Women's Under 19 T20 World Cup: ಭಾರತ ತಂಡ ಪ್ರಕಟ: ಇಲ್ಲಿದೆ ಕಂಪ್ಲೀಟ್ ತಂಡ
ಟೀಮ್ ಇಂಡಿಯಾ ಅಂಡರ್ 19 ಮಹಿಳಾ ತಂಡ ಅಮೋಘ ಪ್ರದರ್ಶನ ನೀಡಿ ಏಷ್ಯಾಕಪ್ ಗೆದ್ದು ಕೊಂಡು ಇತಿಹಾಸ ನಿರ್ಮಿಸಿದೆ. ಸ್ಟಾರ್ ಆಟಗಾರರು ಭವಿಷ್ಯದ ಭರವಸೆಯನ್ನು ಮೂಡಿಸಿದ್ದಾರೆ. ಈಗ ಮಹಿಳಾ ತಂಡದ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ವರ್ಷ ಮಲೇಷ್ಯಾದಲ್ಲಿ ನಡೆಯಲಿರುವ ಅಂಡರ್ 19 ಮಹಿಳಾ ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾಕಪ್ ನಲ್ಲಿ ಆಯುಷಿ ಮಾರಕ ಬೌಲಿಂಗ್ ನಡೆಸಿದ್ದ ಆಯುಷಿ ಶುಕ್ಲಾ ಅವರಿಗೂ ಸ್ಥಾನ ಸಿಕ್ಕಿದ್ದು, ನಿಕ್ಕಿ ಪ್ರಸಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ದುಬಾರಿ ಬೆಲೆಗೆ ಮಾರಾಟವಾದ ಕಮಲಿನಿ ಸಹ ಸ್ಥಾನ ಪಡೆದಿದ್ದಾರೆ.
ಅಂಡರ್ 19 ಟಿ20 ವಿಶ್ವಕಪ್ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. ಟೂರ್ನಿ ಜನವರಿ 18 ರಿಂದ ಆರಂಭನಡೆಯಲಿದ್ದು, ಉದ್ಘಾಟನಾ ಪಂದ್ಯ ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ನಡುವೆ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ಜನವರಿ 19 ರಂದು ವೆಸ್ಟ್ ಇಂಡೀಸ್ ವಿರುದ್ಧ ಆರಂಭಿಸಲಿದೆ. ಈ ಟೂರ್ನಿಯಲ್ಲಿ ಭಾರತ ಕಿರಿಯರ ಮಹಿಳಾ ತಂಡವನ್ನು ನಿಕಿ ವಹಿಸಿಕೊಂಡಿದ್ದಾರೆ.

ಟೂರ್ನಿ ಯಾವಾಗ ಆರಂಭ?
ಭಾರತದ ಮೊದಲ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ. ಈ ಪಂದ್ಯ ಜನವರಿ 19 ರಂದು ನಡೆಯಲಿದೆ. ನಿಕಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೂರ್ನಿ ಆಡಲಿದೆ. ಸಾನಿಕಾ ಚಲ್ಕೆ ಅವರಿಗೂ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಅವರು ತಂಡದ ಉಪನಾಯಕಿ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮಲಿನಿ ತಂಡದ ಭಾಗವಾಗಿದ್ದಾರೆ. ಅವರು ಭಾರತಕ್ಕಾಗಿ ಪ್ರಮುಖ ಪಾತ್ರ ವಹಿಸಬಲ್ಲರು. ಭಾವಿಕಾ ಕೂಡ ಸ್ಥಾನ ಪಡೆದಿದ್ದಾರೆ. ಭರವಸೆಯ ಆಟಗಾರ್ತಿ ಸಾನಿಕಾ ಚಲ್ಕೆ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ.
ಆಯುಷಿ ಶುಕ್ಲಾ ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು ಶ್ರೀಲಂಕಾ ವಿರುದ್ಧ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿ 10 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ್ದರು. ಇನ್ನು ಫೈನಲ್ ಪಂದ್ಯದಲ್ಲೂ ಇವರ ಮೊನಚಾದ ದಾಳಿ ಸಂಘಟಿಸಿದ್ದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಯುಷಿ ಶುಕ್ಲಾ 17 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು. ಉಳಿದಂತೆ ಆಯುಷಿ ಶುಕ್ಲಾ ಜೊತೆಗೆ ಆನಂದಿತಾ ಕಿಶೋರ್, ಸೋನಮ್ ಯಾದವ್ ಮತ್ತು ಪರುಣಿಕಾ ಸಿಸೋಡಿಯಾ ಕೂಡ ಸ್ಥಾನ ಪಡೆದಿದ್ದಾರೆ.
ಭಾರತದ ಪಂದ್ಯಗಳು ಯಾವಾಗ?
ಜನವರಿ 18 ರಿಂದ ಅಂಡರ್ 19 ವಿಶ್ವಕಪ್ ಮಹಿಳಾ ಟೂರ್ನಿ ಆರಂಭವಾಗಲಿದ್ದು, ಭಾರತ ತನ್ನ ಅಭಿಯಾನವನ್ನು ಜನವರಿ 19 ರಂದು ನಡೆಸಲಿದೆ. ಜನವರಿ 21 ರಂದ ಭಾರತ ಹಾಗೂ ಮಲೇಷ್ಯಾ ವಿರುದ್ಧ ಪಂದ್ಯ ನಡೆಯಲಿದ್ದು, ಜನವರಿ 23 ರಂದು ಭಾರತ ತನ್ನ ಗುಂಪು ಹಂತದ ಕೊನೆಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.
ಅಂಡರ್ 19 ವಿಶ್ವಕಪ್‌ಗೆ ಭಾರತ ತಂಡ: ನಿಕ್ಕಿ ಪ್ರಸಾದ್ (ನಾಯಕ), ಸಾನಿಕಾ ಚಲ್ಕೆ (ಉಪನಾಯಕಿ), ಜಿ ತ್ರಿಶಾ, ಜಿ ಕಮಲಿನಿ (ಡಬ್ಲ್ಯುಕೆ), ಭಾವಿಕಾ ಅಹಿರೆ (ಡಬ್ಲ್ಯುಕೆ), ಈಶ್ವರಿ ಅವಸರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ ಆನಂದಿತಾ ಕಿಶೋರ್, ಎಂ.ಡಿ.ಶಬ್ನಂ, ವೈಷ್ಣವಿ ಎಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications