ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಆರಂಭವಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ. ಈಗ ಅಕ್ಟೋಬರ್ 23 ರಿಂದ ನಡೆಯಲಿರುವ ಎರಡನೇ ಪಂದ್ಯಕ್ಕಾಗಿ ಆಡಿಲೇಡ್ ಸಜ್ಜಾಗಿದೆ. ಈ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿರ್ವಾಯತೆಯಲ್ಲಿ ಇದೆ. ಈ ಪಂದ್ಯಕ್ಕಾಗಿ ಭಾರತ ಈಗಿನಿಂದಲೇ ರೂಪುರೇಷೆಗಳನ್ನು ಆರಂಭಿಸಿವೆ. ಆದರೆ ಅಂಕಿ ಅಂಶಗಳು ಮಾತ್ರ ಭಾರತದ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅಲ್ಲದೆ ವಿರಾಟ್ ಕೊಹ್ಲಿ ಅವರಿಗೆ ಈ ಅಂಗಳ ಫೆವರೀಟ್.
ಭಾರತಕ್ಕೆ ಈ ಅಂಗಳ ಲಕ್ಕಿ.. ಇದೇ ಅಂಗಳದಲ್ಲಿ ಈ ಹಿಂದೆ ನಡೆದಿದ್ದ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಇನ್ನು ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಅಂಕಿ ಅಂಶಗಳು ಭರ್ಜರಿಯಾಗಿವೆ. ಈ ಅಂಕಿ ಅಂಶಗಳು ಎದುರಾಳಿಗಳಿಗೆ ನಡುಕ ಹುಟ್ಟಿಸಿವೆ. ವಿರಾಟ್ ಈ ಅಂಗಳದಲ್ಲಿ ರನ್ ಮಹಲ್ ಕಟ್ಟಿದ್ದಾರೆ. ಅಕ್ಟೋಬರ್ 23 ರಂದು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಜಯ ಸಾಧಿಸಿ, ಈ ಮೈದಾನದಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ.

ಆಡಿಲೇಡ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಒಟ್ಟು 6 ಬಾರಿ ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಆಸೀಸ್ 6, ಭಾರತ 2 ಪಂದ್ಯಗಳಲ್ಲಿ ಗೆದ್ದಿದೆ. ಆತಿಥೇಯ ತಂಡದ 4 ಗೆಲುವುಗಳು ಆರಂಭಿಕ ಪಂದ್ಯಗಳಲ್ಲೇ ಬಂದಿವೆ. 2012ರಲ್ಲಿ ಟೀಮ್ ಇಂಡಿಯಾ 2 ಎಸೆತ ಬಾಕಿ ಇರುವಂತೆಯೇ 270 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆದ್ದಿತ್ತು.
ಕೊಹ್ಲಿ ಅವರಿಗೆ ಈ ಮೈದಾನ ನೆಚ್ಚಿನ ಅಂಗಳಗಲ್ಲಿ ಒಂದಾಗಿದೆ. ಈ ಮೈದಾನದಲ್ಲಿ ವಿರಾಟ್ 12 (ಮೂರು ಸ್ವರೂಪಗಳಲ್ಲಿ) ಪಂದ್ಯಗಳನ್ನು ಆಡಿದ್ದು, ಈ ವೇಳೆ 5 ಶತಕಗಳನ್ನು ಬಾರಿಸಿದ್ದಾರೆ. ಇದೇ ವೇಳೆ 65 ಸರಾಸರಿಯಲ್ಲಿ 975 ರನ್ ಗಳಿಸಿದ್ದಾರೆ. ಇದೇ ಅಂಗಳದಲ್ಲಿ ಬೇರೆ ಯಾವುದೇ ಭಾರತೀಯ ಬ್ಯಾಟರ್ 600 ರನ್ ಕಲೆ ಹಾಕಲು ಸಾಧ್ಯವಾಗಿಲ್ಲ. ಇನ್ನು ವಿರಾಟ್ ಆಡಿಲೇಡ್‌ನಲ್ಲಿ 83.84 ಸರಾಸರಿಯಲ್ಲಿ 244 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ. ಅವರು ಈ ಮೈದಾನದಲ್ಲಿ ಭಾರತಕ್ಕಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಭಾರತ 2019 ರಲ್ಲಿ ವಿರಾಟ್ ಶತಕ ಬಾರಿಸಿ ಅಬ್ಬರಿಸಿದ್ದರು.

ಎರಡನೇ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಇನ್ನು ಭಾರತದ ಪರ ಈ ಪಂದ್ಯದಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಹೇಗೆ ಪ್ರದರ್ಶನ ನೀಡ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.