Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಓಮನ್‌ ವಿರುದ್ಧ ಭಾರತ ಗೋಲಿನ ಸುರಿಮಳೆ: 17-0 ಗೋಲುಗಳ ಅಂತರದ ಜಯ

ಚೆನ್ನೈ: ಎಫ್‌ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಬ್ಬರ ಮುಂದುವರೆಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತ 17-0 ಗೋಲುಗಳಿಂದ ಓಮನ್‌ ತಂಡವನ್ನು ಮಣಿಸಿದೆ. ಭಾರತದ ಪರ ಮೂವರು ಆಟಗಾರರು ಹ್ಯಾಟ್ರಿಕ್ ಸಾಧನೆ ಮಾಡಿ ಮಿಂಚಿದರು.

ಶನಿವಾರ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಮನ್ಮೀತ್ ಸಿಂಗ್ (17, 26, 36ನೇ ನಿಮಿಷ), ಅರ್ಷದೀಪ್ ಸಿಂಗ್ (4, 33, 40ನೇ ನಿಮಿಷ) ಮತ್ತು ದಿಲ್‌ರಾಜ್ ಸಿಂಗ್ (29, 32, 58ನೇ ನಿಮಿಷ) ಹ್ಯಾಟ್ರಿಕ್ ಗೋಲು ಗಳಿಸಿದರೆ, ಅನ್ಮೋಲ್ ಎಕ್ಕಾ (29ನೇ ನಿಮಿಷ), ಅಜೀತ್ ಯಾದವ್ (34, 47), ಗುರ್‌ಜೋತ್ ಸಿಂಗ್ (39, 45ನೇ ನಿಮಿಷ), ಲುವಾಂಗ್ (43, 50ನೇ ನಿಮಿಷ), ನಂದ್ ತಿವಾರ (55ನೇ ನಿಮಿಷ) ಗೋಲು ದಾಖಲಿಸಿ ಮಿಂಚಿದರು.

India Crushes Oman 17-0 in FIH Junior Hockey World Cup Three Players Score Hat-Tricks

ಓಮನ್‌ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಭಾರತ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ. ಪಂದ್ಯ ಆರಂಭವಾಗುತ್ತಿದ್ದಂತೆ ಅರ್ಷದೀಪ್‌ ತಮ್ಮ ಕ್ಲಾಸಿಕ್‌ ಕೈಚಳಕ ತೋರಿಸಿ ಎದುರಾಳಿ ಗೋಲಿಯನ್ನು ವಂಚಿಸಿದರು. ಈ ಮೂಲಕ ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಅವಧಿಯ ಆರಂಭದಲ್ಲಿ ಮನ್ಮೀತ್‌ ಸಹ ಸೊಗಸಾದ ಆಟದ ಪ್ರದರ್ಶನ ನೀಡಿ ಗೋಲು ಬಾರಿಸಿದರು. ಇದೇ ಅವಧಿಯಲ್ಲಿ ದಿಲ್‌ ರಾಜ್‌, ಅನ್ಮೋಲ್‌ ಗೋಲು ಸಿಡಿಸಿ ಅಂತರವನ್ನು 5-0ಗೆ ಏರಿಸಿಕೊಂಡರು.

ಗೋಲು ಸುರಿಮಳೆ

ಮೂರನೇ ಅವಧಿಯ ಆಟದಲ್ಲಿ ನಿಜಕ್ಕೂ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿತ್ತು. ಮೂರನೇ ಅವಧಿಯಲ್ಲಿ ಭಾರತ 5 ನಿಮಿಷದ ಅಂತರದಲ್ಲಿ 4 ಗೋಲು ಬಾರಿಸಿತು. ಇದರಲ್ಲಿ ಮನ್ಮೀತ್ ಸಿಂಗ್ ಬಾರಿಸಿದ ಹ್ಯಾಟ್ರಿಕ್ ಸಹ ಸೇರಿತ್ತು. ಇದೇ ವೇಳೆ ಅರ್ಷದೀಪ್‌ ಹಾಗೂ ಧಿರಜ್ ಸಹ 2 ಗೋಲು ಸಿಡಿಸಿದರು. ಭಾರತದ ಕೊನೆಯ ಅವಧಿಯ ಆಟದಲ್ಲೂ 5 ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿಕೊಂಡಿತು. ಈ ಅವಧಿಯಲ್ಲಿ ಓಮನ್‌ಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

Story first published: Saturday, November 29, 2025, 23:38 [IST]
Other articles published on Nov 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+