For Quick Alerts
ALLOW NOTIFICATIONS  
For Daily Alerts
 

ICC World Cup 2023: ವಿಶ್ವಕಪ್ ಸೋತರೂ ಆಸ್ಟ್ರೇಲಿಯಾ ದಾಖಲೆ ಹಿಂದಿಕ್ಕಿ ಐತಿಹಾಸಿಕ ದಾಖಲೆ ನಿರ್ಮಿಸಿದ ಭಾರತ

ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು.

1987, 1999, 2003, 2007, 2015ರ ನಂತರ, ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಇದೀಗ ಮತ್ತೊಮ್ಮೆ 2023ರ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಿತು.

India Broke Australias record and Became the most successful bowling unit in ODI World Cup history

ನಾಲ್ಕನೇ ಬಾರಿ ವಿಶ್ವಕಪ್ ಫೈನಲ್ ತಲುಪಿದ್ದ ಆತಿಥೇಯ ಭಾರತ ತಂಡ ತವರಿನ ಅಭಿಮಾನಿಗಳ ಮುಂದೆ ತನ್ನ ಮೂರನೇ ಏಕದಿನ ವಿಶ್ವಕಪ್ ಗೆಲ್ಲಲು ವಿಫಲವಾಯಿತು. ಇದೇ ವೇಳೆ 1983 ಮತ್ತು 2011ರ ನಂತರ ಮೂರನೇ ಏಕದಿನ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯುವ ಕನಸು ಕಂಡಿದ್ದ ಭಾರತ ತಂಡಕ್ಕೆ ಮತ್ತೊಮ್ಮೆ ನಿರಾಸೆ ಎದುರಾಯಿತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ ತಂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಎಡವಿತು.

ಆದರೂ, ಭಾರತ ತಂಡದ ಬೌಲರ್‌ಗಳು ಆಸ್ಟ್ರೇಲಿಯಾದ ದಾಖಲೆಯನ್ನು ಮುರಿದು ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲಿಂಗ್ ಘಟಕವೆನಿಸಿದೆ. ಈ ಮೂಲಕ ಭಾರತ ಇದೀಗ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ತಂಡವಾಗಿದೆ.

2007ರ ವಿಶ್ವಕಪ್‌ನಲ್ಲಿನ ಆಸ್ಟ್ರೇಲಿಯಾದ ದಾಖಲೆಯನ್ನು ಮುರಿದ ಭಾರತವು ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲಿಂಗ್ ವಿಭಾಗ ಎಂಬ ಖ್ಯಾತಿಗೆ ಪಾತ್ರವಾಗಿದೆ.

India Broke Australias record and Became the most successful bowling unit in ODI World Cup history

2007ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ 97 ವಿಕೆಟ್‌ಗಳನ್ನು ಪಡೆದಿತ್ತು. ಗ್ಲೆನ್ ಮೆಕ್‌ಗ್ರಾತ್ (26), ಶಾನ್ ಟೈಟ್ (23), ಬ್ರಾಡ್ ಹಾಗ್ (21), ನಾಥನ್ ಬ್ರಾಕೆನ್ (16), ಶೇನ್ ವ್ಯಾಟ್ಸನ್ (4), ಆಂಡ್ರ್ಯೂ ಸೈಮಂಡ್ಸ್ (3), ಮೈಕೆಲ್ ಕ್ಲಾರ್ಕ್ (2) ಮತ್ತು ಬ್ರಾಡ್ ಹಾಡ್ಜ್ (1) ಒಗ್ಗೂಡಿ ಒಟ್ಟು 97 ವಿಕೆಟ್‌ಗಳನ್ನು ಪಡೆದಿದ್ದರು.

2023ರ ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ (24), ಜಸ್ಪ್ರೀತ್ ಬುಮ್ರಾ (20), ರವೀಂದ್ರ ಜಡೇಜಾ (16), ಕುಲದೀಪ್ ಯಾದವ್ (15), ಮೊಹಮ್ಮದ್ ಸಿರಾಜ್ (13), ಹಾರ್ದಿಕ್ ಪಾಂಡ್ಯ (5), ಶಾರ್ದೂಲ್ ಠಾಕೂರ್ (2), ರವಿಚಂದ್ರನ್ ಅಶ್ವಿನ್ (1), ವಿರಾಟ್ ಕೊಹ್ಲಿ (1) ಮತ್ತು ರೋಹಿತ್ ಶರ್ಮಾ (1) ವಿಕೆಟ್ ಪಡೆಯುವ ಮೂಲಕ ಭಾರತವು ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿಕೆಟ್‌ಗಳ ಸಂಖ್ಯೆಯನ್ನು ಮೀರಿಸಿತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಸರ್ವಪತನ ಕಂಡಿತು.

241 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 43 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು ಮತ್ತು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕಾರಣರಾದ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 137 ರನ್ ಬಾರಿಸಿದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 110 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ ಅಜೇಯ 58 ರನ್ ಗಳಿಸಿದರು.

Story first published: Sunday, November 19, 2023, 23:01 [IST]
Other articles published on Nov 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+