For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ, ರೋಹಿತ್ ಇನ್

IND v/s AUS : ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ | Oneindia Kannada
India announce Test squad for Australia tour

ಮುಂಬೈ, ಅಕ್ಟೋಬರ್ 26: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ತಂಡಕ್ಕೆ ರೋಹಿತ್ ಶರ್ಮ, ಪಾರ್ಥೀವ್ ಪಟೇಲ್ ಮರಳಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಪ್ರಕಟಿಸಿರುವ ತಂಡಕ್ಕೆ ರೋಹಿತ್, ಪಾರ್ಥೀವ್ ಅಲ್ಲದೆ ಮುರಳಿ ವಿಜಯ್ ಕೂಡಾ ಮರಳಿದ್ದಾರೆ.

ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದಿಂದ ಕೈಬಿಟ್ಟ ನಂತರ ಮುರಳಿ ವಿಜಯ್ ಅವರು ಎಸೆಕ್ಸ್ ಕೌಂಟಿ ಪರ ಆಡಿ ಶತಕ, 2 ಅರ್ಧ ಶತಕ ಗಳಿಸಿ, ಆಯ್ಕೆದಾರರ ಗಮನ ಸೆಳೆದಿದ್ದರು. ಕರ್ನಾಟಕದ ಮಯಾಂಕ್ ಅಗರವಾಲ್, ಕರುಣ್ ನಾಯರ್ ಅವರು ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.

ಉಳಿದಂತೆ, ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದ ರಿಷಬ್ ಪಂತ್ ಹಾಗೂ ಹನುಮ ವಿಹಾರಿ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೂ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನವೆಂಬರ್ 21ರಂದು ಬ್ರಿಸ್ಬೇನ್ ನಲ್ಲಿ ಮೊದಲ ಟಿ20ಐ ನಡೆಯಲಿದೆ. ಡಿಸೆಂಬರ್ 6 ರಿಂದ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್ ಒವಲ್ ನಲ್ಲಿ ಆರಂಭಗೊಳ್ಳಲಿದೆ.

ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್ ಶರ್ಮ, ರಿಷಬ್ ಪಂತ್, ಪಾರ್ಥೀವ್ ಪಟೇಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್.

ಭಾರತದಿಂದ ಆಸ್ಟ್ರೇಲಿಯಾ ಪ್ರವಾಸ 2018-19 ವೇಳಾಪಟ್ಟಿ

ಜಿಲೆಟ್ ಟಿ20 ಸರಣಿ
ನವೆಂಬರ್ 21: ದಿ ಗಬ್ಬಾ
ನವೆಂಬರ್ 23: ಎಂಸಿಜಿ
ನವೆಂಬರ್ 25: ಎಸ್ ಸಿಜಿ


ಡೊಮೈನ್ ಟೆಸ್ಟ್ ಸರಣಿ
ಡಿಸೆಂಬರ್ 6-10 : ಅಡಿಲೇಡ್ ಒವಲ್
ಡಿಸೆಂಬರ್ 14-18 : ಪರ್ತ್
ಡಿಸೆಂಬರ್ 26-30 : ಎಂಸಿಜಿ
ಜನವರಿ 3-7 : ಎಸ್ ಸಿಜಿ


ಜಿಲ್ಲೆಟ್ ಏಕದಿನ ಸರಣಿ (ಎಲ್ಲವೂ ಹಗಲು-ರಾತ್ರಿ ಪಂದ್ಯಗಳು)
ಜನವರಿ 12 : ಎಸ್ ಸಿಜಿ
ಜನವರಿ 15: ಅಡಿಲೇಡ್ ಒವಲ್
ಜನವರಿ 18 : ಎಂಸಿಜಿ

Story first published: Saturday, October 27, 2018, 0:58 [IST]
Other articles published on Oct 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+