Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾತ್ರಿ ಮುಷ್ತಾಕ್ ಟ್ರೋಫಿಗೆ ಮುತ್ತಿಕ್ಕಿ ಹಸೆಮಣೆಯೇರಿದ ಕರ್ನಾಟಕ ಕ್ಯಾಪ್ಟನ್

India cricketer Manish Pandey gets married to actress Ashrita Shetty in Mumbai

ಸೈಯದ್ ಮುಶ್ತಾಕ್ ಅಲಿ ಟೂರ್ನಿಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಟೂರ್ನಿ ಗೆಲ್ಲಲು ಕಾರಣವಾಗಿದ್ದ ನಾಯಕ ಮನೀಶ್ ಪಾಂಡೆ ಇಂದು ಜೀವನದ ಎರಡನೇ ಇನ್ನಿಂಗ್ಸ್‌ಗೆ ಕಾಲಿಟ್ಟಿದ್ದಾರೆ. ಕರ್ನಾಟಕ ತಂಡದ ನಾಯತ್ವ ವಹಿಸಿಕೊಂಡಿರುವ ಮನೀಶ್ ಪಾಂಡೆ ಇಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದ ನಟಿ ಆಶ್ರಿತಾ ಶೆಟ್ಟಿ ಅವರನ್ನು ಮನೀಶ್ ಪಾಂಡೆ ಇಂದು ವರಿಸಿದ್ದಾರೆ.

ಕಳೆದ ರಾತ್ರಿ ಸೂರತ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯ ನಡೆದಿತ್ತು. ರೋಚಕವಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ತಮಿಳುನಾಡು ತಂಡವನ್ನು ಕರ್ನಾಟಕ ಅಂತಿಮ ಎಸೆತದಲ್ಲಿ ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿತು. ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಮನೀಸ್ ಪಾಂಡೆ 60 ರನ್‌ಗಳಸಿ ತಂಡ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.

ಇದೇ 6ನೇ ತಾರೀಕಿಗೆ ಆರಂಭವಾಗಲಿರುವ ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಗೆ ಮನೀಸ್ ಪಾಂಡೆ ಆಯ್ಕೆಯಾಗಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆದ್ದ ಬಳಿಕ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಮನೀಶ್ ಪಾಂಡೆ ಮುಂದಿನ ದಿನಗಳಲ್ಲಿ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಅದಕ್ಕೂ ಮುನ್ನ ಮತ್ತೊಂದು ಸರಣಿ ನನ್ನ ಮುಂದಿದೆ. ನಾಳೆ ನಾನು ಮದುವೆಯಾಗಲಿದ್ದೇನೆ. ಎಲ್ಲವೂ ಚೆನ್ನಾಗಿ ನಡೆಯಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

26 ವರ್ಷದ ಆಶ್ರಿತಾ ಶೆಟ್ಟಿ ಮೂಲತಃ ಮಂಗಳೂರಿನವರಾಗಿದ್ದಾರೆ. ತಮಿಳು ಹಾಗು ತೆಲುಗು ಚಿತ್ರಗಳ ಮೂಲಕ ಆಶ್ರಿತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್‌ನಲ್ಲಿ ಪಾಲ್ಗೊಂಡ ನಂತರ ನಿನ್ನೆ ರಾತ್ರಿಯೇ ಮನೀಶ್ ಪಾಂಡೆ ಮುಂಬೈಗೆ ಆಗಮಿಸಿದ್ದರು. ರಾಷ್ಟ್ರೀಯ ತಂಡದ ಕೆಲ ಆಟಗಾರರು ಹಾಗೂ ದೇಸಿ ತಂಡದ ಗೆಳಯರು ಮನೀಶ್ ಪಾಂಡೆ ವಿವಾಹದಲ್ಲಿ ಭಾಗಿಯಾಗಿದ್ದಾರೆ.

ಮನೀಶ್ ಪಾಂಡೆ 23 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 32 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕ ಬಾರಿಸಿರುವ ಪಾಂಡೆ ಟಿ20 ಪಂದ್ಯಗಳಲ್ಲಿ ಎರಡು ಅರ್ಧ ಶತಕ ಬಾರಿಸಿದ್ದಾರೆ.

Story first published: Monday, December 2, 2019, 14:40 [IST]
Other articles published on Dec 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+