For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಿಂದ ಇಂಗ್ಲೆಂಡ್‌ಗೆ ಹೊರ ದಬ್ಬಿದ ಭಾರತ ಫೈನಲ್‌ಗೆ: ಆರ್‌ಸಿಬಿ ಪ್ಲೇಯರ್ ಏಕಾಂಗಿ ಹೋರಾಟ

ಮುಂಬೈ: ಸಂಘಟಿತ ಆಟದ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಪಡೆ 7 ರನ್‌ಗಳಿಂದ ಪಂದ್ಯವನ್ನು ಗೆದ್ದು, ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಟೀಮ್ ಇಂಡಿಯಾ 4ನೇ ಬಾರಿಗೆ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದಿದೆ. ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಭರವಸೆಯ ಆಟಗಾರ ಜಾಕಬ್ ಬೆಥೆಲ್‌ ಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಟಿ20 ವಿಶ್ವಕಪ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಪರದಾಟ ನಡೆಸಿದ್ದ ಅಭಿಷೇಕ್‌ ಶರ್ಮಾ 2 ಬೌಂಡರಿ ನೆರವಿನಿಂದ ಕೇವಲ 9 ರನ್ ಬಾರಿಸಿ ಔಟ್ ಆದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಇವರ ರನ್‌ ಬರ ಮುಂದುವರಿದಿದೆ. 20 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ ಆಧಾರವಾದರು.

India

ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌ ಹಾಗೂ ಇಶಾನ್ ಕಿಶನ್‌ 45 ಎಸೆತಗಳಲ್ಲಿ 87 ರನ್‌ ಸೇರಿಸಿತು. ಈ ವೇಳೆ ಇಶಾನ್ ಕಿಶನ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್‌ ಸೇರಿಸಿ ಔಟ್ ಆದರು.

ಸಂಜು ಆರ್ಭಟ

ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್‌ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರೆಸಿದರು. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ರೀತಿಯಲ್ಲಿ ಬ್ಯಾಟ್ ಮಾಡಿದ ಸಂಜು 211ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು. ಇವರು 8 ಬೌಂಡರಿ, 7 ಸಿಕ್ಸರ್‌ ನೆರವಿನಿಂದ 89 ರನ್‌ ಸಿಡಿಸಿ ಔಟ್ ಆದರು. ಇವರು ಟಿ20 ವಿಶ್ವಕಪ್‌ನಲ್ಲಿ ಬ್ಯಾಕ್‌ ಟು ಬ್ಯಾಕ್ ಅರ್ಧಶತಕ ಬಾರಿಸಿದರು.

Sanju Samson: ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್‌Sanju Samson: ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್‌

ಆಲ್‌ರೌಂಡರ್ ಶಿವಂ ದುಬೆ 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 43 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್‌ ಬಾರಿಸಿದರು. ತಿಲಕ್ ವರ್ಮಾ ಕೇವಲ 7 ಎಸೆತಗಳಲ್ಲಿ 3 ಸಿಕ್ಸರ್ ಸಹಾಯದಿಂದ 21 ರನ್‌ ಬಾರಿಸಿ ಆರ್ಭಟಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 253 ರನ್‌ ಸಿಡಿಸಿತು.

ಜಾಕಬ್ ಏಕಾಂಗಿ ಹೋರಾಟ

ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್ ಸಾಲ್ಟ್‌ (5), ನಾಯಕ ಹ್ಯಾರಿ ಬ್ರೂಕ್‌ (7) ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಇಂಗ್ಲೆಂಡ್ ತಂಡ 38 ರನ್‌ ಸೇರಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿತು. ಭರವಸೆಯ ಆರಂಭಿಕ ಆಟಗಾರ ಜೋಸ್ ಬಟ್ಲರ್ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 25 ರನ್ ಬಾರಿಸಿ ವರುಣ್ ಚಕ್ರವರ್ತಿ ಎಸೆತದಲ್ಲಿ ಔಟ್ ಆದರು.

Finn Allen ಆಟ ಕಂಡು ಐಪಿಎಲ್‌ನಲ್ಲಿ ಈ ತಂಡದ ಫ್ಯಾನ್ಸ್‌ ಫುಲ್‌ ಖುಷ್‌.. Finn Allen ಆಟ ಕಂಡು ಐಪಿಎಲ್‌ನಲ್ಲಿ ಈ ತಂಡದ ಫ್ಯಾನ್ಸ್‌ ಫುಲ್‌ ಖುಷ್‌..

ಮಧ್ಯಮ ಕ್ರಮಾಂಕದಲ್ಲಿ ಟಾಮ್ ಬ್ಯಾಂಟನ್ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 17 ರನ್‌ ಸಿಡಿಸಿದರು. ಐದನೇ ವಿಕೆಟ್‌ಗೆ ವಿಲ್ ಜಾಕ್ಸ್ ಹಾಗೂ ಜಾಕಬ್‌ ಬೆಥೆಲ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 39 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ವಿಲ್ ಜಾಕ್ಸ್‌ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 35 ರನ್‌ ಸಿಡಿಸಿ ಔಟ್ ಆದರು.

ಜಾಕಬ್ ಬೆಥೆಲ್‌ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡದ ಪರ ಗೆಲುವಿನ ಆಸೆಯನ್ನು ಚಿಗುರಿಸಿದರು. ಇವರು 48 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ ಸಹಾಯದಿಂದ 105 ರನ್‌ ಸಿಡಿಸಿ ಆರ್ಭಟಿಸಿದರು. ಐಪಿಎಲ್‌ನಲ್ಲಿ ಜಾಕಬ್‌ ಬೆಥೆಲ್‌ ಆರ್‌ಸಿಬಿ ಪರ ಆಡಲಿದ್ದಾರೆ. ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 246 ರನ್‌ ಸಿಡಿಸಿ ಸೋಲು ಕಂಡಿತು.

Story first published: Thursday, March 5, 2026, 23:01 [IST]
Other articles published on Mar 5, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+