ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ : ರನ್ ಗಳಿಕೆಯಲ್ಲಿ ಕ್ಯಾಪ್ಟನ್ ಧೋನಿ ದಾಖಲೆ

By Mahesh

ರಾಜ್ ಕೋಟ್, ಅ.19: ಟೀಂ ಇಂಡಿಯಾ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ಹೊಸ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಅವರು ನಾಯಕನಾಗಿ ಈ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ ಮಾಡಿರುವ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 271ರನ್ ಟಾರ್ಗೆಟ್ ನೀಡಿತ್ತು. ರನ್ ಚೇಸ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಧೋನಿ ಉತ್ತಮ ಆಟ ಪ್ರದರ್ಶಿಸಿದರೂ ಭಾರತ ಸೋಲು ಕಂಡಿತು. 50 ಓವರ್ ಗಳಲ್ಲಿ ಟೀಂ ಇಂಡಿಯಾ 252/6 ಸ್ಕೋರ್ ಮಾಡಿತು. ಸೋಲಿನ ಪಂದ್ಯದಲ್ಲೂ ಧೋನಿ ಹೊಸ ಮೈಲಿಗಲ್ಲು ದಾಟಿದ್ದಾರೆ.[ಕೊಹ್ಲಿ-ಧೋನಿ ಫೈಟ್: ಭಾರತದ ಸೋಲಿಗೆ ನೈಜ ಕಾರಣ!]

India captain MS Dhoni achieves yet another milestone

34 ವರ್ಷ ವಯಸ್ಸಿನ ಧೋನಿ ಅವರು 41 ರನ್ ಗಳಿಸಿ ಔಟಾದರು. ಈ ನಡುವೆ ನ್ಯೂಜಿಲೆಂಡ್ ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರನ್ನು ಹಿಂದಿಕ್ಕಿದರು. ನಾಯಕರಾಗಿ ಏಕದಿನ ಕ್ರಿಕೆಟ್ ನಲ್ಲಿ ಹಾಲಿ ಆಡುತ್ತಿರುವ ಆಟಗಾರರ ಪೈಕಿ ಧೋನಿ ಅವರೇ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಧೋನಿ ಅವರಿಗಿಂತ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಇದ್ದಾರೆ. [ಭಾರತಕ್ಕೆ 18 ರನ್ ಗಳಿಂದ ಸೋಲು]

ಧೋನಿ ಅವರು 2004ರಲ್ಲಿ ಏಕದಿನ ಕ್ರಿಕೆಟ್ ವೃತ್ತಿ ಆರಂಭಿಸಿ, 2007ರಲ್ಲಿ 50 ಓವರ್ ಗಳ ತಂಡಕ್ಕೆ ನಾಯಕರಾದರು. ಧೋನಿ 6,313 ಏಕದಿನ ರನ್ (184 ಪಂದ್ಯಗಳು) ಕಲೆ ಹಾಕಿದ್ದಾರೆ. ನಾಯಕರಾಗಿ 6 ಶತಕ, 46 ಅರ್ಧಶತಕ ಸಿಡಿಸಿದ್ದಾರೆ. ಒಟ್ಟಾರೆ 268 ಪಂದ್ಯಗಳಿಂದ 52.63 ರನ್ ಸರಾಸರಿಯಂತೆ 8,790 ರನ್ (9ಶತಕ, 60 ಅರ್ಧಶತಕ) ಗಳಿಸಿದ್ದಾರೆ. [ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಮಾರ್ಗದರ್ಶಿ]

1997 ರಿಂದ 2007ರ ತನಕ ನ್ಯೂಜಿಲೆಂಡ್ ನ ನಾಯಕರಾಗಿದ್ದ ಫ್ಲೆಮಿಂಗ್ ಅವರು 218 ಪಂದ್ಯಗಳಿಂದ 6,295ರನ್ ಗಳಿಸಿದ್ದಾರೆ. ಟಾಪ್ 10 ಏಕದಿನ ಕ್ರಿಕೆಟ್ ನಾಯಕರ ಪಟ್ಟಿಯಲ್ಲಿ ಧೋನಿ ಅವರದ್ದೇ ಶ್ರೇಷ್ಠ ರನ್ ಸರಾಸರಿ(56.87)ಯಾಗಿದೆ. ಅಗ್ರಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಅವರು 42.91ರನ್ ಸರಾಸರಿಯಂತೆ 230 ಪಂದ್ಯಗಳಲ್ಲಿ 8,497ರನ್ ಗಳಿಸಿದ್ದಾರೆ.[ಟಿ20 ಪಂದ್ಯದಲ್ಲಿ ಕ್ಯಾಪ್ಟನ್ ಧೋನಿ ವಿಶ್ವದಾಖಲೆ]

ಟಾಪ್ 5 ಏಕದಿನ ಕ್ರಿಕೆಟ್ ನಾಯಕರು

* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 8,497 runs (230 ಪಂದ್ಯಗಳು)
* ಎಂಎಸ್ ಧೋನಿ (ಭಾರತ) 6,313 (184 )
* ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್) 6,295 (218)
* ಅರ್ಜುನ್ ರಣತುಂಗಾ (ಶ್ರೀಲಂಕಾ) 5,608 (193)
* ಗ್ರಹಾಂ ಸ್ಮಿತ್ (ದಕ್ಷಿಣ ಆಫ್ರಿಕಾ) 5,416 (150)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X