IND vs WI 2nd Test: 7 ವಿಕೆಟ್‌ಗಳಿಂದ ವಿಂಡೀಸ್ ಮಣಿಸಿದ ಭಾರತಕ್ಕೆ ಟೆಸ್ಟ್ ಸರಣಿ: ಕೋಚ್‌ಗೆ ಬರ್ತ್‌ಡೇ ಗಿಫ್ಟ್ ನೀಡಿದ ತಂಡ
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಆತಿಥೇಯ ಟೀಮ್ ಇಂಡಿಯಾ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದಿದೆ. ಈ ಮೂಲಕ ಶುಭಮನ್ ಗಿಲ್ ಪಡೆ ಮೊದಲ ಬಾರಿಗೆ ತವರಿನಲ್ಲಿ ಸರಣಿ ಗೆಲುವಿನ ನಗೆ ಬೀರಿದೆ. ಗಿಲ್ ಪಡೆ 2 ಪಂದ್ಯಗಳ ಸರಣಿಯಲ್ಲಿ 2-0ಯಿಂದ ಜಯ ಸಾಧಿಸಿದೆ. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಸೈಕಲ್‌ನಲ್ಲಿ ಟೀಮ್ ಇಂಡಿಯಾ ಮೊದಲ ಗೆಲುವಿನ ನಗೆ ಬೀರಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಸುಧಾರಣೆ ಕಂಡಿದೆ.
ಸೋಮವಾರ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 63 ರನ್‌ಗಳಿಂದ ಆಟ ಮುಂದುವರೆಸಿದ ಭಾರತ, ಗೆಲುವಿಗೆ ಇನ್ನು 58 ರನ್ ಅವಶ್ಯಕತೆ ಇತ್ತು. ತಾಳ್ಮೆಯಿಂದ ಆಟವನ್ನು ಮುಂದುವರೆಸಿದ ಭಾರತ, 88 ರನ್ ಆಗಿದ್ದಾಗ ಮಂಗಳವಾರ 39 ರನ್‌ಗಳಿಸಿದ್ದ ಸಾಯಿ ಸುದರ್ಶನ್ ಅವರ ವಿಕೆಟ್ ಕಳೆದುಕೊಂಡಿತು. ಇನ್ನು ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಬಿರುಸಿನ ಆಟವನ್ನು ಆಡುವ ಪ್ರದರ್ಶಿಸಿ 13 ರನ್‌ಗಳಿಗೆ ಆಟ ಮುಗಿಸಿದರು.

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ತಾಳ್ಮಯಿಂದ ಬ್ಯಾಟಿಂಗ್ ಮಾಡಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳ್ತಾ ಇದ್ದರೂ ಸಹ ಸಂಯಮ ಕಳೆದಯುಕೊಳ್ಳದೆ ಬ್ಯಾಟ್ ಮಾಡಿದ ರಾಹುಲ್ ತಮ್ಮ ಟೆಸ್ಟ್ ಜೀವನದ 20ನೇ ಆರ್ಧಶತಕ ಬಾರಿಸಿ ಮಿಂಚಿದರು.ಇವರು 108 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಸಿಡಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಅಜೇಯ 6 ರನ್ ಬಾರಿಸಿದರು.
ಸತತ 10ನೇ ಸರಣಿ ಗೆಲುವು
ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸುತ್ತಿದ್ದಂತೆ, ಹೊಸ ದಾಖಲೆಯನ್ನು ಬರೆದಿದೆ. ಭಾರತ ಒಂದು ತಂಡದ ವಿರುದ್ಧದ ಸತತ 10ನೇ ಸರಣಿ ಗೆಲುವಿನ ನಗೆ ಬೀರಿದೆ. ವೆಸ್ಟ್ ಇಂಡೀಸ್ 1983-84ರಿಂದ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಕೆರಿಬಿಯನ್ ತಂಡವು 1993-94 ರಿಂದಲೂ ಭಾರತದಲ್ಲಿ ಟೆಸ್ಟ್ ಗೆಲುವಿಗಾಗಿ ಹಂಬಲಿಸುತ್ತಿದೆ.
ಕೋಚ್‌ಗೆ ಭರ್ಜರಿ ಗಿಫ್ಟ್
ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಅಕ್ಟೋಬರ್ 14 ರಂದು ತಮ್ಮ 43ನೇ ಬರ್ತ್‌ಡೇ ಸಂಭ್ರಮ ಆಚರಿಸಿಕೊಂಡರು. ಈ ವೇಳೆ ತಂಡ ಕೋಚ್‌ಗೆ ಜಯದ ಗಿಫ್ಟ್ ನೀಡಿತು. ಈ ಮೂಲಕ ಗೌತಮ್ ಗಂಭೀರ್ ಅವರ ಮಖದಲ್ಲಿ ತಂಡ ಮಂದಹಾಸ ಮೂಡಿಸಿದೆ.
ಪಂದ್ಯದ ಫಲಿತಾಂಶ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 518 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 248 ರನ್ ಸೇರಿಸಿತು. ಫಾಲೋ ಆನ್ ಪಡೆದ ವಿಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 390 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ 3 ವಿಕೆಟ್‌ಗಳಿಂದ ಪಂದ್ಯ ಗೆದ್ದಿತು.
ಪಂದ್ಯ ಶ್ರೇಷ್ಠ: ಕುಲ್‌ದೀಪ್ ಯಾದವ್
ಸರಣಿ ಶ್ರೇಷ್ಠ: ರವೀಂದ್ರ ಜಡೇಜಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications