For Quick Alerts
ALLOW NOTIFICATIONS  
For Daily Alerts
 

ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಹೂಸೈನ್ ಅಯೋಬ್ ನಿಧನ

ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಮಾಜಿ ವೇಗದ ಬೌಲರ್ ಹೂಸೈನ್ ಅಯೋಬ್ ದೀರ್ಘಕಾಲದ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದು, ಅವರಿಗೆ 81 ವರ್ಷ ವಯಸ್ಸಾಗಿತ್ತು.

ವರ್ಣಭೇದ ನೀತಿಯಿಂದಾಗಿ ದೇಶಕ್ಕಾಗಿ ಎಂದಿಗೂ ಆಡಲಿಲ್ಲ. ದಂತಕಥೆ ಅಯೋಬ್ ಅವರು ದೇಶದ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರು ಆದರೆ ವರ್ಣಭೇದ ನೀತಿಯ ಕಾರಣದಿಂದಾಗಿ ದೇಶವನ್ನು ಪ್ರತಿನಿಧಿಸಲು ಅವಕಾಶ ನೀಡಲಿಲ್ಲ.

ಪೋರ್ಟ್ ಎಲಿಜಬೆತ್‌ನಲ್ಲಿರುವ ಕುಟುಂಬವನ್ನು ಭೇಟಿ ಮಾಡಿದ ನಂತರ ಶನಿವಾರ ಬೆಳಗ್ಗೆ ಅವರು ಮೂತ್ರಪಿಂಡದ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ನಿಧನರಾದರು. ಮಾಜಿ ವೇಗಿಯು ತನ್ನ ಜೀವನದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಅಡೆತಡೆಗಳನ್ನು ಎದುರಿಸಿದ್ದು, ಅದನ್ನು ಅವರು ತಮ್ಮ 2020ರ ಪುಸ್ತಕ 'ಕ್ರಾಸಿಂಗ್ ಬೌಂಡರೀಸ್'ನಲ್ಲಿ ದಾಖಲಿಸಿದ್ದಾರೆ.

India-based Former South African Cricketer Hussain Ayob Passed Away

ಪುಸ್ತಕದ ಮುನ್ನುಡಿಯಲ್ಲಿ, ಪ್ರಸಿದ್ಧ ಕ್ರಿಕೆಟಿಗ ಕ್ಲೈವ್ ಲಾಯ್ಡ್, "ಉತ್ಕೃಷ್ಟತೆಯನ್ನು ಸಾಧಿಸುವಲ್ಲಿ ಹೂಸೇನ್ ಅವರ ಸ್ಥಿತಿಸ್ಥಾಪಕತ್ವ ಮತ್ತು ಪರಿಶ್ರಮವು ಅಸಾಧಾರಣವಾಗಿದೆ,' ಬರೆದಿದ್ದಾರೆ.

ಯುನೈಟೆಡ್ ಕ್ರಿಕೆಟ್ ಬೋರ್ಡ್ (ಇಂದಿನ ಕ್ರಿಕೆಟ್ ಸೌತ್ ಆಫ್ರಿಕಾ) ಉದ್ಘಾಟನೆಯಾದ ನಂತರ ಮತ್ತು ದಕ್ಷಿಣ ಆಫ್ರಿಕಾವನ್ನು ಅಂತರಾಷ್ಟ್ರೀಯ ಮಡಿಲಿಗೆ ಪುನಃ ಸೇರಿಸಿಕೊಂಡ ನಂತರ, ಅಯೋಬ್ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಭಿವೃದ್ಧಿ ಸಮಿತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ತನ್ನ 70ರ ಹರೆಯದಲ್ಲಿ, ಅಯೋಬ್ ತರಬೇತುದಾರಿಗೆ ತರಬೇತಿಯನ್ನು ಕೈಗೊಂಡರು ಮತ್ತು ಆಫ್ರಿಕಾಕ್ಕೆ ಪ್ರವಾಸವನ್ನು ಮಾಡಿದರು, ಅಲ್ಲಿ ಅವರು ತಮ್ಮ ಜೀವನದ ಕೊನೆಯ ದಶಕಗಳ ಕಾಲ ಕ್ರಿಕೆಟ್ ಆಟವನ್ನು ಪ್ರಚುರಪಡಿಸಿದರು.

ಆಫ್ರಿಕನ್ ಖಂಡದಾದ್ಯಂತ ಸಾವಿರಾರು ಮಕ್ಕಳಿಗೆ ಕ್ರಿಕೆಟ್ ಪ್ರೀತಿಯನ್ನು ಬೆಳೆಸಲು ಅವರ ಮಾರ್ಗದರ್ಶನ ಅಮೂಲ್ಯವಾಗಿತ್ತು. ಇದು ಅವರು ಬಹು ಬೇಡಿಕೆಯ ಪ್ರೇರಕ ಭಾಷಣಕಾರರಾಗಲು (Motivational Speaker) ಕಾರಣವಾಯಿತು.

ಅಯೋಬ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಟ್ರಾನ್ಸ್‌ವಾಲ್‌ನ ಹಳೆಯ ಪ್ರಾಂತ್ಯದಾದ್ಯಂತ ಹಲವಾರು ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಡಯಾಲಿಸಿಸ್ ರೋಗಿಯಾಗಿ ಅನುಭವಿಸಿದ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ನೋವಿನ ಬಗ್ಗೆ ರೋಗಿಗಳು ಮತ್ತು ಸಾರ್ವಜನಿಕರಿಗೆ ಒಳನೋಟ ನೀಡಲು "ಮೈ ಲಾಸ್ಟ್ ಇನ್ನಿಂಗ್ಸ್' ಎಂಬ ಶೀರ್ಷಿಕೆಯ ಎರಡನೇ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

Story first published: Saturday, May 7, 2022, 18:37 [IST]
Other articles published on May 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+