ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಈಗ ಭಾರತ ತಂಡದ ಓವಲ್‌ನತ್ತ ಮುಖ ಮಾಡಿದೆ. ಜುಲೈ 31 ರಿಂದ ಓವಲ್ ಮೈದಾನದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ಸದ್ಯ ಇಂಗ್ಲೆಂಡ್ ಸರಣಿಯಲ್ಲಿ 1-2ರಿಂದ ಮುಂದಿದೆ. ಓವಲ್ ಪಂದ್ಯವನ್ನು ಗೆದ್ದ ಸರಣಿಯಲ್ಲಿ ಡ್ರಾ ಸಾಧಿಸುವ ಇರಾದೆಯನ್ನು ಟೀಮ್ ಇಂಡಿಯಾ ಹೊಂದಿದೆ.
ಓವಲ್‌ನಲ್ಲಿ ಟೀಮ್ ಇಂಡಿಯಾದ ಸಾಧನೆಯನ್ನು ನೋಡಿದರೆ ಅಮೋಘವಾಗಿದೆ. ಈ ಅಂಗಳದಲ್ಲಿ ಇಬ್ಬರು ಭಾರತೀಯ ನಾಯಕರು ಮಾತ್ರ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಈ ಮೈದಾನದಲ್ಲಿ ಭಾರತದ ನಾಯಕರಾಗಿ ಅಜಿತ್ ವಾಡೇಕರ್ ಹಾಗೂ ವಿರಾಟ್ ಕೊಹ್ಲಿ ಮಾತ್ರ ಗೆಲುವು ದಾಖಲಿಸಿದ್ದಾರೆ. ಈ ಪಟ್ಟಿಗೆ ಸೇರಲು ಶುಭಮನ್‌ಗಿಲ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಈ ಮೈದಾನದಲ್ಲಿ ಟೀಮ್ ಇಂಡಿಯಾ 1971ರಲ್ಲಿ ಮೊದಲ ಬಾರಿಗೆ ಗೆಲುವು ದಾಖಲಿಸಿದೆ. ಈ ವೇಳೆ ಅಜಿತ್ ವಾಡೇಕರ್ ಮುಂದಾಳತ್ವದ ತಂಡ 4 ವಿಕೆಟ್‌ಗಳಿಂದ ಪಂದ್ಯ ಗೆದ್ದು ಬೀಗಿತ್ತು. ಇನ್ನು ಎರಡನೇ ಬಾರಿಗೆ ಈ ಮೈದಾನದಲ್ಲಿ ಗೆಲುವು ದಾಖಲಿಸಿದ್ದು 2021. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಭಾರತ 157 ರನ್‌ಗಳಿಂದ ಪಂದ್ಯ ಗೆದ್ದಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿ ಮಿಂಚಿದ್ದರು.
ಟೀಮ್ ಇಂಡಿಯಾ ನೂತನ ನಾಯಕ ಶುಭಮನ್ ಗಿಲ್ ಅವರು ಒವಲ್ ಅಂಗಳದಲ್ಲಿ ಒಂದೇ ಕಲ್ಲಿಗೆ ಎರಡು ದಾಖಲೆ ನಿರ್ಮಿಸುವತ್ತ ಚಿತ್ತ ನೆಟ್ಟಿದ್ದಾರೆ. ಒವಲ್ ಪಂದ್ಯ ಗೆಲ್ಲುವಲ್ಲಿ ಟೀಮ್ ಇಂಡಿಯಾ ಸಫಲರಾದರೆ, ಗಿಲ್ ಈ ಮೈದಾನದಲ್ಲಿ ಪಂದ್ಯ ಗೆದ್ದ ಮೂರನೇ ನಾಯಕ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2 ರಿಂದ ಡ್ರಾ ಸಾಧಿಸಿದ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಈ ಸಾಧನೆಯನ್ನು ಮಾಡಲು ಟೀಮ್ ಇಂಡಿಯಾ ಒವಲ್ ಅಂಗಳದಲ್ಲಿ ಅಮೋಘ ಪ್ರದರ್ಶನ ನೀಡಬೇಕು.

ಓವಲ್ ಅಂಗಳದಲ್ಲಿ ಭಾರತ ಒಟ್ಟ 15 ಪಂದ್ಯಗಳನ್ನು ಆಡಿದೆ. ಈ ವೇಳೆ 2ರಲ್ಲಿ ಜಯ, 6ರಲ್ಲಿ ಸೋಲು ಕಂಡಿದೆ. ಈ ಮೈದಾನದಲ್ಲಿ 7 ಪಂದ್ಯಗಳು ಡ್ರಾ ಆಗಿವೆ. 2023ರಲ್ಲಿ ಭಾರತ ಈ ಮೈದಾನದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿತ್ತು. 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಇದೇ ಅಂಗಳದಲ್ಲಿ ನಡೆದಿತ್ತು. ಅಲ್ಲದೆ ಭಾರತ ಆ ಪಂದ್ಯದಲ್ಲಿ 209 ರನ್‌ಗಳಿಂದ ಸೋಲು ಕಂಡಿತ್ತು. ಈ ಮೈದಾನದಲ್ಲಿ ಭಾರತ 13 ವರ್ಷಗಳ ಬಳಿಕ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆದ್ದು ಸರಣಿಯಲ್ಲಿ ಡ್ರಾ ಸಾಧಿಸ ಬೇಕಿದ್ದಲ್ಲಿ ಸಂಘಟಿತ ಆಟದ ಅವಶ್ಯಕತೆ ಇದೆ.