Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೆದ್ದೇ ಗೆಲ್ಲುತ್ತೇವೆಂದು ಬೀಗುತ್ತಿರೋ ಭಾರತಕ್ಕೆ ಆ್ಯರನ್ ಫಿಂಚ್ ತಿರುಗೇಟು!

India dominant, but we are confident in this format - Aaron Finch

ಸಿಡ್ನಿ, ನವೆಂಬರ್ 20: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಸುಲಭವಾಗಿ ವಶಪಡಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿ ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಆಸೀಸ್ ನಾಯಕ ಆ್ಯರನ್ ಫಿಂಚ್ ತಿರುಗೇಟು ನೀಡಿದ್ದಾರೆ. ಅವರು (ಭಾರತ) ಪಾರಮ್ಯ ಮೆರೆಯಬಹುದು, ಆದರೆ ಈ ಮಾದರಿಯಲ್ಲಿ ಮಾತ್ರ ನಮಗೆ ಸಂಪೂರ್ಣ ಭರವಸೆಯಿದೆ ಎಂದು ಫಿಂಚ್ ಹೇಳಿದ್ದಾರೆ.

ಮಂಗಳವಾರ (ನವೆಂಬರ್ 20) ಮಾತನಾಡಿರುವ ನಾಯಕ ಫಿಂಚ್, ಆಸ್ಟ್ರೇಲಿಯಾದ ಮುಂಚೂಣಿಯ ಬ್ಯಾಟ್ಸ್ಮನ್ ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅನುಪಸ್ಥಿತಿಯ ಹೊರತಾಗಿಯೂ ನಾವು ಭಾರತವನ್ನು ಸೋಲಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಸ್ಮಿತ್, ವಾರ್ನರ್ ಹೊರತಾಗಿಯೂ ಟಿ20 ಕ್ರಿಕೆಟ್ ಗೆ ಸೂಕ್ತರೆನಿಸುವ ಬ್ಯಾಟ್ಸ್ಮನ್ ಗಳು ಆಸೀಸ್ ತಂಡದಲ್ಲಿದ್ದಾರೆ. ಇದನ್ನೇ ಉಲ್ಲೇಖಿಸಿ ಫಿಂಚ್ ಮಾತನಾಡಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಸವಾಲು ಸ್ವೀಕರಿಸಲು, ಭಾರತವನ್ನು ಹಿಮ್ಮೆಟ್ಟಿಸಲು ಆಸ್ಟ್ರೇಲಿಯಾಕ್ಕಿದು ಅಪೂರ್ವ ಅವಕಾಶ ಎಂದು ಆ್ಯರನ್ ಹೇಳಿದರು.

'ಯುಎಇಯಲ್ಲಿ ನಾವು ಪಾಕಿಸ್ತಾನ ವಿರುದ್ಧ ಸೋತಿದ್ದೇವೆ. ಆದರೂ ನಾನು ಈಗಲೂ ಹೇಳುತ್ತೇನೆ; ನಾವು ಟಿ20 ಮಾದರಿಯಲ್ಲಿ ಉತ್ತಮವಾಗಿದ್ದೇವೆ. ಜಿಂಬಾಬ್ವೆ ಎದುರೂ ನಾವು ಉತ್ತಮ ಪ್ರದರ್ಶನ ನೀಡಿದ್ದಾಗಿ ನಾನು ಭಾವಿಸುತ್ತೇನೆ. ಈ ಮಾದರಿಯಲ್ಲಿ ನಮಗಂತೂ ಸಂಪೂರ್ಣ ಭರವಸೆಯಿದೆ' ಎಂದು ಫಿಂಚ್ ತಿಳಿಸಿದರು.

'ಬಹಳ ಕಾಲದಿಂದಲೂ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ಉತ್ತಮವಾಗಿದೆ. ಆದರೆ ನಮ್ಮ ಮರಳುವಿಕೆಯನ್ನು ಜಗತ್ತಿಗೆ ತೋರಿಸಲು ಇದೊಂದು ಅಪೂರ್ವ ಅವಕಾಶ ಎಂದು ನಾವಂದುಕೊಂಡಿದ್ದೇವೆ. ಹೀಗಾಗಿ ಟಿ20ಯಲ್ಲಿ ನಮ್ಮನ್ನು ನಾವು ಆಕ್ರಮಣಕಾರಿಯಾಗಿ ಗುರುತಿಸಿಕೊಳ್ಳಲು ಬಯಸಿದ್ದೇವೆ' ಎಂದು ಆ್ಯರನ್ ದಿಟ್ಟವಾಗೇ ನುಡಿದರು.

Story first published: Tuesday, November 20, 2018, 20:19 [IST]
Other articles published on Nov 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+