ಸಂಜು ಸ್ಯಾಮ್ಸನ್, ಶಿವಂ ದುಬೆ ವಿಕೆಟ್ ಪಡೆದ ಭಾರತದ ಮೂಲದ ಐರ್ಲೆಂಡ್ ಆಟಗಾರ ಜೈ ಮೂಂದ್ರ ಯಾರು?
ಬೆಲ್‌ಫಾಸ್ಟ್: ಭಾರತ ಹಾಗೂ ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಎಲ್ಲರ ಚಿತ್ತ 15 ವರ್ಷದ ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿತ್ತು. ಆದರೆ ವೈಭವ್ ಅವರಿಗೆ ಆಡುವ ಅವಕಾಶ ಲಭಿಸಲಿಲ್ಲ. ಆದರೆ ಮೊದಲ ಟಿ20 ಪಂದ್ಯದಲ್ಲಿ ಭಾರತ ಮೂಲದ ಜೈ ಮೂಂದ್ರ ಶುಕ್ರವಾರ ಐರ್ಲೆಂಡ್ ಪರ ಪದಾರ್ಪಣೆ ಮಾಡಿದರು. ಇವರು ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದರು. ಇವರು ತಾವು ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದು ಬೀಗಿದರು. ಈಗ ಸಾಮಾಜಿಕ ತಾಣದಲ್ಲಿ ಇವರ ಬಗ್ಗೆ ಹುಡುಕಾಟ ಶುರುವಾಗಿದೆ.
ರಾಜಸ್ಥಾನ ಮೂಲದ ಜೈ ಮೂಂದ್ರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ರಾಜಸ್ಥಾನದ ಟೋಂಕ್‌ದಲ್ಲಿ ಜನವರಿ 10, 1997ರಲ್ಲಿ ಜನಿಸಿದರು. ರಾಜಸ್ಥಾನದಲ್ಲಿ ಇವರು ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಇವರು ಸ್ಥಳೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಇವರು ಆರಂಭದಲ್ಲಿ ವೇಗದ ಬೌಲರ್ ಆಗಿ ಕ್ರಿಕೆಟ್ ಜೀವನ ಆರಂಭಿಸಿದರು. 16ನೇ ವಯಸ್ಸಿನಲ್ಲಿ ಇವರು ಟಾಪ್ ಆರ್ಡರ್ ಬ್ಯಾಟರ್ ಹಾಗೂ ಸ್ಪಿನ್ ಬೌಲರ್ ಆಗಿ ಬದಲಾದರು.

ಜೈ ಮೂಂದ್ರ ಯಾರು?
ಜೈ ಮೂಂದ್ರ ಅವರಿಗೆ ವೇಗದ ಬೌಲಿಂಗ್ ಮೇಲಿನ ಪ್ರೀತಿ ಕಡಿಮೆ ಆಗಲಿಲ್ಲ. ಪರಿಣಾಮ ಇವರು ವೇಗದ ಬೌಲಿಂಗ್ ಕಡೆ ಹೆಚ್ಚಿನ ಗಮನ ಹರಿಸಿದರು. ಇದರ ನಡುವೆ ಶಿಕ್ಷಣದ ಕಡೆಗೆ ಗಮನ ಹರಿಸಿದ್ದ ಅವರು, 2019 ರಲ್ಲಿ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಿದರು. ಕೆಲಸಕ್ಕೆ ಸೇರಿದರೆ ನನ್ನ ಕ್ರಿಕೆಟ್ ಜರ್ನಿಗೆ ಪೆಟ್ಟು ಬೀಳುತ್ತದೆ ಎಂದು ಭಾವಿಸಿ, ಕ್ರಿಕೆಟ್‌ಗೆ ಇನ್ನೊಂದು ಅವಕಾಶ ನೀಡುವ ಆಸೆ ಇವರದ್ದಾಗಿತ್ತು. 2021ರಲ್ಲಿ ಐರ್ಲೆಂಡ್‌ಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಜೈ ಮೂಂದ್ರ, ಅಲ್ಲಿಯೇ ಕ್ರಿಕೆಟ್ ಅಭ್ಯಾಸವನ್ನು ಸಹ ಆರಂಭಿಸಿದರು.
ಡಬ್ಲಿನ್‌ನ 'ಲೆನ್‌ಸ್ಟರ್ ಕ್ರಿಕೆಟ್ ಕ್ಲಬ್' ಸೇರಿಕೊಂಡರು. ಇವರ ಅದ್ಭುತ ಪ್ರದರ್ಶನದ ನೆರವಿನಿಂದ 2023ರಲ್ಲಿ ಕ್ಲಬ್ ಐರಿಶ್ ಸೀನಿಯರ್ ಕಪ್ ಗೆದ್ದಿತು. ಇವರಿಗೆ 2025ರಲ್ಲಿ ಐರ್ಲೆಂಡ್ ಪೌರತ್ವ ಲಭಿಸಿತು. ಇವರು ತಮ್ಮ ಎಡಗೈ ಬೌಲಿಂಗ್ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್‌ನಿಂದ ಹೆಸರು ಮಾಡಿದರು. ಇವರ ಸ್ಥಿರ ಪ್ರದರ್ಶನಕ್ಕೆ ಐರ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿತು.
ಜೈ ಮೂಂದ್ರ ಅವರ ಬಗ್ಗೆ ಐರ್ಲೆಂಡ್ ನಾಯಕ ಲೋರ್ಕನ್ ಟಕರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜೈ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಎಡಗೈ ಬೌಲರ್ ಆಗಿರುವುದರಿಂದ ಆಂಗಲ್‌ನಲ್ಲಿ ವ್ಯತ್ಯಾಸವಿರುತ್ತದೆ ಮತ್ತು ಹೊಸ ಚೆಂಡನ್ನು ಸ್ವಿಂಗ್ ಮಾಡುವ ಅವರ ಸಾಮರ್ಥ್ಯ ನಿಜಕ್ಕೂ ಪ್ರಭಾವಶಾಲಿಯಾಗಿದೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications