For Quick Alerts
ALLOW NOTIFICATIONS  
For Daily Alerts
 

ನಾವಿನ್ನೂ ಪಂದ್ಯದಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ: ಚೇತೇಶ್ವರ್ ಪೂಜಾರ

India are still placed evenly in this Test cheteshwar pujara on 1st test

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಸಾಧಾರಣ ಮೊತ್ತವನ್ನು ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಭಾರತ 89 ಓವರ್‌ಗಳಲ್ಲಿ 233 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಆದರೆ ಪಂದ್ಯದ ಮೇಲೆ ಇನ್ನೂ ಟೀಮ್ ಇಂಡಿಯಾ ಹಿಡಿತವನ್ನು ಹೊಂದಿದೆ ಎಂದು ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಪಂದ್ಯದ ಮೊದಲ ದಿನವಾದ ಗುರುವಾರ ಭಾರತ ಮೊದಲ ದಿನ ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ ಜೊತೆಗೆ ಸಂವಹನ ಕೊರತೆಯಂದಾಗಿ ರನ್‌ಔಟ್ ಆಗುವ ವರೆಗೆ ಹಾಗೂ ಅದಾದ ಬಳಿಕ ರಹಾನೆ ಒಪ್ಪಿಸುವವರೆಗೆ ಖಂಡಿತಾ ಪಂದ್ಯ ಸಂಪೂರ್ಣವಾಗಿ ನಮ್ಮ ಕೈಯ್ಯಲ್ಲಿತ್ತು. ಆದರೆ ಕೊಹ್ಲಿ ವಿಕೆಟ್ ಪತನದೊಂದಿಗೆ ಕೆಲ ವಿಕೆಟ್ ಕಳೆದುಕೊಂಡಿತು.

ಆದರೆ ಮೊದಲ ದಿನದಾಟದಲ್ಲಿ ಭಾರತ ಆಟವನ್ನು ಆಡಿತ್ತು ಎಂದಿರುವ ಪೂಜಾರ ಕ್ರೀಸ್‌ನಲ್ಲಿ ಆರ್ ಅಶ್ವಿನ್ ಹಾಗೂ ವೃದ್ಧಿಮಾನ್ ಸಾಹಾ ಬ್ಯಾಟಿಂಗ್ ಮುಂದುವರಿಸುತ್ತಿದ್ದಾರೆ. ಇಬ್ಬರೂ ಬ್ಯಾಟ್‌ನಲ್ಲಿ ಉತ್ತಮ ಕೊಡುಗೆ ನೀಡಬಲ್ಲವರಾಗಿದ್ದಾರೆ. ಹೀಗಾಗಿ ಭಾರತ ತಂಡ 275ರಿಂದ 300 ರನ್ ಗಳಿಸುವ ಅವಕಾಶವಿದೆ. ಅದು ಈ ಪಿಚ್‌ನಲ್ಲಿ ಉತ್ತಮ ಮೊತ್ತವಾಗಿರಲಿದೆ ಎಂದು ಹೇಳಿದ್ದಾರೆ.

"ನಾವು ಕೇವಲ 6 ವಿಕೆಟ್ ಕಳೆದುಕೊಂಡಿದ್ದೇವೆ. ವೃದ್ಧಿಮಾನ್ ಸಾಹಾ ಬ್ಯಾಟ್ ಮಾಡಬಲ್ಲರು. ಅಶ್ವಿನ್ ಬ್ಯಾಟಿಂಗ್ ಮಾಡಬಲ್ಲರು. ಅದರ ಜೊತೆಗೆ ನಮ್ಮ ಕೆಳ ಕ್ರಮಾಂಕದ ಆಟಗಾರರು ಕೂಡ ಉತ್ತಮ ರನ್ ಕೊಡುಗೆ ನೀಡಬಲ್ಲವರಾಗಿದ್ದಾರೆ. ಹೀಗಾಗಿ ನಾವಿನ್ನೂ 275-300ರನ್ ಗಳಿಸುವ ಉತ್ತ, ಅವಕಾಶವಿದೆ" ಎಂದು ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಪ್ರದರ್ಶನವನ್ನು ನೀಡಿದ ನಾವು 350ಕ್ಕೂ ಅಧಿಕ ರನ್ ಗಳಿಸಲೂ ಬಹುದು. ಪಂದ್ಯದಲ್ಲಿ ಸಂಪುರ್ಣವಾಗಿ ನಾವೇ ಹಿಡಿತವನ್ನು ಹೊಂದಿದ್ದ ಸಂದರ್ಭವೂ ಇತ್ತು. ಆದರೆ ಕೊಹ್ಲಿ ಹಾಗೂ ರಹಾನೆ ವಿಕೆಟ್ ಉರುಳಿದ ಬಳಿಕ ನಾವ ಸ್ವಲ್ಪ ಅವಕಾಶವನ್ನು ಕಳೆದುಕೊಂಡೆವು. ಆದರೆ ನಾವಿನ್ನೂ ಪಂದ್ಯದಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ ಎಂಬ ಭಾವನೆ ನಮ್ಮಲ್ಲಿದೆ" ಎಂದು ಫೂಜಾರ ಹೇಳಿದ್ದಾರೆ.

Story first published: Friday, December 18, 2020, 10:16 [IST]
Other articles published on Dec 18, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+