ಹಾಂಕಾಂಗ್ ಕ್ರಿಕೆಟ್ ಸಿಕ್ಸ್: ಭಾರತ ತಂಡ ಪ್ರಕಟ, ಮೂವರು ಕನ್ನಡಿಗರಿಗೆ ಅವಕಾಶ, ರಾಬಿನ್ ಉತ್ತಪ್ಪ ನಾಯಕ
ಏಳು ವರ್ಷಗಳ ಬಳಿಕ ಮತ್ತೆ ಹಾಂಕಾಂಗ್ ಕ್ರಿಕೆಟ್ ಸಿಕ್ಸ್ ಆರಂಭವಾಗಿದೆ. ಈ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ನಾಯಕತ್ವ ನೀಡಲಾಗಿದೆ. ಈ ಟೂರ್ನಿ ನವೆಂಬರ್ 1 ರಿಂದ 3 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯನ್ನು ಹಾಂಗ್ ಕಾಂಗ್ ಕ್ರಿಕೆಟ್ ಆಯೋಜಿಸಿಲಿದೆ.
ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಒಟ್ಟು 12 ತಂಡಗಳು ಇದರಲ್ಲಿ ಭಾಗವಹಿಸಲಿವೆ. ಇದೀಗ ಹಾಂಕಾಂಗ್ ಕ್ರಿಕೆಟ್ ಸಿಕ್ಸ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಭಾರತ 2005ರಲ್ಲಿ ಈ ಟೂರ್ನಿಯ ಪ್ರಶಸ್ತಿ ಗೆದ್ದಿತ್ತು.

ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ
ಹಾಂಕಾಂಗ್ ಸೂಪರ್ ಸಿಕ್ಸ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮೂವರು ಕನ್ನಡಿಗರಿಗೆ ಸ್ಥಾನ ಲಭಿಸಿದೆ. ತಂಡದಲ್ಲಿ ರಾಬಿನ್ ಉತ್ತಪ್ಪ, ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ, ಶಹಬಾಜ್ ನದೀಮ್, ಭರತ್ ಚಿಪ್ಲಿ ಮತ್ತು ಶ್ರೀವತ್ಸ ಗೋಸ್ವಾಮಿ ಇದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಾಬಿನ್ ಉತ್ತಪ್ಪ ಅವರಿಗೆ ನಾಯಕತ್ವದ ಪಟ್ಟವನ್ನು ಕಟ್ಟಲಾಗಿದೆ. ಇವರು 2007ರಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದರು.
ಮನೋಜ್ ತಿವಾರಿ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರ. ಇನ್ನು ವಿಕೆಟ್ ಕೀಪರ್ ರೂಪದಲ್ಲಿ ಶ್ರೀವತ್ಸ ಗೋಸ್ವಾಮಿ ಸ್ಥಾನ ಪಡೆದಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ವಿಕೆಟ್ ಹಿಂದಿನ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು.
ಪ್ರಕಟಿತ ತಂಡದಲ್ಲಿ ಇಬ್ಬರು ಆಲ್‌ರೌಂಡರ್‌ಗಳು ಇದ್ದಾರೆ. ಕೇದಾರ್ ಜಾದವ್ ಹಾಗೂ ಕರ್ನಾಟಕದ ಸ್ಟಾರ್ ಸ್ಟುವರ್ಟ್ ಬಿನ್ನಿ ಅವರಿಗೆ ಸ್ಥಾನ ನೀಡಲಾಗಿದೆ. ಇವರಿಬ್ಬರೂ ಒತ್ತಡದ ಸನ್ನಿವೇಶದಲ್ಲಿ ಹೇಗೆ ಆಡಬೇಕು ಎಂಬುದನ್ನು ಕರಗತ ಮಾಡಿಕೊಂಡಿರುವ ಪ್ಲೇಯರ್ಸ್. ಸ್ಟುವರ್ಟ್ ಬಿನ್ನಿ ಭಾರತದ ಪರ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆಟಗಾರ. ಇವರು ಪವರ್ ಹಿಟ್ಟಿಂಗ್ ಹೆಸರುವಾಸಿ. ಇನ್ನು ಕೇದಾರ್ ಜಾಧವ್ ಸಹ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬ ಬಲ್ಲ ಪ್ಲೇಯರ್. ಇವರಿಬ್ಬರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು.
ಈ ಪಂದ್ಯಗಳನ್ನು ವೀಕ್ಷಿಸುವುದು ಹೇಗೆ?
ಹಾಂಗ್ ಕಾಂಗ್ ಕ್ರಿಕೆಟ್ ಸಿಕ್ಸರ್ ಟೂರ್ನಿಯನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕ್ ತಂಡಗಳು ನವೆಂಬರ್ 1 ರಂದು ಕಾದಟ ನಡೆಯಲಿದೆ. ನವೆಂಬರ್ 2 ರಂದು ರಾಬಿನ್ ಪಡೆ ಯುಎಇ ವಿರುದ್ಧ ಫೈಟ್ ನಡೆಸಲಿದೆ.
ರಾಬಿನ್ ಸಾಧನೆ
ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿರುವ ಆಟಗಾರ. ಇವರು ಭಾರತದ ಪರ 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇಇವೆ. ಇನ್ನು 13 ಟಿ20 ಪಂದ್ಯಗಳಲ್ಲಿ ತಂಡದ ಭಾಗವಾಗಿರುವ ರಾಬಿನ್ ಒಂದು ಅರ್ಧಶತಕ ಸೇರಿದಂತೆ 249 ರನ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications