ಮಿಥಾಲಿ ಬದಲಿಗೆ ಭಾರತ ಟಿ20 ತಂಡ ಸೇರಿದ 15ರ ಹರೆಯದ ಶೆಫಾಲಿ!

ನವದೆಹಲಿ, ಸೆಪ್ಟೆಂಬರ್ 5: ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಗಾಗಿ ಬಿಸಿಸಿಐಯು ಭಾರತದ ಮಹಿಳಾ ತಂಡಗಳನ್ನು ಪ್ರಕಟಿಸಿದೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತರಾಗಿರುವ ಮಿಥಾಲಿ ಬದಲಿಗೆ 15ರ ಹರೆಯದ ಶೆಫಾಲಿ ವರ್ಮಾ ತಂಡದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಟಿ20ಐಗೆ ನಿವೃತ್ತಿ ಘೋಷಿಸಿರುವ ಮಿಥಾಲಿ, ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳಾ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ, ಸ್ಮೃತಿ ಮಂಧಾನ ಉಪನಾಯಕಿಯಾಗಿರಲಿದ್ದಾರೆ. ಟಿ20 ತಂಡದಲ್ಲಿ ಮಿಥಾಲಿ ಬದಲಿಗೆ ಕಿರಿಯ ಆಟಗಾರ್ತಿ ಶಿಫಾಲಿ ವರ್ಮಾ ಅವರನ್ನು ಹೆಸರಿಸಲಾಗಿದೆ.
ಐದು ಪಂದ್ಯಗಳ ಟಿ20 ಸರಣಿ ಗುಜರಾತ್‌ನ ಸೂರತ್‌ನಲ್ಲಿ ಸೆಪ್ಟೆಂಬರ್ 24ರಂದು ಆರಂಭಗೊಳ್ಳಲಿದ್ದು, ಅಕ್ಟೋಬರ್ 4ರಂದು ಫೈನಲ್ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ವಡೋದರಾದಲ್ಲಿ ಅಕ್ಟೋಬರ್ 9ರಂದು ಆರಂಭಗೊಂಡು ಅಕ್ಟೋಬರ್ 14ರ ಫೈನಲ್ ಮೂಲಕ ಕೊನೆಗೊಳ್ಳಲಿದೆ.
15 ಜನರ ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಉಪ ನಾಯಕಿ), ಪೂನಮ್ ರಾವತ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಮಾನ್ಸಿ ಜೋಶಿ, ಏಕ್ತಾ ಬಿಶ್ತ್, ಪೂನಂ ಯಾದವ್, ಡಿ ಹೇಮಲತಾ, ರಾಜೇಶ್ವರಿ ಗಾಯಕ್ವಾಡ್, ಪ್ರಿಯಾ ಪೂನಿಯಾ.
ಮೊದಲ 3 ಟಿ೦20 ಪಂದ್ಯಗಳಿಗೆ 15 ಜನರ ತಂಡ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂನಂ ಯಾದವ್, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕಾರ್, ರಾಧಾ ಯಾದವ್, ವೇದಾ ಕೃಷ್ಣಮೂರ್ತಿ, ಹರ್ಲೀನ್ ಡಿಯೋಲ್, ಅನುಜಾ ಪಾಟಿಲ್, ಶೆಫಾಲಿ ವರ್ಮಾ, ಮಾನ್ಸಿ ಜೋಷಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications