For Quick Alerts
ALLOW NOTIFICATIONS  
For Daily Alerts
 

ಭಾರತ ಆಸ್ಟ್ರೇಲಿಯಾ ಟೆಸ್ಟ್ ಇತಿಹಾಸದ ಈ 4 ಕುತೂಹಲಕಾರಿ ದಾಖಲೆಗಳನ್ನು ನೀವು ನಂಬಲೇಬೇಕು!

India Australia Test series: 4 unbelievable facts of India vs Australia rivalry

ಸತತ ವೈಟ್‌ಬಾಲ್ ಸರಣಿಗಳ ಬಳಿಕ ಟೀಮ್ ಇಂಡಿಯಾ ಈಗ ಮಹತ್ವದ ಟೆಸ್ಟ್ ಸರಣಿಯ ಮೇಲೆ ಕಣ್ಣಿಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಗುರುವಾರದಿಂದ ನಾಗ್ಪುರದಲ್ಲಿ ಆರಂಭವಾಗಲಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಈ ಸರಣಿಗಾಗಿ ಎರಡು ತಂಡಗಳು ಕೂಡ ತಮ್ಮದೇ ರೀತಿಯಲ್ಲಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಈ ಸರಣಿ 1996ರಿಂದ ಅದ್ಭುತವಾಗಿ ಬೆಳೆಯುತ್ತಾ ಬಂದಿದೆ. ಅನೇಕ ದಾಖಲೆಗಳು, ವಿಶೇಷ ಪ್ರದರ್ಶನಗಳು ಅಭಿಮಾನಿಗಳನ್ನು ರಂಜಿಸಿದೆ. ಈ ಸಂದರ್ಭದಲ್ಲಿ ಕೆಲ ಅಪರೂಪದ ಹಾಗೂ ಅನಿರೀಕ್ಷಿತ ದಾಖಲೆಗಳು ಕೂಡ ಈ ಸರಣಿಯಲ್ಲಿ ದಾಖಲಾಗಿದೆ. ಹಾಗಾಗಿ ಈ ಸರಣಿಯಲ್ಲಿ ನಂಬಲು ಕಷ್ಟವಾಗುವ ಕೆಲ ಅತ್ಯಂತ ಅಪರೂಪದ ದಾಖಲೆಗಳ ಮಾಹಿತಿ ಇಲ್ಲಿದೆ.

ಬೂಮ್ರಾಗಿಂತ ಉತ್ತಮವಾಗಿದೆ ಮೈಕಲ್ ಕ್ಲಾರ್ಕ್ ಬೌಲಿಂಗ್ ಅಂಕಿಅಂಶ!

ಬೂಮ್ರಾಗಿಂತ ಉತ್ತಮವಾಗಿದೆ ಮೈಕಲ್ ಕ್ಲಾರ್ಕ್ ಬೌಲಿಂಗ್ ಅಂಕಿಅಂಶ!

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ ಪ್ರಸ್ತುತ ಬೌಲರ್‌ಗಳ ಪೈಕಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಭಾರತ ತಂಡ ಅತ್ಯಂತ ಅಪರೂಪದ ಯಶಸ್ವಿ ಬೌಲರ್‌ಗಳಲ್ಲಿ ಬೂಮ್ರಾ ಕೂಡ ಒಬ್ಬರು. ಆದರೆ ಬೌಲಿಂಗ್ ಅಂಕಿಅಂಶಗಳಲ್ಲಿ ಬೂಮ್ರಾ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರಿಗಿಂತ ಬಹಳ ಹಿಂದಿದ್ದಾರೆ ಎಂಬುದನ್ನು ನೀವು ನಂಬಲೇ ಬೇಕು. 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೂಮ್ರಾ ಕೇವಲ 33 ರನ್ ನೀಡಿ 6 ವಿಕೆಟ್ ಸಂಪಾದಿಸಿದ್ದರು. ಆದರೆ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಆಗಿದ್ದ ಮೈಕಲ್ ಕ್ಲಾರ್ಕ್ ಅವರ ಭಾರತದ ವಿರುದ್ಧದ ಬೌಲಿಂಗ್ ಅಂಶ ಇದಕ್ಕಿಂತ ಅದ್ಭುತವಾಗಿದೆ. 2004ರಲ್ಲಿ ನಡೆದ ಸರಣಿಯಲ್ಲಿ ಕ್ಲಾರ್ಕ್ ಕೇವಲ 9 ರನ್ ನೀಡಿ 6 ವಿಒಕೆಟ್ ಸಂಪಾದಿಸಿದ್ದರು!

ವಿರಾಟ್ ಕೊಹ್ಲಿಗಿಂತ ಮೇಲಿದ್ದಾರೆ ಚೇತೇಶ್ವರ್ ಪೂಜಾರ

ವಿರಾಟ್ ಕೊಹ್ಲಿಗಿಂತ ಮೇಲಿದ್ದಾರೆ ಚೇತೇಶ್ವರ್ ಪೂಜಾರ

ಕ್ರಿಕೆಟ್ ಕಂಡ ಅದ್ಭುತ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯಾ ತಂಡದ ವಿರುದ್ಧ ಕೊಹ್ಲಿ ಯಾವಾಗಲೂ ಅದ್ಭುತವಾಗಿ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. 20 ಟೆಸ್ಟ್ ಪಂದ್ಯಗಳಲ್ಲಿ 7 ಶತಕಗಳು ಹಾಗೂ 5 ಅರ್ಧಶತಕಗಳೊಂದಿಗೆ 1682 ರನ್‌ಗಳಿಸಿದ್ದಾರೆ ವಿರಾಟ್ ಕೊಹ್ಲಿ.

ಹಾಗಿದ್ದರೂ ಟೀಮ್ ಇಂಡಿಯಾದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತೋರ್ವ ಅನುಭವಿ ಆಟಗಾರ ಚೇತೇಶ್ವರ್ ಪೂಜಾರಗಿಂತ ಹಿಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಚೇತೇಶ್ವರ್ ಪೂಜಾರ 20 ಪಂದ್ಯಗಳಲ್ಲಿ 54.08ರ ಸರಾಸರಿಯಲ್ಲಿ 1893 ರನ್‌ಗಳಿಸಿದ್ದಾರೆ. ಐದು ಶತಕಗಳನ್ನು ದಾಖಲಿಸಿರುವ ಪೂಜಾರ 10 ಅರ್ಧ ಶತಕಗಳನ್ನು ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದಾರೆ

ರೋಹಿತ್ ಶರ್ಮಾ ಹಾಗೂ ಶೇನ್ ವಾರ್ನ್ ಸಿಕ್ಸರ್‌ನಲ್ಲಿ ಸಮ ಸಾಧನೆ!

ರೋಹಿತ್ ಶರ್ಮಾ ಹಾಗೂ ಶೇನ್ ವಾರ್ನ್ ಸಿಕ್ಸರ್‌ನಲ್ಲಿ ಸಮ ಸಾಧನೆ!

ಸ್ಪಿನ್ ದಿಗ್ಗಜ ಶೇನ್ ವಾರ್ನ್ ಟೆಸ್ಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಸದಷ್ಟೇ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. 2001ರಲ್ಲಿ ಶೇನ್ ವಾರ್ನ್ ಭಾರತದ ವಿರುದ್ಧ ಟೆಸ್ಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಭರ್ಜರಿ ಮೂರು ಸಿಕ್ಸರ್ ಸಿಡಿಸಿದ್ದರು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ವಿರುದ್ಧ ಇಷ್ಟೇ ಸಿಕ್ಸರ್ ಸಿಡಿಸಿದ್ದಾರೆ.

ಕೊಹ್ಲಿ, ರೋಹಿತ್‌ಗಿಂತ ಮೇಲಿದ್ದಾರೆ ಎಂಎಸ್ ಧೋನಿ

ಕೊಹ್ಲಿ, ರೋಹಿತ್‌ಗಿಂತ ಮೇಲಿದ್ದಾರೆ ಎಂಎಸ್ ಧೋನಿ

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂಕಿಅಂಶವೊಂದರಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರಿಗಿಂತಲೂ ಮುಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಗ್ರಕ್ರಮಾಂಕದಲ್ಲಿ ಆಡುವ ಆಟಗಾರರು. ಆದರೆ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಸಿಡಿಸಿದ ಆಟಗಾರರ ಪೈಕಿ ಎಂಎಸ್ ಧೋನಿ ಈ ಇಬ್ಬರು ಆಟಗಾರರಿಗಿಂತಲೂ ಮುಂದಿದ್ದಾರೆ. 2013ರಲ್ಲಿ ಧೋನಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸಿದ್ದರು. ಆದರೆ ಕೊಹ್ಲಿ ಹಾಗೂ ರೋಹಿತ್ ಅದ್ಭುತ ದಾಖಲೆ ಹೊಂದಿದ್ದರೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಲು ಸಾಧ್ಯವಾಗಿಲ್ಲ.

Story first published: Tuesday, February 7, 2023, 13:58 [IST]
Other articles published on Feb 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+