Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG Test: 6 ರನ್‌ಗೆ 4 ವಿಕೆಟ್‌: ಟೀಮ್ ಇಂಡಿಯಾ 224 ರನ್‌ಗೆ ಆಲೌಟ್

ಓವಲ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ಎರಡನೇ ದಿನ ಆರಂಭವಾಗಿದೆ. ಆರಂಭದಲ್ಲೇ ಟೀಮ್ ಇಂಡಿಯಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಗುರುವಾರ ಟೀಮ್ ಇಂಡಿಯಾ 64 ಓವರ್‌ಗಳಲ್ಲಿ 6 ವಿಕೆಟ್‌ಗೆ 204 ರನ್‌ ಸೇರಿಸಿತ್ತು. ಮೊದಲ ಇನಿಂಗ್ಸ್‌ ಶುಕ್ರವಾರ ಮುಂದುವರೆಸಿದ ಭಾರತ, 224 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಕೇವಲ 20 ರನ್‌ ಹಾಗೂ 5.4 ಓವರ್‌ಗಳ ಅಂತರದಲ್ಲಿ ಉಳಿದ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ಗುರುವಾರ ಅರ್ಧಶತಕ ಬಾರಿಸಿದ್ದ ಕರುಣ್ ನಾಯರ್‌ 52 ರನ್‌ಗಳಿಂದ ಆಟ ಮುಂದುವರಿಸಿದರು. ಆದರೆ ಎರಡನೇ ದಿನ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇವರು ಮೊದಲ ದಿನದಾಟದಂತ್ಯಕ್ಕೆ ಸೇರಿಸಿದ್ದ ರನ್‌ಗೆ ಕೇವಲ 5 ರನ್‌ ಸೇರಿಸಿ ಕರುಣ್‌ ನಾಯರ್ ಔಟ್ ಆದರು. ಜೋಶ್ ಟಂಗ್‌ ಎಸೆತವನ್ನು ಎದುರಿಸುವಲ್ಲಿ ಕರುಣ್‌ ವಿಫಲರಾದರು. ಟಂಗ್ ಎಸೆದ ಎಸೆತ ಪುಟಿದ ಮೇಲೆ ತಿರುವು ಪಡೆದು, ಸ್ಟಂಪ್‌ ಮೇಲಿನಿಂದ ಬ್ಯಾಟರ್‌ ಕಡೆಗೆ ಸಾಗಿತು. ಆದರೆ ಈ ಚೆಂಡನ್ನು ಆಡುವಲ್ಲಿ ಮಿಸ್‌ ಆದ ಕರುಣ್‌ ಪ್ಯಾಡ್‌ಗೆ ಬಡಿಯಿತು. ಅಂಪೈರ್‌ ಔಟ್ ಎಂದು ತೀರ್ಪನ್ನು ನೀಡಿದರು.

India Collapses to 224 All Out on Day 2 of Fifth Test Against England Gus Atkinson Shines

ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದ ವಾಷಿಂಗ್ಟನ್‌ ಸುಂದರ್‌ ಇಲ್ಲದ ಹುಕ್‌ ಶಾಟ್ ಬಾರಿಸಲು ಹೋಗಿ ಡೀಪ್‌ ಸ್ಕ್ವೇರ್‌ ಲೆಗ್‌ನಲ್ಲಿ ನಿಂತದ್ದ ಓವರ್‌ಟನ್‌ಗೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಪೆಟ್ಟು ಬಿದ್ದಿತು.

6 ರನ್‌ಗೆ 4 ವಿಕೆಟ್‌

ಬೌಲರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಮೊದಲಾವಧಿಯಲ್ಲಿ ಬ್ಯಾಟಿಂಗ್ ಮಾಡುವುದು ನಿಜಕ್ಕೂ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಸವಾಲೇ ಆಗಿತ್ತು. ಈ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ವಿಫಲರಾದರು. ಪುಟಿದು ಚಲನೆ ಕಾಣುತ್ತಿದ್ದ ಚೆಂಡನ್ನು ಗುರುತಿಸುವಲ್ಲಿ ವಿಫಲರಾದರ ಬ್ಯಾಟರ್‌ಗಳು ನಿರಾಸೆ ಅನುಭವಿಸಿದರು. ಒಂದು ಹಂತದಲ್ಲಿ ಭಾರತ 66.4 ಓವರ್‌ಗಳಲ್ಲಿ 218 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು. ಆದರೆ 69.4 ಓವರ್‌ ಆಗುಷ್ಟರಲ್ಲಿ ಟೀಮ್ ಇಂಡಿಯಾ 224 ರನ್‌ಗಳಿಗೆ ಆಲೌಟ್ ಆಯಿತು.

ಗಸ್ ಅಟ್ಕಿನ್ಸನ್ ಪಂತ್‌

ಇಂಗ್ಲೆಂಡ್‌ ತಂಡದ ಭವಸೆಯ ಬೌಲರ್‌ ಗಸ್ ಅಟ್ಕಿನ್ಸನ್ ಅಬ್ಬರಿಸಿದರು. ಇವರು 21.4 ಓವರ್ ಬೌಲಿಂಗ್ ಮಾಡಿ 33 ರನ್‌ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಬಾರಿಗೆ 5 ವಿಕೆಟ್‌ ಗೊಂಚಲು ಪಡೆದ ಸಾಧನೆ ಮಾಡಿದರು. ಜೋಶ್‌ ಟಂಗ್‌ ಮೂರು ವಿಕೆಟ್‌ ಕಬಳಿಸಿ ಮಿಂಚಿದರು.

Story first published: Friday, August 1, 2025, 16:20 [IST]
Other articles published on Aug 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+