Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಭಾರತ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಎಂಟ್ರಿ

ಭಾರತ, ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಜಯ ದಾಖಲಿಸಿದೆ. ಈ ಮೂಲಕ 2023ರ ನವೆಂಬರ್‌ 19 ರಂದು ಅಹಮದಾಬಾದ್‌ನಲ್ಲಿ ಕಂಡಿದ್ದ ಸೋಲಿಗೆ, ಸೇಡು ತೀರಿಸಿಕೊಂಡಿದೆ. ಟೀಮ್ ಇಂಡಿಯಾದ ಸಂಘಟಿತ ಆಟದ ಪರಿಣಾಮ ಭಾರತ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಅರ್ಹತೆ ಪಡೆದಿದೆ. ಭಾರತ ತಂಡ ಫೈನಲ್‌ಗೆ ಪ್ರವೇಶ ಪಡೆದಿದ್ದರಿಂದ ಚಾಂಪಿಯನ್ಸ್‌ ಟ್ರೋಫಿಯ ಫೈನಲ್ ಪಂದ್ಯ ನಡೆಯಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 48.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 267 ರನ್‌ ಕಲೆ ಹಾಕಿ ಜಯ ಸಾಧಿಸಿತು.

India Defeats Australia to Reach Champions Trophy 2025 Final

ಆಸ್ಟ್ರೇಲಿಯಾ ನೀಡಿದ 265 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಕಳಪೆಯಾಗಿತ್ತು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (28), ಶುಭ್‌ಮನ್‌ ಗಿಲ್‌ (8) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. 2 ವಿಕೆಟ್‌ಗಳನ್ನು 43 ರನ್‌ಗಳಿಗೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್‌ ಜೋಡಿ ಆಧಾರವಾಯಿತು. ಈ ಜೋಡಿಯನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಬೌಲರ್‌ಗಳು ವಿಫಲರಾದರು.

ಭರ್ಜರಿ ಜೊತೆಯಾಟ

ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಮೂರನೇ ವಿಕೆಟ್‌ಗೆ 111 ಎಸೆತಗಳಲ್ಲಿ 91 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ಶ್ರೇಯಸ್ ಅಯ್ಯರ್‌ 45 ರನ್‌ ಬಾರಿಸಿ ಜಂಪಾ ಎಸೆತದಲ್ಲಿ ಬೋಲ್ಡ್ ಆದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಕ್ಷರ್ ಪಟೇಲ್ (27) ಹಾಗೂ ವಿರಾಟ್ ಕೊಹ್ಲಿ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನಡೆಸಿತು. ಈ ಜೊಡಿ 52 ಎಸೆತಗಳಲ್ಲಿ 44 ರನ್‌ ಸೇರಿಸಿತು.

ವಿರಾಟ್ ಅಬ್ಬರ

ಐದನೇ ವಿಕೆಟ್‌ಗೆ ಕನ್ನಡಿಗ ಕೆಎಲ್ ರಾಹುಲ್‌ ಅವರು ವಿರಾಟ್ ಕೊಹ್ಲಿ ಅವರಜೊತೆಗೂಡಿ ಉತ್ತಮ ಆಟವನ್ನು ಆಡಿತು. ಈ ಜೋಡಿ 46 ಎಸೆತಗಳಲ್ಲಿ 47 ರನ್‌ ಸೇರಿಸಿತು. ಈ ವೇಳೆ ವಿರಾಟ್ ಕೊಹ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ಇವರು 98 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 84 ರನ್‌ ಸಿಡಿಸಿ ಅಬ್ಬರಿಸಿದರು. ಇವರು ಆಸ್ಟ್ರೇಲಿಯಾ ವಿರುದ್ಧ 16ನೇ ಅರ್ಧಶತಕ ಬಾರಿಸಿದರು.

India Defeats Australia to Reach Champions Trophy 2025 Final

ಒತ್ತಡದ ಸನ್ನಿವೇಶದಲ್ಲಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕೆಎಲ್ ರಾಹುಲ್ ಅಜೇಯ 42 ರನ್‌ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಹಾರ್ದಿಕ್ ಪಾಂಡ್ಯ 1 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 28 ರನ್‌ ಸಿಡಿಸಿ ಅಬ್ಬರಿಸಿದರು. ಟೀಮ್ ಇಂಡಿಯಾ ಇನ್ನು 11 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ ಗಳಿಂದ ಪಂದ್ಯವನ್ನು ಗೆದ್ದಿತು.

ಸ್ಮಿತ್, ಅಲೆಕ್ಸ್‌ ಅರ್ಧಶತಕ

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟೀವನ್‌ ಸ್ಮಿತ್‌ 73 ಹಾಗೂ ಅಲೆಕ್ಸ್‌ ಕ್ಯಾರಿ 61 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಭಾರತದ ಪರ ಮೊಹಮ್ಮದ್ ಶಮಿ 3, ವರುಣ್‌ ಚಕ್ರವರ್ತಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಕಬಳಿಸಿದರು.

Story first published: Tuesday, March 4, 2025, 21:39 [IST]
Other articles published on Mar 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+