ಚಿತ್ರ ಸಂಪುಟ: ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶನಿವಾರ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ ನಲ್ಲಿ 300 ರನ್ ಗಳಿಗೆ ಆಲೌಟ್ ಆಗಿದೆ.
ಆನಂತರ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ದಿನದ ಕಾಲಾವಕಾಶದಲ್ಲಿ ಕೇವಲ ಒಂದೇ ಓವರ್ ಆಡಲು ಅವಕಾಶ ಸಿಕ್ಕಿತು. ರಾಜ್ಯದ ಆಟಗಾರ ಕೆ.ಎಲ್. ರಾಹುಲ್ ಹಾಗೂ ಮುರಳಿ ವಿಜಯ್ ಇನಿಂಗ್ಸ್ ಆರಂಭಿಸಿದರಾದರೂ ಯಾವುದೇ ರನ್ ಗಳಿಸಲಿಲ್ಲ.[ಧರ್ಮಶಾಲಾ ಟೆಸ್ಟ್: ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 300ಕ್ಕೆ ಆಲೌಟ್]
ಆಸೀಸ್ ಗೆ ಕಂಟಕವಾದ ಕುಲ್ದೀಪ್: ಇಲ್ಲಿನ ಹಿಮಾಚಲ ಕ್ರಿಕೆಟ್ ಮೈದಾನದಲ್ಲಿ ಬೆಳಗ್ಗೆ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ತನ್ನ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಭಾರತದ ಸ್ಪಿನ್ನರ್ ಕುಲ್ದೀಪ್ ಅವರ ಕೈಚಳಕದ ಮೋಡಿಯಿಂದ ಪೆಟ್ಟು ನೀಡಿದರು.
ಭಾರತೀಯ ಬೌಲರ್ ಗಳ ಕೈಚಳಕಕ್ಕೆ ಆರಂಭದಿಂದಲೇ ಕುಂಟುತ್ತಾ ಸಾಗಿದ ಕಾಂಗರೂ ಪಡೆ, ಅಂತಿಮವಾಗಿ 300 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತು. ಕುಲ್ದೀಪ್ ನಾಯರ್ ಅವರು 4 ವಿಕೆಟ್ ಉರುಳಿಸಿ ಆಸೀಸ್ ಶೀಘ್ರ ಪತನಕ್ಕೆ ನೆರವಾದರು. ಉಮೇಶ್ ಯಾದವ್ 2 ಹಾಗೂ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಉರುಳಿಸಿದರು.[ಕೊನೆಯ ಟೆಸ್ಟ್: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ]
ಮೊದಲ ದಿನದಾಟದ ಕೆಲವಾರು ಸುಂದರ ಫೋಟೋಗಳು ಇಲ್ಲಿ ನಿಮಗಾಗಿ....

ಆದರೆ, ಶತಕದ ಜತೆಯಾಟ
ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಇನಿಂಗ್ಸ್ ಮೊತ್ತ ಕೇವಲ 10 ರನ್ ಆಗಿದ್ದಾಗ ಆರಂಭಿಕ ರೆನ್ಶಾ ಅವರನ್ನು ಬೇಗನೇ ಕಳೆದುಕೊಂಡರೂ, ಮತ್ತೊಬ್ಬ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಮೂರನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ನಾಯಕ ಸ್ಟೀವನ್ ಸ್ಮಿತ್ ಅವರ ಅಮೋಘ ಶತಕದ ಜತೆಯಾಟದಿಂದ ಚೇತರಿಕೆ ಕಂಡಿತ್ತು. ಈ ಇಬ್ಬರೂ ಎರಡನೇ ವಿಕೆಟ್ ಗೆ ಭರ್ಜರಿ 134 ರನ್ ಜತೆಯಾಟ ನೀಡಿದರು.

ವಾರ್ನರ್-ಸ್ಮಿತ್ ಮಾತುಕತೆ
ಮಧ್ಯಾಹ್ನ ಭೋಜನ ವಿರಾಮದ ವೇಳೆಯಲ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಡೇವಿಡ್ ವಾರ್ನರ್ ಹಾಗೂ ನಾಯಕ ಸ್ಟೀವನ್ ಸ್ಮಿತ್ ಅವರು ಏನೋ ಚರ್ಚೆಯಲ್ಲಿ ತೊಡಗಿರುವುದು.

ಸುಸ್ತಾದ ಕ್ರಿಕೆಟ್ ಕಲಿಗಳು
ಧರ್ಮಾಶಾಲಾ ಕ್ರೀಡಾಂಗಣವು ಹಿಮಾಚಲ ಪ್ರದೇಶದಲ್ಲಿದ್ದರೂ ಅಲ್ಲಿ ತಾಪಮಾನ ಹೆಚ್ಚಾಗಿಯೇ ಇದೆ. ಉಸ್ಸಪ್ಪಾ ಎನ್ನುವಂಥ ಬಿಸಿಲ ಬೇಗೆಯ ನಡುವೆ ಆಸ್ಟ್ರೇಲಿಯಾದ ಇನಿಂಗ್ಸ್ ಕಟ್ಟುವಲ್ಲಿ ನಿರತರಾಗಿದ್ದ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್, ಡ್ರಿಂಕ್ಸ್ ಬ್ರೇಕ್ ನಲ್ಲಿ ಕಂಡಿದ್ದು ಹೀಗೆ.

ಪಾನೀಯ ತಂದ ಕೊಹ್ಲಿ
ಅರೆರೆ... ಕೊಹ್ಲಿ! ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯದಿಂದ ದೂರ ಉಳಿದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ದಿನದಾಟದ ಡ್ರಿಂಕ್ಸ್ ಬ್ರೇಕ್ ನಲ್ಲೊಮ್ಮೆ ತಮ್ಮ ತಂಡದ ಆಟಗಾರರಿಗೆ ಪಾನೀಯ ತಂದುಕೊಟ್ಟು ಪ್ರೇಕ್ಷಕರಿಗೆ ದರುಶನ ಕೊಟ್ಟರು. ಅವರನ್ನು ಕಂಡಕೂಡಲೇ ಇಡೀ ಕ್ರೀಡಾಂಗಣದಲ್ಲಿ ಕೋಲಾಹಲವೆದ್ದಿತು.

ಹಿರಿಯ ಆಟಗಾರನ ಅರ್ಧಶತಕ
ದಿನದಾಟದಲ್ಲಿ ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು, ತಮ್ಮ ಅರ್ಧಶತಕ ದಾಖಲಿಸಿದಾಗ ಪ್ರೇಕ್ಷಕರತ್ತ ಬ್ಯಾಟ್ ಎತ್ತಿ ಸಂಭ್ರಮ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications