ಕೋಲ್ಕತ್ತಾ, ಆಗಸ್ಟ್ 20: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾದ ನಂತರ ಅನೇಕ ಕ್ಷೇತ್ರಗಳಲ್ಲಿ ಬೆಲೆ ಏರಿಕೆ ಬಿಸಿ ತಟ್ಟಿದೆ.
ಜುಲೈ 1 ರಿಂದ ಸೇವೆ ಮತ್ತು ಸರಕುಗಳ ಮೇಲೆ ಜಿಎಸ್ಟಿ ವಿಧಿಸಲಾಗಿದ್ದು, ಈಗ ಕ್ರಿಕೆಟ್ ಕ್ಷೇತ್ರಕ್ಕೂ ಬಿಸಿ ಮುಟ್ಟಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಟಿಕೆಟ್ ದರಗಳ ಮೇಲೆ ಜಿಎಸ್ಟಿ ತನ್ನ ಪ್ರಭಾವ ಬೀರಿದೆ. ಸೆಪ್ಟಂಬರ್ 21 ರಂದು ಏಕದಿನ ಕ್ರಿಕೆಟ್ ಪಂದ್ಯ ನಡೆಯಲಿದೆ.
