ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಗೆ ಭಾರತ ತಂಡ ಪ್ರಕಟ


ಬೆಂಗಳೂರು, ನವೆಂಬರ್ 20: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನವೆಂಬರ್ 21ರಂದು ಬ್ರಿಸ್ಬೇನಿನ ಗಬ್ಬಾ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ.
ಮೂರು ಟಿ20ಐ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದಾಗಿದೆ. ಮಾಜಿ ನಾಯಕ ಎಂಎಸ್ ಧೋನಿ ಅವರನು ಈ ಸರಣಿಗೆ ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ಮೂಲಕ ಧೋನಿ ಅವರ ಟಿ20 ವೃತ್ತಿ ಬದುಕಿಗೆ ಫುಲ್ ಸ್ಟಾಪ್ ಇಡಲು ಬಿಸಿಸಿಐ ಯತ್ನಿಸುತ್ತಿದೆಯೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ರಿಷಬ್ ಪಂತ್ ವಿಕೆಟ್ ಕೀಪರ್ ಆಗಿದ್ದರೆ, ದಿನೇಶ್ ಕಾರ್ತಿಕ್ ಬದಲಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿ ತಂಡದಲ್ಲಿದ್ದರೂ ಈ ಪಂದ್ಯಕ್ಕೆ ಆಯ್ಕೆಯಾಗಿಲ್ಲ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಗುಣಮುಖರಾಗದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ. ಬದಲಿಗೆ, ಅವರ ಸೋದರ ಕೃನಾಲ ಪಾಂಡ್ಯ ಅವರಿಗೆ ಆಡುವ ಅವಕಾಶ ಸಿಕ್ಕಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಉಮೇಶ್ ಯಾದವ್.

ಆರಂಭಿಕ ಆಟಗಾರರು
ಶಿಖರ್ ಧವನ್, ರೋಹಿತ್ ಶರ್ಮ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 46ರನ್ ಸರಾಸರಿಯಂತೆ 138ರನ್ ಗಳಿಸಿದ ಶಿಖರ್ ಧವನ್ ಅವರು ಆಸ್ಟ್ರೇಲಿಯಾ ಸರಣಿಗೆ ಸಜ್ಜಾಗಿದ್ದಾರೆ. ರೋಹಿತ್ ಅವರು 121 ರನ್ ಗಳಿಸಿದ್ದು, ಶತಕ ಬಾರಿಸಿ, ಟಿ20ಐನಲ್ಲಿ ದಾಖಲೆ ಬರೆದಿದ್ದಾರೆ. ಧವನ್ ಹಾಗೂ ರೋಹಿತ್ ಅವರಿಗೆ ಆಸ್ಟ್ರೇಲಿಯಾದ ಪಿಚ್ ಗೆ ಹೊಂದಿಕೊಳ್ಳುವ ಸವಾಲು ಎದುರಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಯಾರು?
ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡದಿದ್ದರೂ, ಆಸ್ಟ್ರೇಲಿಯಾದಲ್ಲಿ ಕೊಹ್ಲಿ ದಾಖಲೆ ಉತ್ತಮವಾಗಿದೆ. ಕೆಎಲ್ ರಾಹುಲ್ ಅವರು ವಿಂಡೀಸ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಕೊಹ್ಲಿಯಂತೆ, ಆಸೀಸ್ ನೆಲದಲ್ಲಿ ಚೆನ್ನಾಗಿ ಆಡುವ ಉತ್ಸಾಹದಲ್ಲಿದ್ದಾರೆ.
ದಿನೇಶ್ ಕಾರ್ತಿಕ್ ಗೆ ಅದೃಷ್ಟ ಕೂಡಿ ಬಂದಿದೆ. ಕೀಪರ್ ಅಲ್ಲದಿದ್ದರೂ ಬ್ಯಾಟ್ಸ್ ಮನ್ ಆಗಿ ಆಡುವ ಅವಕಾಶ ಸಿಕ್ಕಿದೆ. ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ರಂಥ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳಿದ್ದರೂ ಕಾರ್ತಿಕ್ ಗೆ ಮಣೆ ಹಾಕಲಾಗಿದೆ.

ಆಲ್ ರೌಂಡರ್
ಕೃನಾಲ್ ಪಾಂಡ್ಯ
ತಮ್ಮ ಹಾರ್ದಿಕ್ ಪಾಂಡ್ಯ ಗಾಯಾಳುವಾಗಿರುವುದರಿಂದ ಕೃನಾಲ್ ಗೆ ಆಲ್ ರೌಂಡರ್ ಕೋಟಾದಲ್ಲಿ ತಂಡದಲ್ಲಿ ಸ್ಥಾನ ಲಭಿಸಿದೆ. ವಿಂಡೀಸ್ ವಿರುದ್ಧ ಬೌಲಿಂಗ್ ನಲ್ಲಿ ದುಬಾರಿ ಎನಿಸಿದ ಬರೋಡಾ ಕ್ರಿಕೆಟರ್, ವಿಕೆಟ್ ಕೀಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ವಿಕೆಟ್ ಕೀಪರ್
ರಿಷಬ್ ಪಂತ್
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅರ್ಧಶತಕ ಗಳಿಸಿರುವ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಹೆಚ್ಚಿನ ಆಕ್ಷೇಪವಿಲ್ಲ. ಆದರೆ, ವಿಕೆಟ್ ಕೀಪಿಂಗ್ ಇನ್ನೂ ಸುಧಾರಿಸಬೇಕಿದೆ. ವಿಂಡೀಸ್ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಅವರು ಕೀಪರ್ ಆಗಿದ್ದರೆ, ಪಂತ್ ಬ್ಯಾಟ್ಸ್ ಮನ್ ಆಗಿ ಕಣದಲ್ಲಿದ್ದರು. ಇಲ್ಲಿ ಅದೇ ಅದಲು ಬದಲಾಗಿದೆ.

ಬೌಲಿಂಗ್ ವಿಭಾಗ
ಲೆಗ್ ಸ್ಪಿನ್ನರ್ ಚಾಹಲ್ ಬದಲಿಗೆ ಚೈನಾಮನ್ ಕುಲದೀಪ್ ಯಾದವ್ ಗೆ ಮಣೆ ಹಾಕಲಾಗಿದೆ. 23 ವರ್ಷ ವಯಸ್ಸಿನ ಕುಲದೀಪ್ ಅವರು ರನ್ ನಿಯಂತ್ರಣದಲ್ಲೂ ಸೈ ಎನಿಸಿಕೊಂಡಿದ್ದಾರೆ.
ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದು, ಎಡಗೈ ವೇಗಿ ಖಲೀಲ್ ಅಹ್ಮದ್ ಸಾಥ್ ನೀಡಲಿದ್ದಾರೆ.- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications