IND vs AUS 4th T20: ಭಾರತದ ಸ್ಪಿನ್ ಬಲೆಗೆ ಬಿದ್ದ ಆಸೀಸ್: ಸೂರ್ಯ ಪಡೆಗೆ ಸಣಿಯಲ್ಲಿ ಮುನ್ನಡೆ
ಭರವಸೆಯ ಸ್ಪಿನ್ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯವನ್ನು 48 ರನ್‌ಗಳಿಂದ ಗೆದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಟೀಮ್ ಇಂಡಿಯಾದ ನೀಡಿದ್ದ 168 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ ಆರಂಭವನ್ನು ಕಂಡಿತು. ಮ್ಯಾಥ್ಯೂ ಶಾರ್ಟ್ 25 ರನ್ ಬಾರಿಸಿದ್ದಾಗ ಅಕ್ಷರ್ ಪಟೇಲ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ಆದರೆ ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯುಗೆ ಮನ್ನಣೆ ನೀಡದಗ ಭಾರತ ಮೇಲನ್ಮವಿ ಸಲ್ಲಿಸಿತು. ಟಿವಿ ಅಂಪೈ್ ಪರಿಶೀಲನೆ ನಡೆಸಿ ಔಟ್ ಎಂದು ತಿಳಿಸಿದರು.

ಮಧ್ಯಮ ಕ್ರಮಂಕದಲ್ಲಿ ಜೋಶ್ ಇಂಗ್ಲೀಷ್ (12), ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಮಿಚೆಲ್ ಮಾರ್ಷ್ 24 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 30 ರನ್ ಬಾರಿಸಿದ್ದಾಗ ತಾಳ್ಮೆ ಕಳೆದುಕೊಂಡರು. ಕಳೆದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಗ್ ಪ್ರದರ್ಶನ ನೀಡಿದ್ದ ಟೀಮ್ ಡೇವಿಡ್ 14 ರನ್‌ಗಳಿಗೆ ಆಟ ಮುಗಿಸಿದರು. ಆಲ್‌ರೌಂಢರ್ ಮಾರ್ಕಸ್ ಸ್ಟೋಯ್ನಿಸ್ 17 ರನ್ ಬಾರಿಸಿ ಔಟ್ ಆದರು. ನಂತರ ಬಂದ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಭಾರತ ತಂಡದ ಬಿಗುವಿನ ದಾಳಿ ನಡೆಸಿ ಅಬ್ಬರಿಸಿತು. ಅಂತಿಮವಾಗಿ ಆಸ್ಟ್ರೇಲಿಯಾ 18.2 ಓವರ್‌ಗಳಲ್ಲಿ 119 ರನ್‌ಗೆ ಆಲೌಟ್ ಆಯಿತು.
ಸ್ಪಿನ್ನರ್ ಕಮಾಲ್
11.3 ಓವರ್‌ಗಳಲ್ಲಿ 91 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಸೀಸ್ ನಂತರ 28 ರನ್ ಕಲೆ ಹಾಕುತ್ತಲೇ 7 ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ಭಾರತದ ಪರ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ 3, ಅಕ್ಷರ್ ಪಟೇಲ್, ಶಿವಂ ದುಬೆ ತಲಾ 2 ವಿಕೆಟ್ ಉರುಳಿಸಿದರೆ, ಅರ್ಷದೀಪ್, ಬುಮ್ರಾ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಸ್ಟಾರ್ ಬ್ಯಾಟರ್‌ಗಳ ವೈಫಲ್ಯ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಸ್ಟಾರ್ ಆಟಗಾರರು ತಂಡಕ್ಕೆ ಬಿಗ್ ಓಪನಿಂಗ್ ನೀಡುವಲ್ಲಿ ವಿಫಲರಾದರು. ಆರಂಭಿಕ ಅಭಿಷೇಕ್ ಶರ್ಮಾ (28), ಶಿವಂ ದುಬೆ (22), ನಾಯಕ ಸೂರ್ಯಕುಮಾರ್ ಯಾದವ್ (20) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ 39 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 46 ರನ್ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 12, ಅಕ್ಷರ್ ಪಟೇಲ್ ಅಜೇಯ 21 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ವಿಫಲರಾದರು. ಭಾರತ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್ ಸೇರಿಸಿತು. ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ ಹಾಗೂ ಆಡಂ ಜಂಪಾ ತಲಾ ಮೂರು ವಿಕೆಟ್ ಕಬಳಿಸಿದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟಿ20 ಪಂದ್ಯ ಶನಿವಾರ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ವಶಕ್ಕೆ ಪಡೆಯುವ ಕನಸಿನಲ್ಲಿ ಭಾರತ ತಂಡ ಇದ್ದರೆ, ಆಸೀಸ್ ಸರಣಿಯಲ್ಲಿ ಸಮಬಲ ಸಾಧಿಸುವ ಕನಸಿನಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications