ಐಸಿಸಿ ನಂ.1 ಏಕದಿನ ಕ್ರಿಕೆಟ್ ತಂಡ ಪಟ್ಟ ಅಲಂಕರಿಸಿದ ಭಾರತ

Posted By:
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮತ್ತೊಂದು ಸಾಧನೆ | Oneindia Kannada
India became ICC number 1 cricket team

ಕೇಪ್‌ಟೌನ್, ಫೆಬ್ರವರಿ 14: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡ, ಸರಣಿ ಗೆಲುವಿನ ಬೆನ್ನಲ್ಲೆ ಮತ್ತೊಂದು ಸಾಧನೆಗೈದಿದೆ.

ಭಾರತ ಕ್ರಿಕೆಟ್‌ ತಂಡವು ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆಲ್ಲುತ್ತಿದ್ದಂತೆ ಐಸಿಸಿ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ. ಆ ಮೂಲಕ ಟೆಸ್ಟ್ ಹಾಗೂ ಏಕದಿನ ಎರಡೂ ಪ್ರಕಾರದಲ್ಲಿ ನಂ.1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಪ್ರಸ್ತುತ ಭಾರತವು 121 ಪಾಯಿಂಟ್ಸ್‌ ಹೊಂದಿದ್ದು ದ.ಆಫ್ರಿಕಾ 119 ಪಾಯಿಂಟ್ಸ್‌ ಮಾತ್ರವೇ ಗಳಿಸಿದೆ. 116 ಪಾಯಿಂಟ್ಸ್‌ ಗಳಿಸಿರುವ ಇಂಗ್ಲೆಂಡ್‌ ತಂಡ 3 ನೇ ಸ್ಥಾನದಲ್ಲಿದೆ. 4 ಮತ್ತು 5ನೇ ಸ್ಥಾನದಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಇದೆ.

ಏಕದಿನ ಸರಣಿ ಪ್ರಾರಂಭವಾಗುವ ಮೊದಲಿಗೆ ಮೊದಲ ಸ್ಥಾನದಲ್ಲಿದ್ದ ದ.ಆಫ್ರಿಕಾ ತಂಡವು ಸರಣಿ ಸೋತು ದ್ವಿತೀಯ ಸ್ಥಾನಕ್ಕೆ ಜಾರಿದೆ. ಭಾರತ ಈ ಸರಣಿ ಜಯಿಸುವ ಮೂಲಕ ಸತತವಾಗಿ 9 ಏಕದಿನ ಸರಣಿ ಗೆದ್ದ ಇತಿಹಾಸವನ್ನು ನಿರ್ಮಿಸಿರುವುದು ವಿಶೇಷ.

ಭಾರತವು ಟೆಸ್ಟ್‌ ರ್ಯಾಂಕಿಂಗ್‌ನಲ್ಲಿಯೂ 121 ಪಾಂಯಿಂಟ್ಸ್‌ ಗಳಿಸುವ ಮೂಲಕ ನಂ.1 ಸ್ಥಾನದಲ್ಲಿದೆ. ದ.ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಏಕದಿನ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಟೆಸ್ಟ್‌ನಲ್ಲಿ 3ನೇ ಸ್ಥಾನದಲ್ಲಿದೆ.

Story first published: Wednesday, February 14, 2018, 18:52 [IST]
Other articles published on Feb 14, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ