದೇ ರೀತಿಯ ಔಪಚಾರಿಕ ವಿಚಾರಣಾ ಸಭೆಯನ್ನು ನಡೆಸಲಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications