ಬೌಂಡರಿ ಲೆಕ್ಕಾಚಾರದಲ್ಲೂ ಆಸ್ಟ್ರೇಲಿಯಾ ದಾಖಲೆ ಅಳಿಸಿದ ಟೀಮ್ ಇಂಡಿಯಾ
ಭಾರತ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಓವಲ್‌ನಲ್ಲಿ ಐದನೇ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸುವ ಕನಸು ಶುಭಮನ್ ಗಿಲ್ ಪಡೆಯದ್ದಾಗಿದೆ. ಈ ಸರಣಿಯಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ಟೀಮ್ ಇಂಡಿಯಾ ಈಗ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ ಆಸ್ಟ್ರೇಲಿಯಾ ದಾಖಲೆಯನ್ನು ಅಳಿಸಿ ಹಾಕಿದೆ. ಭಾರತ ಆಸ್ಟ್ರೇಲಿಯಾದ ಯಾವ ದಾಖಲೆಯನ್ನು ಅಳಿಸಿದ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ, ಇಂಗ್ಲೆಂಡ್‌ನೆಲದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಟೀಮ್ ಇಂಡಿಯಾ ಬ್ಯಾಟರ್‌ಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಮೂವರು ಬ್ಯಾಟರ್‌ಗಳು ಸರಣಿಯಲ್ಲಿ 500ಕ್ಕೂ ಹೆಚ್ಚು ಬಾರಿಸಿದ್ದಾರೆ. ಈ ಮೂಲಕ ಭಾರತದ ಪರ ಈ ಹಿಂದೆ ಮಾಡದ ಸಾಧನೆಯನ್ನು ಗಿಲ್, ಜಡೇಜಾ, ರಾಹುಲ್ ಮಾಡಿದ್ದಾರೆ. ಈಗ ಟೀಮ್ ಇಂಡಿಯಾದ ಸಂಘಟಿತ ಆಟಕ್ಕೆ ಮತ್ತೊಂದು ಮುಡಿ ಸಿಕ್ಕಿದೆ. ಟೀಮ್ ಇಂಡಿಯಾ ಅತಿ ಹೆಚ್ಚು ಬೌಂಡರಿ ಬಾರಿಸಿದ ಹಿರಿಮೆಯನ್ನು ತನ್ನಾಗಿಸಿಕೊಂಡಿದೆ.

ಟೀಮ್ ಇಂಡಿಯಾ ಈ ಸರಣಿಯಲ್ಲಿ ಒಟ್ಟು 422 ಬೌಂಡರಿ ಮತ್ತು 48 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಒಟ್ಟಾರೆಯಾಗಿ, ಅವರು 470 ಬೌಂಡರಿಗಳನ್ನು ಸಿಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದೆ. ಈ ಮೊದಲು 1993ರಲ್ಲಿ ನಡೆದಿದ್ದ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ 451 ಬೌಂಡರಿ ಹಾಗೂ 9 ಸಿಕ್ಸರ್‌ಗಳನ್ನು ಬಾರಿಸಿತ್ತು. ಈ ಮೂಲಕ ಆಸ್ಟ್ರೇಲಿಯಾ 460 ಬೌಂಡರಿಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಟೀಮ್ ಇಂಡಿಯಾದ ಆಟಗಾರರು ಒಟ್ಟಾಗಿ ಒಂದು ಟೆಸ್ಟ್ ಸರಣಿಯಲ್ಲಿ 400 ಕ್ಕೂ ಹೆಚ್ಚು ಬೌಂಡರಿಗಳನ್ನು ಬಾರಿಸಿದ್ದು ಇದೇ ಮೊದಲು.
ಆಂಡರ್ಸನ್ ಹಾಗೂ ತೆಂಡುಲ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾದ ಒಟ್ಟು 12 ಬ್ಯಾಟರ್‌ಗಳು ಶತಕ ಸಾಧನೆ ಮಾಡಿದ್ದಾರೆ. ಇದು ಸಹ ಒಂದು ದಾಖಲೆ ಆಗಿದೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹ ಸಾಧನೆಯನ್ನು ಮಾಡಿವೆ. ಟೀಮ ಇಂಡಿಯಾ ಇದಕ್ಕೂ ಮೊದಲು ಒಂದೇ ಸರಣಿಯಲ್ಲಿ 11 ಶತಕ ಬಾರಿಸಿದ್ದೇ ದೊಡ್ಡ ಸಾಧನೆ ಆಗಿತ್ತು.

ಗೆಲುವಿನ ಕನಸಿನಲ್ಲಿ ಭಾರತ
ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ಇಂಗ್ಲೆಂಡ್ ಗೆಲುವಿಗೆ ಟೀಮ್ ಇಂಡಿಯಾ 374 ರನ್ ನೀಡಿದೆ. ಟೀಮ್ ಇಂಡಿಯಾದ ಪರ ಶನಿವಾರ ಹಲವು ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದಾರೆ. ಇನ್ನು ಆಕಾಶ್ ದೀಪ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿಲು ಇನ್ನು 324 ರನ್‌ಗಳ ಅಗತ್ಯವಿದೆ. ಇನ್ನು ಟೀಮ್ ಇಂಡಿಯಾಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಇನ್ನು 8 ವಿಕೆಟ್‌ಗಳ ಅವಶ್ಯಕತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications