Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG T20: ಚೆನ್ನೈನಲ್ಲಿ ಭಾರತಕ್ಕೆ ಗೆಲುವಿನ ತಿಲಕ: ಸರಣಿಯಲ್ಲಿ 2-0 ಮುನ್ನಡೆ

ಚೆನ್ನೈನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಎರಡು ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಆತಿಥೇಯ ತಂಡದ ಪರ ಭರವಸೆಯ ಬ್ಯಾಟರ್‌ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್‌ ನಡೆಸಿ ಜಯದಲ್ಲಿ ಮಿಂಚಿದರು. ಇನ್ನು ಕೊನೆಯ ವರೆಗೂ ಮಣಿಯದೇ ಕೆಚ್ಚೆದೆಯ ಬ್ಯಾಟಿಂಗ್ ಮಾಡಿ ತಂಡದ ಜಯದಲ್ಲಿ ಆಕರ್ಷಿಸಿದರು.

ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 165 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 19.2 ಓವರ್‌ಗಳಲ್ಲಿ 8 ವಿಕೆಟ್‌ಗೆ 166 ರನ್‌ ಸಿಡಿಸಿ, ಭರ್ಜರಿ ಜಯ ದಾಖಲಿಸಿತು.

India Clinches Thrilling Two-Wicket Win Over England in Chennai Takes 2-0 Series Lead

ಟಾಪ್ ಆಡರ್ಸ್‌ ವೈಫಲ್ಯ

ಟೀಮ್ ಇಂಡಿಯಾದ ಪರ ಯಾವೊಬ್ಬ ಬ್ಯಾಟರ್‌ ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಈ ವೇಳೆ ಟೀಮ್ ಇಂಡಿಯಾದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ನಿರಾಸೆ ಅನುಭವಿಸಿದರು. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಅಭಿಷೇಕ್‌ ಶರ್ಮಾ ನಿರಾಸೆ ಅನುಭವಿಸಿದರು. ಆರಂಭಿಕರಾದ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ದೊಡ್ಡ ಜೊತೆಯಾಟ ನೀಡಲಿಲ್ಲ. ಇನ್ನು ಸೂರ್ಯಕುಮಾರ್ ಯಾದವ್ ಸಹ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಸೂರ್ಯ ಹಾಗೂ ತಿಲಕ 39 ರನ್‌ಗಳ ಜತೆಯಾಟದ ಕಾಣಿಕೆ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆದ ಧ್ರುವ್ ಜುರೇಲ್‌, ಹಾರ್ದಿಕ್ ಪಾಂಡ್ಯ, ಉಪನಾಯಕ ಅಕ್ಷರ್‌ ಪಟೇಲ್‌ ರನ್‌ ಕಲೆ ಹಾಕುವಲ್ಲಿ ವಿಫಲರಾದರು. 6ನೇ ವಿಕೆಟ್‌ಗೆ ವಾಶಿಂಗ್ಟನ್‌ ಸುಂದರ್ ಹಾಗೂ ತಿಲಕ್ ಜೋಡಿ 28 ಎಸೆತಗಳಲ್ಲಿ 38 ರನ್‌ ಸಿಡಿಸಿದರು.

India Clinches Thrilling Two-Wicket Win Over England in Chennai Takes 2-0 Series Lead

ತಿಲಕ ವರ್ಮಾ ಆರ್ಭಟ

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ತಿಲಕ್‌ ಅಮೋಘ ಬ್ಯಾಟಿಂಗ್ ಮಾಡಿದರು. ಇವರು 55 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 72 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಕೊನೆಯ ವರೆಗೂ ಧೃತಿ ಗೆಡದೆ ಕಚ್ಚದೆಯ ಬ್ಯಾಟಿಂಗ್ ಮಾಡಿದ ತಿಲಕ, ಭಾರತಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಇಂಗ್ಲೆಂಡ್‌ ಪರ ಬ್ರೈಡನ್ ಕಾರ್ಸೆ ಮೂರು ವಿಕೆಟ್‌ ಪಡೆದರು.

India Clinches Thrilling Two-Wicket Win Over England in Chennai Takes 2-0 Series Lead

ಇಂಗ್ಲೆಂಡ್ ತಂಡದ ಪರ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ನಿರಾಸೆ ಅನುಭವಿಸಿದರು. ಆರಂಭಿಕರಾದ ಫಿಲ್ ಸಾಲ್ಟ್‌, ಬೆನ್ ಡಕೆಟ್‌ ನಿರಾಸೆ ಅನುಭವಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಜೇಮ್ ಸ್ಮಿತ್‌ 22, ಬ್ರೈಡನ್ ಕಾರ್ಸೆ 31 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದಂತೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 30 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ ಸೇರಿದಂತೆ 45 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ ತಲಾ ಎರಡು ವಿಕೆಟ್‌ ಕಬಳಿಸಿದರು.

Story first published: Saturday, January 25, 2025, 22:37 [IST]
Other articles published on Jan 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+