Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು; ಶ್ರೇಯಸ್‌ ಅಯ್ಯರ್‌ ಹೆಸರಿಗೆ ಬೇಡದ 5 ದಾಖಲೆ

ಭಾರತ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಆಡಲಾದ 4 ಟಿ20 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶ ರಹಿತವಾಗಿತ್ತು. ಆದರೆ ಮುಂದಿನ ಮೂರು ಟಿ20 ಪಂದ್ಯಗಳಲ್ಲೂ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಿದ್ದು, ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಜಯ ದಾಖಲಿಸಿ ಗೌರವ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಭರ್ಜರಿ ಪ್ರದರ್ಶನ ನೀಡಿ 9 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಇಂಗ್ಲೆಂಡ್ ಜಯ ಸಾಧಿಸಿತ್ತು. ಶ್ರೇಯಸ್‌ ಅಯ್ಯರ್ ತಮ್ಮ ನಾಯಕತ್ವದಲ್ಲಿ ಮೊದಲ ಗೆಲುವಿನ ನಗೆ ಬೀರುವ ಆಸೆ ಮತ್ತೆ ಮುಂದಿನ ಪಂದ್ಯಕ್ಕೆ ಶಿಫ್ಟ್ ಆಗಿದೆ.

India

ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ನಿರಾಸೆ ಅನುಭವಿಸಿದೆ. ಈ ವೇಳೆ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬೇಡದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಈ ಮೂಲಕ ಶ್ರೇಯಸ್ ಬೇಡದ ದಾಖಲೆ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ ಸತತ ಐದು ಸೋಲು ಕಂಡಿರುವ ಮೊದಲ ನಾಯಕ ಎಂಬ ದಾಖಲೆ ಇವರದ್ದಾಗಿದೆ. ಇವರಿಗಿಂತಲೂ ಮೊದಲು ಧೋನಿ ಅವರು 2009 ಹಾಗೂ 2014ರಲ್ಲಿ ಸತತ 4 ಪಂದ್ಯಗಳಲ್ಲಿ ಸೋಲು ಕಂಡಿದ್ದರು. ಈಗ ಈ ದಾಖಲೆಯನ್ನು ಶ್ರೇಯಸ್ ಅಯ್ಯರ್ ಅಳಿಸಿ ಹಾಕಿದ್ದಾರೆ.

ಭಾರತದ ಪರ ಕಳಪೆ ಆರಂಭ ಮಾಡಿದ ನಾಯಕ

ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ಹಿಡಿದ ಶ್ರೇಯಸ್‌ ಅಯ್ಯರ್ ತಮ್ಮ ನಾಯಕತ್ವದಲ್ಲಿ ಐರ್ಲೆಂಡ್‌ ವಿರುದ್ಧ ಇತಿಹಾಸದಲ್ಲಿ ಮೊದಲ ಬಾರಿಗೆ ಸೋಲು ಕಂಡಿದ್ದು ಅಲ್ಲದೆ ಸರಣಿ ಕೈ ಚೆಲ್ಲಿದೆ. ಅಲ್ಲದೆ ಇಂಗ್ಲೆಂಡ್‌ನಲ್ಲಿ ಜಯಕ್ಕಾಗಿ ಪರದಾಟ ನಡೆಸಿದೆ. ಆಡಿದ ಐದು ಪಂದ್ಯಗಳಲ್ಲಿ ಒಂದೇ ಒಂದು ಗೆಲುವ ದಾಖಲಿಸಿದ ಕಳಪೆ ದಾಖಲೆ ಶ್ರೇಯಸ್ ಪಾಲಾಗಿದೆ.

India

ಭಾರತ ಬ್ಯಾಕ್‌ ಟು ಬ್ಯಾಕ್‌ ಸರಣಿ ಸೋಲು

ಐರ್ಲೆಂಡ್‌ನಲ್ಲಿ 0-2 ರಿಂದ ಐತಿಹಾಸಿಕ ಸರಣಿ ಸೋಲಿನ ಬಳಿಕ ಭಾರತ, ಇಂಗ್ಲೆಂಡ್ ಪ್ರವಾಸದಲ್ಲೂ ಇಂತಹದ್ದೇ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದೆ. ಈ ಮೂಲಕ ಏಳು ವರ್ಷಗಳ ಬಳಿಕ ಭಾರತ ಸತತ ಎರಡು ದ್ವಿಪಕ್ಷೀಯ ಸರಣಿಗಳನ್ನು ಕೈ ಚೆಲ್ಲಿದೆ. ಇದಕ್ಕೂ ಮೊದಲು ವಿರಾಟ್‌ ಕೊಹ್ಲಿ ಅವರ ನಾಯಕತ್ವದಲ್ಲಿ ಭಾರತ ನ್ಯೂಜಿಲೆಂಡ್‌ (1-2) ಹಾಗೂ ಆಸ್ಟ್ರೇಲಿಯಾ (0-2) ವಿರುದ್ಧ ಸತತ ಎರಡು ಸರಣಿಗಳನ್ನು ಕಂಡಿತ್ತು.

IND vs ENG: ಶ್ರೇಯಸ್ ಅಯ್ಯರ್ ಪಡೆಗೆ ಸರಣಿ ಸೋಲು: ಇಂಗ್ಲೆಂಡ್‌ಗೆ 9 ವಿಕೆಟ್‌ ಜಯ

IND vs ENG: ಶ್ರೇಯಸ್ ಅಯ್ಯರ್ ಪಡೆಗೆ ಸರಣಿ ಸೋಲು: ಇಂಗ್ಲೆಂಡ್‌ಗೆ 9 ವಿಕೆಟ್‌ ಜಯ

ಎರಡನೇ ಕನಿಷ್ಠ ಮೊತ್ತ ಕಲೆ ಹಾಕಿದ ಭಾರತ

ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 125 ರನ್‌ಗಳ ಸೋಲು ಕಾಣುತ್ತಿದ್ದಂತೆ ಈ ಅತಿ ದೊಡ್ಡ ಸೋಲು ಕಂಡ ದಾಖಲೆ ಬರೆಯಿತು. ಈ ಪಂದ್ಯದಲ್ಲಿ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 76 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಎರಡನೇ ಕನಿಷ್ಠ ಮೊತ್ತವನ್ನು ಪೇರಿಸಿತು. ಇದಕ್ಕೂ ಮೊದಲು ಭಾರತ 2008ರಲ್ಲಿ ಆಸೀಸ್‌ ವಿರುದ್ಧ 74 ರನ್‌ಗಳಿಗೆ ಆಲೌಟ್ ಆಗಿತ್ತು.

ಮೊದಲ ಬಾರಿಗೆ ಇಂಗ್ಲೆಂಡ್‌ ವಿರುದ್ಧ ಸರಣಿ ಸೋಲು

ಇಂಗ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾದ ಇದೆ ಮೊದಲು ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಸೋತಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ, ಇಂಗ್ಲೆಂಡ್‌ ವಿರುದ್ಧ 2014ರಲ್ಲಿ ನಡೆದದ್ದ ಏಕೈಕ ಪಂದ್ಯದಲ್ಲಿ ಸೋಲು ಕಂಡಿತ್ತು.

FIFA World Cup 2026: ಎಂಬಪ್ಪೆ ಮಿಂಚು; ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್‌

FIFA World Cup 2026: ಎಂಬಪ್ಪೆ ಮಿಂಚು; ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್‌

ಸತತ ಸರಣಿ ಸೋತ ಎರಡನೇ ಭಾರತೀಯ ನಾಯಕ

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಸರಣಿ ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್, ಸತತ ಎರಡು ಸರಣಿಗಳನ್ನು ಕೈ ಚೆಲ್ಲಿದ ಎರಡನೇ ನಾಯಕರಾಗಿದ್ದಾರೆ. ಇವರಿಗಿಂತಲೂ ಮೊದಲು ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ್ದರು.

Story first published: Friday, July 10, 2026, 14:45 [IST]
Other articles published on Jul 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+