Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Under-19 Women's T20 Asia Cup: ಫೈನಲ್‌ನಲ್ಲಿ ಭಾರತಕ್ಕೆ 41 ರನ್ ಜಯ

ಮಲೇಷ್ಯಾದ ಕೌಲಾಲಂಪುರ್‌ದಲ್ಲಿ ನಡೆದ ಅಂಡರ್‌19 ಏಷ್ಯಾ ಕಪ್‌ ಮಹಿಳೆಯರ ಟಿ20 ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ನಿಕಿ ಪ್ರಸಾದ ಅವರ ಮುಂದಾಳತ್ವದ ತಂಡ ಬಾಂಗ್ಲಾದೇಶ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಹತ್ವದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಗೊಂಗಡಿ ತ್ರಿಷಾ ಜಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರು ಟೂರ್ನಿಯಲ್ಲಿ ನೀಡಿದ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಸಹ ಲಭಿಸಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 117 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 18.3 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಯಿತು.

India Clinches Under-19 Asia Cup Women s T20 Title with Dominant Win Over Bangladesh

ತ್ರಿಷಾ ಅರ್ಧಶತಕ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಆಟಗಾರ್ತಿ ಜಿ ಕಮಲಿನಿ ಹಾಗೂ ಸನಿಕಾ ಚಲ್ಕೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ ಗೆ ಗೊಂಗಡಿ ತ್ರಿಷಾ ಹಾಗೂ ನಿಕಿ ಪ್ರಸಾದ್ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 41 ರನ್‌ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿತು. ನಂತರ ಬಂದ ಈಶ್ವರಿ ಸಹ ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು.

ಟೀಮ್ ಇಂಡಿಯಾದ ಪರ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಭರವಸೆಯ ಆಟಗಾರ್ತಿ ಗೊಂಗಡಿ ತ್ರಿಷಾ 47 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಅಬ್ಬರಿಸಿದರು. ಬಾಂಗ್ಲಾದೇಶದ ಪರ ಫರ್ಜಾನಾ ಈಸ್ಮಿನ್ 4 ಹಾಗೂ ನಿಶಿತಾ ಅಕ್ಟರ್ ನಿಶಿ 2 ವಿಕೆಟ್‌ ಉರುಳಿಸಿದರು.

ಕಳಪೆ ಆರಂಭ

ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ಬಾಂಗ್ಲಾ ಬ್ಯಾಟರ್‌ಗಳು ಟೀಮ್ ಇಂಡಿಯಾದ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಇವರು ನೆಲಕಚ್ಚಿ ನಿಂತು ಬ್ಯಾಟ್‌ ಮಾಡುವಲ್ಲಿ ಹಿಂದೆ ಬಿದ್ದರು. ಟೀಮ್ ಇಂಡಿಯಾದ ಯುವ ಆಟಗಾರ್ತಿಯರು ಸರಿಯಾದ ಸ್ಥಳದಲ್ಲಿ ಅಚ್ಚು ಕಟ್ಟಾದ ದಾಳಿಯನ್ನು ಸಂಘಟಿಸಿ ಮಿಂಚಿದರು. ಫಹೋಮಿದಾ ಚೋಯಾ (18), ಜುವೈರಿಯಾ ಫೆರ್ಡೌಸ್ (22) ಟೀಮ್ ಇಂಡಿಯಾ ಬೌಲರ್‌ಗಳನ್ನು ಕೊಂಚ ಕಾಡಿದರು. ಉಳಿದ ಬ್ಯಾಟರ್‌ಗಳು ನಿರಾಸೆ ಅನುಭವಿಸಿದರು.

ಭಾರತದ ಪರ ಆಯುಶಿ ಶುಕ್ಲಾ 3.3 ಓವರ್‌ ಬೌಲ್ ಮಾಡಿ 17 ರನ್‌ ನೀಡಿ ಮೂರು ವಿಕೆಟ್ ಪಡೆದರು. ಉಳಿದಂತೆ ಪರುಣಿಕಾ ಸಿಸೋಡಿಯಾ, ಸೋನಮ್ ಯಾದವ್ ತಲಾ ಎರಡು ವಿಕೆಟ್‌ ಉರುಳಿಸಿದರು.

ಟೀಮ್ ಇಂಡಿಯಾ ಪ್ರಸಕ್ತ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಕಪ್ ಗೆಲ್ಲುವ ಫೆವರೀಟ್ ತಂಡ ಎಂದು ಪರಿಗಣಿಸಲಾಗಿತ್ತು. ಅದರಂತೆ ಪ್ರದರ್ಶನ ನೀಡಿದ ಯುವ ಪಡೆ ಅಬ್ಬರಿಸಿದೆ.

Story first published: Sunday, December 22, 2024, 14:10 [IST]
Other articles published on Dec 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+