Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's Emerging Asia Cup: ಲಂಕಾ ಮಣಿಸಿ ಭಾರತ ಫೈನಲ್‌ಗೆ

ನಾಯಕಿ ರಾಧಾ ಯಾದವ್ ಅವರ ಭರ್ಜರಿ ಆಲ್‌ರೌಂಡರ್ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಮಹಿಳಾ ಏಷ್ಯಾ ಕಪ್ ಉದಯೋನ್ಮುಖ ಸ್ಟಾರ್ಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ.

119 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಸಾಧಾರಣವಾಗಿತ್ತು. ನಂದೀನಿ ಕಶ್ಯಪ್ (13) ಹಾಗೂ ದಿನೇಶ್ ವೃಂದಾ ಜೋಡಿ ಮೊದಲ ವಿಕೆಟ್‌ಗೆ 30 ರನ್‌ಗಳಿಸಿತು. ಎರಡನೇ ವಿಕೆಟ್‌ಗೆ ದಿನೇಶ್ ಹಾಗೂ ಅನುಷ್ಕಾ ಶರ್ಮಾ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಜೋಡಿ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಸೊಗಸಾಗಿ ಬ್ಯಾಟಿಂಗ್ ಮಾಡುತ್ತಿದ್ದ ದಿನೇಶ್‌ 42 ರನ್‌ಗಳಿಗೆ ಔಟ್ ಆದರು. ಇವರು 210ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿ ಮಿಂಚಿದರು.

india

ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ್ತಿ ಅನುಷ್ಕಾ ಶರ್ಮಾ ಆಟ 27 ರನ್‌ಗಳಿಗೆ ಕೊನೆಯಾಯಿತು. ಈ ವೇಳೆ ಇವರು 5 ಬೌಂಡರಿ ಸಿಡಿಸಿದರು. ನಾಯಕಿ ರಾಧಾ ಯಾದವ್ ಜವಾಬ್ದಾರಿಗೆ ತಕ್ಕ ಆಟವನ್ನು ಆಡಿದರು. ಅಲ್ಲದೆ 18 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 31 ರನ್‌ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಭಾರತ 13.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಅಗತ್ಯ ರನ್ ಕಲೆ ಹಾಕಿ ಮಿಂಚಿತು.

ಟಾಸ್‌ ಗೆದ್ದ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಸಾಧಾರಣವಾಗಿತ್ತು. ಮೊದಲ ವಿಕೆಟ್‌ಗೆ ಹನ್ಸಿಮಾ ಕರುಣಾರತ್ನೆ (14) ಹಾಗೂ ಸಂಜನಾ ಕವಿಂದಿ ಜೋಡಿ 36 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಆಟಗಾರ ಸಂಜನಾ ಕವಿಂದಿ ಲಂಕಾ ತಂಡದ ಪರ ಗರಿಷ್ಠ ರನ್‌ ಬಾರಿಸಿದ ಸಾಧನೆ ಮಾಡಿದರು. ಇವರು 31 ರನ್ ಬಾರಿಸಿದರು. ಸತ್ಯ ಸಂದೀಪನಿ (15), ಶಶಿನಿ ಗಿಮ್ಹಾನಿ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 22 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಉಳಿದ ಬ್ಯಾಟರ್‌ಗಳು ಟೀಮ್ ಇಂಡಿಯಾದ ಬಿಗುವಿನ ದಾಳಿಯ ಮುಂದೆ ನೆಲಕಚ್ಚಿ ಬ್ಯಾಟ್ ಮಾಡಲಿಲ್ಲ. ಅಂತಿಮವಾಗಿ ಲಂಕಾ 19.4 ಓವರ್‌ಗಳಲ್ಲಿ 118 ರನ್‌ ಸೇರಿಸಿತು.

ರಾಧಾ ಯಾದವ್ ಅಬ್ಬರ

ನಾಯಕಿ ರಾಧಾ ಯಾದವ್ ಬಿಗುವಿನ ದಾಳಿ ನಡೆಸ ಗಮನ ಸೆಳೆದರು. ಇವರು 3.4 ಓವರ್‌ ಬೌಲ್ ಮಾಡಿ 19 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಉಳಿದಂತೆ ತನುಜಾ ಕನ್ವರ್‌ ಹಾಗೂ ಪ್ರೇಮಾ ರಾವತ್ ತಲಾ 2 ವಿಕೆಟ್ ಉರುಳಿಸಿದು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸೊಗಸಾದ ಆಟವನ್ನು ಅಡಿದ ರಾಧಾ ಯಾದವ್ ಅವರಿಗೆ ಪಂದ್ಯ ಶ್ರೇಷ್ಠ ಗರಿ ಸಂದಿತು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಭಾರತ ಫೆಬ್ರವರಿ 22 ರಂದು ಫೈನಲ್ ಪಂದ್ಯವನ್ನು ಆಡಲಿದೆ.

Story first published: Friday, February 20, 2026, 15:19 [IST]
Other articles published on Feb 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+