Bengaluru Test: ಭಾರತದ ಪಾಲಿಗೆ ಎಂ.ಚಿನ್ನಸ್ವಾಮಿ ಲಕ್ಕಿ ಗ್ರೌಂಡ್: 19 ವರ್ಷಗಳಿಂದ ಸೋಲೇ ಇಲ್ಲ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಭಾಗವಾಗಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಏನು ಹೇಳುತ್ತೆ ಚಿನ್ನಸ್ವಾಮಿ ಅಂಕಿ ಅಂಶ ಇಲ್ಲಿದೆ ಮಾಹಿತಿ.
ಎಂ ಚಿನ್ನಸ್ವಾಮಿ ಅಂಗಳದಲ್ಲಿ ಈಗಾಗಲೇ 24 ಟೆಸ್ಟ್ ಪಂದ್ಯಗಳು ನಡೆದಿವೆ. ಈ ವೇಳೆ ಭಾರತ ಒಂಬತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದ ಒಂಬತ್ತು ಪಂದ್ಯಗಳು ಡ್ರಾ ಆಗಿವೆ. ಹೀಗಾಗಿ ಬೆಂಗಳೂರಿನ ಅಂಗಳ ಟೀಮ್ ಇಂಡಿಯಾ ಪಾಲಿಗೆ ಲಕ್ಕಿ ಗ್ರೌಂಡ್ ಆಗಿದೆ.

ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯ
ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳ ನಡುವಣ ಈ ಮೊದಲೇ ಬೆಂಗಳೂರಿನ ಮೈದಾನದಲ್ಲಿ ನಡೆದಿದೆ. ಈ ಮೂರು ಪಂದ್ಯಗಳ್ಲಿ ಭಾರತ ಗೆಲುವು ದಾಖಲಿಸಿದೆ. ಭಾರತದ ಪಾಲಿಗೆ ಈ ಮೈದಾನ ಲಕ್ಕಿ ಗ್ರೌಂಡ್. ಟೀಮ್ ಇಂಡಿಯಾ ಈ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ 2012ರಲ್ಲಿ ಕಾದಾಟ ನಡೆಸಿತ್ತು. ಈ ವೇಳೆ ಆರಂಭಿಕರಾಗಿ ಕಣಕ್ಕೆ ಇಳಿದ ಗೌತಮ್ ಗಂಭೀರ್ ಈಗ ಟೀಮ್ ಇಂಡಿಯಾದ ಕೋಚ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ನವಜೋತ್ ಸಿಂಗ್ ಸಿಧು ಹಾಗೂ ವಿರಾಟ್ ಕೊಹ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಗರಿಷ್ಠ ಸ್ಕೋರ್ ಏನು?
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಈ ಅಂಗಳದಲ್ಲಿ ನಡೆದ ಮೂರು ಪಂದ್ಯಗಳಲ್ಲಿ 384 ರನ್ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಅಕ್ಟೋಬರ್ 18, 1995ರಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 145 ರನ್ ಕಲೆ ಹಾಕಿದ್ದು ಕನಿಷ್ಠ ಸ್ಕೋರ್ ಆಗಿದೆ.

19 ವರ್ಷಗಳಿಂದ ಸೋಲಿಲ್ಲ
ಎಂ ಚಿನ್ನಸ್ವಾಮಿ ಅಂಗಳದಲ್ಲಿ ಮಾರ್ಚ್ 24, 2005ರಂದು ಪಾಕಿಸ್ತಾನ ವಿರುದ್ಧ ಭಾರತ ಕೊನೆಯ ಬಾರಿಗೆ ಸೋಲು ಕಂಡಿತ್ತು. ಇದಾದ ಬಳಿಕ ನಡೆದ ಎಂಟು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲು ಕಂಡಿಲ್ಲ. ಈ ಎಂಟು ಪಂದ್ಯಗಳಲ್ಲಿ ಟೀಮ್ ಇಂಡಿಯಾ 5ರಲ್ಲಿ ಗೆಲುವು, 3ರಲ್ಲಿ ಡ್ರಾ ಸಾಧಿಸಿದೆ.
ಈ ಅಂಗಳದಲ್ಲಿ ಕೊನೆಯ ಪಂದ್ಯ ನಡೆದಿದ್ದು ಯಾವಾಗ?
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು 2022ರಲ್ಲಿ ಹಗಲು ರಾತ್ರಿ ಟೆಸ್ಟ್ ನಡೆದಿತ್ತು. ಈ ಪಂದ್ಯದಲ್ಲಿ ಭಾರತ 238 ರನ್‌ಗಳಿಂದ ಗೆದ್ದು ಬೀಗಿದೆ.
ದಾಖಲೆಯ ಮೇಲೆ ಅಶ್ವಿನ್ ಕಣ್ಣು
ಮೊದಲ ಟೆಸ್ಟ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಅಶ್ವಿನ್ ಕೇವಲ ಎರಡು ವಿಕೆಟ್ ಪಡೆದಿದ್ದೇ ಆದಲ್ಲಿ ಅಶ್ವಿನ್, ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಹರ್ಭಜನ್ ಸಿಂಗ್ ಬೆಂಗಳೂರಿನ ಅಂಗಳದಲ್ಲಿ ಒಟ್ಟು 30 ವಿಕೆಟ್ ಪಡೆದಿದ್ದಾರೆ.
ಅಶ್ವಿನ್ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದೇ ಆದಲ್ಲಿ, ಅವರು ಭಜ್ಜಿ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಅಶ್ವಿನ್ ಚಿನ್ನಸ್ವಾಮಿ ಅಂಗಳದಲ್ಲಿ 29 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications