ಪಾಕಿಸ್ತಾನವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತದ ವನಿತೆಯರು
ಕೊಲಂಬೊ, ಫೆಬ್ರವರಿ. 19 : ಐಸಿಸಿ ಮಹಿಳೆಯರ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ ಮಹಿಳಾ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾ ಬೌಲಿಂಗ್ ಗೆ ರನ್ ಗಳಿಸಲು ಪರದಾಡಿದರು. ನಿಗದಿ 43.5 ಓವರ್ ಗಳಲ್ಲಿ ಪಾಕಿಸ್ತಾನ ಕೇವಲ 67 ರನ್ ಗಳಿಗೆ ಸರ್ವಪತ ಕಂಡಿತು.[2017 ವಿಶ್ವಕಪ್ ಗೆ ಅರ್ಹತೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ]

ಸುಲಭ ಗುರಿ ಬೆನ್ನಟ್ಟಿದ ಭಾರತ 22.3ಓವರ್ ಗಳಲ್ಲಿ 3ವಿಕೆಟ್ ಕಳೆದುಕೊಂಡು ಗೆಲವು ಸಾಧಿಸಿತು. ಭಾರತ ಮೂರನೇ ವಿಕೆಟ್ ಗೆ ದೀಪ್ತಿ ಶರ್ಮ ಹಾಗೂ ಕೌರ್ ಜೋಡಿ 42 ರನ್ ಪೇರಿಸಿ ತಂಡದ ಗೆಲುವಿಗೆ ಪಾತ್ರವಾಯಿತು.
ದೀಪ್ತಿ ಶರ್ಮ ನಾಟೌಟ್ 29, ಕೌರ್ 24 ರನ್ ಗಳಿಸಿದರು. ಈಗಾಗಲೇ 2017 ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾ ಸದ್ಯ ಆಡಿದ ಐದೂ ಪಂದ್ಯಗಳನ್ನು ಗೆದ್ದು, 10 ಅಂಕಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2017 ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ನಲ್ಲಿ ಜೂನ್ ನಿಂದ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications